ಎನ್.ಎಸ್.ಎಸ್‍ದಿಂದ ಸೇವೆಯ ಮೂಲಕ ಶಿಕ್ಷಣ ಸಾಧ್ಯ: ಪ್ರೊ. ಚಿದಾನಂದ ಆನೂರ

(ಸಂಜೆವಾಣಿ ವಾರ್ತೆ)
ವಿಜಯಪುರ :ಆ.12: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ವಿಜಯಪುರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಹಾಗೂ ಘಟಕ 2ರ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ದತ್ತು ಗ್ರಾಮ ಜುಮನಾಳದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಚಿದಾನಂದ ಎಸ್. ಆನೂರ ಮಾತನಾಡಿ, ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳಲ್ಲಿ ವಿವಿಧ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ ಹಾಗೂ ಗ್ರಾಮೀಣ ಜನರ ಬದುಕು ಹಾಗೂ ಅವರ ಸಮಸ್ಯೆಗಳನ್ನು ಹತ್ತಿರದಿಂದ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಈ ಶಿಬಿರದಲ್ಲಿ ಜನಜಾಗೃತಿ ಜಾಥಾ, ಸಮೀಕ್ಷೆ, ಸ್ವಚ್ಛತಾ ಅಭಿಯಾನ, ಗ್ರಾಮ ಪಂಚಾಯತಿಗೆ ಭೇಟಿ, ಸಸಿ ನೆಡುವ ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳನ್ನು ಈ ಶಿಬಿರದಲ್ಲಿ ದತ್ತುಗ್ರಾಮ ಜುಮನಾಳದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಈ ಶಿಬಿರವು ಅತ್ಯಂತ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ದ್ಯಾವಪ್ಪ ಡಿ. ಪೂಜಾರಿ ವಹಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಬಸನಗೌಡ ಪಾಟೀಲ, ಮಲ್ಲಿಕಾಜುನ ಸನಕಗೊಂಡ, ದುಂಡಪ್ಪ ಕೋಲಕಾರ, ನಿಂಗಪ್ಪ, ರಾಕೇಶ ಕೋಟೆ, ಸಾಗರ ಕಾಪ್ಸೆ, ಡಾ. ಆರ್.ಡಿ. ಬೆನಕನಹಳ್ಳಿ, ಪ್ರೊ. ಉಮೇಶ ಹಿರೇಮಠ, ಪ್ರೊ. ರಮೇಶ ಬಳ್ಳೊಳ್ಳಿ, ಡಾ. ದಾವಲಸಾ ಪಿಂಜಾರ, ಪ್ರೊ. ಎನ್.ಎಸ್. ಹಳ್ಳಿ, ಪ್ರೊ. ಬಸವರಾಜ ಪಾಟೀಲ, ಡಾ. ಖುದ್ದುಸ್ ಪಾಟೀಲ, ಪ್ರೊ. ರಮೇಶ ಕುಮಟಗಿ, ಪ್ರೊ. ಶ್ರೀಕಾಂತ ಬ್ಯಾಳಿ, ನವೀನಗೌಡ ಬಿರಾದಾರ ಹಾಗೂ ಇತರ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯವರು ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಯಾದ ಪ್ರೊ. ಎಮ್.ಆರ್. ಜೋಶಿ ಶಿಬಿರದ ವರದಿ ವಾಚಿಸಿದರು ಹಾಗೂ ಎಲ್ಲರನ್ನು ಸ್ವಾಗತಿಸಿದರು. ಪ್ರೊ. ರಮೇಶ ಕುಮಟಗಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಬಸವರಾಜ ಪಾಟೀಲ ವಂದಿಸಿದರು.