ಎನ್ ಎಸ್ ಎಸ್ ಶಿಬಿರಕ್ಕೆ ಚಾಲನೆ

ಕಲಬುರಗಿ, ಮೇ.23: ‘ಸಮಾಜ ಜೀವಿಯಾದ ಮನುಷ್ಯ ಸಾಮಾಜಿಕ ಜವಾಬ್ದಾರಿಯನ್ನು ಅರಿತಾಗಲೇ ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯ’ ಎಂದು ಶ್ರೀ ಸ್ವಾಮಿ ಸಮರ್ಥ ದೇವಸ್ಥಾನದ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಶಿವಾನಂದ ಎ.ಗುಡ್ಡಾ ಅವರು ಹೇಳಿದರು.

  ಔರಾದ (ಬಿ) ಗ್ರಾಮದ ಶ್ರೀ ಸ್ವಾಮಿಸಮರ್ಥ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ನೂತನ ವಿದ್ಯಾಲಯ ಸಂಸ್ಥೆಯ ನೂ.ವಿ.ಪದವಿ ಮಹಾವಿದ್ಯಾಲಯದ 50 ವಿದ್ಯಾರ್ಥಿಗಳು ಒಳಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಬಿರಾರ್ಥಿಗಳು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಸಂವೇದನೆ ಹೊಂದಿರಬೇಕು, ಅದರಿಂದ ಸಶಕ್ತ ಸಮಾಜವನ್ನು ನಿರ್ಮಿಸಬಹುದು ಎಂದರು. 
  ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಡಾ.ಎನ್.ಜಿ.ಕಣ್ಣೂರ್ ಅವರು ರಾಷ್ಟ್ರೀಯ ಸೇವಾ ಯೋಜನೆ ಆರಂಭವಾದ ಬಗೆ, ಅದರ ಸ್ವರೂಪ, ಲಕ್ಷಣಗಳ ಕುರಿತು ಮಾತನಾಡುತ್ತಾ ಎನ್ ಎಸ್ ಎಸ್ ಎಂಬುದು ಶಿಬಿರಾರ್ಥಿಗಳಲ್ಲಿ ಅವಕಾಶಗಳ ಸದ್ಬಳಕೆ ಕುರಿತು ಒಂದು ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಶಿಬಿರಾರ್ಥಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಮಹಾವಿದ್ಯಾಲಯದ ಆಯ್.ಕ್ಯು.ಎ.ಸಿ ಕೋ-ಆರ್ಡಿನೇಟರ ಪೆÇ್ರ. ಗೋವಿಂದ ಪೂಜಾರ್ ರವರು ಮಾತನಾಡಿ ಶಿಬಿರಾರ್ಥಿಗಳು ಮೊಬೈಲ್ ಗಳಿಂದ ದೂರ ಇರಬೇಕು. ಮೊಬೈಲ್ ಗಳನ್ನು ನಾವು ಬಳಸಬೇಕೆ ಹೊರತು ಅವುಗಳು ನಮ್ಮನ್ನು ಬಳಸುವಂತಾಗಬಾರದು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶ್ರೀಕಾಂತ ಎಖಳೀಕರ ರವರು ಮಾತನಾಡಿ 'ರಾಷ್ಟ್ರೀಯ ಸೇವಾ ಯೋಜನೆ'ಯ ಶಿಬಿರಗಳು ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತವೆ, ಜೊತೆಗೆ ಅವರಲ್ಲಿ ಹುದುಗಿರುವ ಕಲೆಗಳಿಗೆ ಪೆÇ್ರೀತ್ಸಾಹ ನೀಡುತ್ತ, ಅಭಿವ್ಯಕ್ತಿಗೆ ಅವಕಾಶ ನೀಡುತ್ತದೆ ಎಂದರು. ಪೆÇ್ರ. ಯು.ಜಿ.ಸರ್ ದೇಶಪಾಂಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಯಾದ ಶರಣಪ್ಪ ಕವಲಗಿಯವರು ಉಪಸ್ಥಿತರಿದ್ದರು. ಕುಮಾರಿ ತ್ರಿವೇಣಿ ಪ್ರಾರ್ಥನೆ ಗೀತೆ ಹಾಡಿದರು. ಕುಮಾರಿಯರಾದ ತ್ರಿವೇಣಿ, ದಾನಮ್ಮ, ಭಾಗಮ್ಮ ರವರು ಎನ್ ಎಸ್ ಎಸ್ ಗೀತೆ ಹಾಡಿದರು. ಡಾ. ಮಲ್ಲಿನಾಥ ಎಸ್. ತಳವಾರ ನಿರೂಪಿಸಿದರು, ಡಾ. ದಯಾನಂದ ಶಾಸ್ತ್ರೀಯವರು ವಂದಿಸಿದರು.