ಎನ್.ಎಸ್.ಎಸ್.ಕೆ ಕಾರ್ಖಾನೆಯ ಬಾಯ್ಲರ್ ಪೂಜೆ

ಬೀದರ: ನ.5:ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಇಮಾಮಪೂರ-ಬೀದರ ಕಾರ್ಖಾನೆಯ ಬಾಯ್ಲರ್ ಪೂಜಾ ಸಮಾರಂಭವನ್ನು ಇದೇ ನವಂಬರ್ 03 ರಂದು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಈ ಪೂಜಾ ಸಮಾರಂಭದಲ್ಲಿ ಮಾತನಾಡಿದ ಕಾರ್ಖಾನೆಯ ನೂತನ ಅಧ್ಯಕ್ಷ ಡಿ.ಕೆ. ಸಿದ್ರಾಮ ರವರು ಪೂಜ್ಯ ದಿವಂಗತ ಡಾ|| ಗುರುಪಾದಪ್ಪಾ ನಾಗಮಾರಪಳ್ಳಿಯವರು ಕಟ್ಟಿ, ಬೆಳೆಸಿದ ಈ ಸಕ್ಕರೆ ಕಾರ್ಖಾನೆಗೆ ಡಿ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿಯವರ ಮಾರ್ಗದರ್ಶನದಲ್ಲಿ ಆರ್ಥಿಕ ಪುನಶ್ಚೇತನ ನೀಡಿ ಸದಸ್ಯ ರೈತಬಾಂಧವರಿಗೆ ಹೆಚ್ಚಿನ ಕಬ್ಬಿನ ದರ ನೀಡುವ ದಿಶೆಯಲ್ಲಿ ಪ್ರಯತ್ನಿಸಲಾಗುವುದೆಂದು ಸಂಕಲ್ಪಿಸಿರುವುದಾಗಿ ನುಡಿದರು.

ಕಾರ್ಖಾನೆಯು 2020-21 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭದ ಪೂಜೆಯನ್ನು ಇದೇ ದಿನಾಂಕ: 10.11.2020 ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದು, ಅಂದಿನ ಪೂಜಾ ಸಮಾರಂಭಕ್ಕೆ ಜಿಲ್ಲೆಯ ಪೂಜ್ಯ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರನ್ನು ಆಹ್ವಾನಿಸಲಾಗಿದ್ದು ಅವರೆಲ್ಲರ ಸಮ್ಮುಖದಲ್ಲಿ ಪೂಜಾ ಸಮಾರಂಭ ನೆರವೇರಿಸಲಾಗುವುದೆಂದು ತಿಳಿಸಿದರು.

ಬಾಯ್ಲರ್ ಪೂಜಾ ಸಮಾರಂಭದಲ್ಲಿ ಕಾರ್ಖಾನೆಯ ನೂತನ ಉಪಾಧ್ಯಕ್ಷ ಬಾಲಾಜಿ ಚವ್ಹಾಣ, ನಿರ್ದೇಶಕರು ಹಾಗೂ ಡಿ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಝರೆಪ್ಪಾ ಮಮದಾಪೂರೆ, ಚಂದ್ರಕಾಂತ ಪಾಟೀಲ, ರಾಜಕುಮಾರ ಕರಂಜಿ, ಶಂಕರೆಪ್ಪ ಪಾಟೀಲ, ಶಿವಬಸಪ್ಪಾ ಚನ್ನಮಲ್ಲೆ, ಸಿದ್ರಾಮ ವಾಗಮಾರೆ, ವಿಜಯಕುಮಾರ ಪಿ. ಪಾಟೀಲ, ಸಿತಾರಾಮ ಖೇಮಾ, ಶೋಭಾವತಿ ಪಾಟೀಲ, ಮಲ್ಲಮ್ಮಾ ಪಾಟೀಲ, ಶಶಿಕುಮಾರ ಪಾಟೀಲ, ವೀರಶೆಟ್ಟಿ ಪಟ್ನೆ, ನಾಗರೆಡ್ಡಿ ಯಾಚೆ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಪರಂಜಿ, ಗಣ್ಯ ಮಾನ್ಯರು, ಸುತ್ತ ಮುತ್ತಲ ಗ್ರಾಮದ ರೈತಬಾಂಧವರು ಹಾಗೂ ಕಾರ್ಖಾನೆಯ ಇಲಾಖಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.