ಎನ್.ಎಸ್.ಎಸ್. ಶಿಬಿರದಿಂದ ಸಾಮರಸ್ಯ ಭಾವನೆ ಮೂಡುವುದು

ಚಿತ್ರದುರ್ಗ.ಜೂ.೧೮; ಗ್ರಾಮೀಣ ಪ್ರದೇಶಗಳಲ್ಲಿ ಎನ್.ಎಸ್.ಎಸ್ ಶಿಬಿರ ಆಯೋಜಿಸುವುದರಿಂದ ಶಿಬಿರಾರ್ಥಿಗಳಲ್ಲಿ ಸಾಮರಸ್ಯ, ಹೊಂದಾಣಿ ಮನೋಭಾವ ಮೂಡುವುದು ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಮತ್ತು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶಿವಾನಂದಯ್ಯ ಹೇಳಿದರು.ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕುರುಬರಹಳ್ಳಿ ಗ್ರಾಮದಲ್ಲಿ  ಆಯೋಜಿಸಲಾಗಿರುವ ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರದಲ್ಲಿ ಗುರುವಾರ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಎನ್.ಎಸ್.ಎಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ಶ್ರಮದಾನದ ಮಹತ್ವ ತಿಳಿಯುತ್ತದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಸನವಾಗಲು ನೆರವಾಗುತ್ತದೆ ಎಂದರು.ಶಿಬಿರದ ಅಂಗವಾಗಿ ಅಗ್ನಿ ಅನಾಹುತ ನಿರ್ವಹಣೆ ಕುರಿತು ಅಗ್ನಿಶಾಮಕ ಠಾಣಾಧಿಕಾರಿ ಮಹಲಿಂಗಪ್ಪ.ಜಿ  ಉಪನ್ಯಾಸ ನೀಡಿದರು. ಶಾಲೆಯ ಆವರಣದಲ್ಲಿ ಅಗ್ನಿಅನಾಹುತದ ಅಪಾಯಗಳನ್ನು ಎದುರಿಸುವ ಕ್ರಮಗಳ ಬಗ್ಗೆ  ಪ್ರಾತ್ಯಕ್ಷಿಕೆ ನೀಡಲಾಯಿತು.ಗ್ರಾ.ಪಂ.ಸದಸ್ಯ ಕೊಲ್ಲಮ್ಮ ದುರ್ಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಡಾ.ವಿ.ಪ್ರಸಾದ್ ಮತ್ತು  ಫ್ರೊ. ಅಶ್ವತ್ಥ,  ಫ್ರೊ.  . ಎಲ್.ನಾಗರಾಜಪ್ಪ,  ಫ್ರೊ. ರೇವಣಸಿದ್ಧಪ್ಪ,  ಫ್ರೊ. ಶ್ರೀನಿವಾಸ್, ದೀಪಕ್ ಡಿಸೋಜ, ರಾಮಪ್ಪ ಮುಂತಾದವರು ಉಪಸ್ಥಿತರಿದ್ದರು. ನಂತರ ಜುರುಗಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಕಿರು ನಾಟಕ, ನೃತ್ಯ, ಹಾಡು ಮುಂತಾದವುಗಳ ಮೂಲಕ ಶಿಬಿರಾರ್ಥಿಗಳು ಗ್ರಾಮಸ್ಥರನ್ನು ಮನರಂಜಿಸಿದರು.