ಎನ್ ಎಸ್ ಎಸ್ ಕಾರ್ಯಚಟುವಟಿಕೆಗಳ ಉದ್ಘಾಟನೆ 

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೩: ನಗರದ ಕಸ್ತೂರಬಾ ಪದವಿ ಪೂರ್ವ ಕಾಲೇಜಿನಲ್ಲಿ  ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಎನ್ ಎಸ್ ಎಸ್ 2023-24 ನೇ ಸಾಲಿನ ಕಾರ್ಯಚಟುವಟಿಕೆ ಉದ್ಘಾಟನೆಯನ್ನು ಮಾಡಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಮಾರುತಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ ಪಂಚಾಕ್ಷರಪ್ಪ ರವರು ವಿದ್ಯಾರ್ಥಿಗಳಿಗೆ ಶಿಸ್ತು ಬೆಳೆಸಿಕೊಳ್ಳಲು ಎನ್ ಎಸ್ ಎಸ್ ನೆರವಾಗುತ್ತದೆ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಶ್ರೀ ಬಸವರಾಜ ಮಾಗನೂರ ರವರು ಎನ್ ಎಸ್ ಎಸ್ ಮನುಷ್ಯನನ್ನು ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಪ್ರೇರೇಪಿಸುತ್ತದೆ.ಆದುದರಿಂದವಿದ್ಯಾರ್ಥಿ ಜೀವನದಲ್ಲಿ ನೀವು ಎನ್ ಎಸ್ ಎಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಯುತ್ತದೆ, ರಾಷ್ಟಾçಭಿಮಾನ ಬೆಳೆಯುತ್ತದೆ ಎಂದು ಹೇಳಿದರು.ನಿಟ್ಟುವಳ್ಳಿ ಶ್ರೀ ಮಾರುತಿ ಪ್ರೌಢಶಾಲೆಯ ಶ್ರೀ ಓಂಕಾರನಾಯ್ಕ್ ರವರು ಅತಿಥಿಗಳಾಗಿ ಆಗಮಿಸಿ ಚಿತ್ರ ಗೀತೆಗಳು ಮತ್ತು ಭಾವ ಗೀತೆಗಳನ್ನು ಹಾಡಿದರು.ಉಪನ್ಯಾಸಕರಾದ  ವೀರಪ್ಪ, ವಿಶ್ವ ಕುಮಾರ್, ನವೀನ್ ಪಾಟೀಲ್, ಎಸ್ ವಿ ಪಾಟೀಲ್, ಭರಮಗೌಡ ಉಪಸ್ಥಿತರಿದ್ದರು.ಎನ್ ಎಸ್ ಎಸ್ ಅಧಿಕಾರಿ ಎಸ್. ಜಿ. ನಾಗರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು.

ReplyForward