ಎನ್.ಎಸ್.ಎಸ್.ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

ಹುಮನಾಬಾದ :ಮೇ.31: ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಪದವಿ ಮಹಾವಿದ್ಯಾಲಯದ ವತಿಯಿಂದ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಶ್ರೀ ಕ್ಷೇತ್ರ ನಾಗನಾಥ ದೇವಸ್ಥಾನದಲ್ಲಿ ಜರುಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಕೇಶವರಾವ ತಳಘಟಕರ್ ಕೇಂದ್ರ ಸಮಿತಿ ಹುಮನಾಬಾದ ಇವರು ಮಾತÀನಾಡಿ ದೇಶ, ನಾಡು ಅಭಿವೃದ್ಧಿ ಆಗಬೇಕಾದರೆ ಯುವಕರ ಪಾತ್ರ ಬಹಳ ಮುಖ್ಯವಾದ್ದು. ದೇಶ ಸೇವೆ ಈಶ ಸೇವೆ ಎಂದು ತಿಳಿಸಿದರು.
ಅತಿಥಿಗಳಾಗಿ ಶ್ರೀ ಗುಂಡಯ್ಯಾ ತೀರ್ಥಾ ಆಡಳಿತಾಧಿಕಾರಿಗಳು ಮಾತನಾಡಿ ವಿದ್ಯಾರ್ಥಿಗಳು ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ತಂದೆ- ತಾಯಿಯರ ಆಜ್ಞೆ ಮೀರಬಾರದು ದೇಶದ ಸಂಸ್ಕøತಿಯನ್ನು ಕಾಪಾಡುವಲ್ಲಿ ಎನ್,ಎಸ್,ಎಸ್ ಸ್ವಯಂ ಸೇವಕರ ಪಾತ್ರ ಮಹತ್ವವಾದದ್ದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಸೋಮಯ್ಯಾ ಹಿರೇಮಠ ಅಧ್ಯಕ್ಷರು ಸ್ಥಳಿಯ ಸಮಿತಿ ಹಳ್ಳಿಖೇಡ(ಬಿ), ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಸ್ತಾನ ಪಟೇಲ್, ಪ್ರೌಢ ಶಾಲಾ ಮುಖ್ಯಗುರುಗಳಾದ ಶ್ರೀ ಚಂದ್ರಕಾಂತ ಬಿರಾದಾರ, ಕಾಲೇಜಿನ ಉಪನ್ಯಾಸಕರಾದ ಶ್ರೀ ರಮೇಶ ಕಾಳೆ, ಶ್ರೀಮತಿ ಶೀಲ್ಪಾ ಢಗೆ, ಡಾ. ಶ್ರೀಮತಿ ಕರುಣಾ ತಂಬಾಕೆ ಉಪಸ್ಥಿತರಿದ್ದರು.
ಸ್ವಾಗತ ಭಾಷಣ : ಶ್ರೀ ನರೇಂದ್ರ ಪಾಟೀಲ್ ಉಪನ್ಯಾಸಕರು
ವಂದನಾರ್ಪಣೆ : ಶ್ರೀ ಬಸವರಾಜ ಝರಕುಂಟೆ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳು
ನಿರೂಪಣೆ : ಕುಮಾರಿ ಸಂಗೀತಾ ವಿದ್ಯಾರ್ಥಿನಿ ನಡೆಸಿಕೊಟ್ಟರು