ಎನ್ ಎನ್ ಎಸ್ ವಿಶೇಷ ಶಿಬಿರವು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿ

ಕಲಬುರಗಿ:ಆ.31: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಎಮ್.ಎಸ್. ಇರಾಣಿ ಪದವಿ ಮಹಾವಿದ್ಯಾಲಯ, ಕಲಬುರಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ 2022-23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವನ್ನು ಕೋಟನೂರು ಗ್ರಾಮದಲ್ಲಿ ಉದ್ಘಾಟಿಸಿ ಡಾ. ಸುರೇಶ ನಂದಗಾಂವ, ಪ್ರಾಚಾರ್ಯರು, ಶರಣ ಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯ, ಕಲಬುರಗಿ. ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಶಿಬಿರದಲ್ಲಿ ಎಲ್ಲರು ಆಸಕ್ರಿಯಿಂದ ಭಾಗವಹಿಸಿ ಓದುವುದರ ಜೊತೆಗೆ ಇಂತಹ ಪಠ್ಯೆತರ ಚಟುಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ವಿಶೇಷ ಪ್ರತಿಭೆಗಳನ್ನು ಹೊರ ಹಾಕಲು ಮತ್ತು ಜವಾಬ್ದಾರಿ, ಶಿಸ್ತು ಮತು ನಾಯಕತ್ವ ಗುಣಗಳನ್ನು ಹೆಚ್ಚಿಸಲು ಇದು ಸೂಕ್ತ ವೇದಿಕೆಯಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜಶೇಖರ ಬೀರನಳ್ಳಿ ವಹಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕ ವರ್ಗದವರಾದ ಪ್ರೊ. ಆರ್.ಎಸ್. ಹಿಳ್ಳಿ, ಡಾ. ಶರಣಕುಮಾರ ಮಾಶಾಳ, ಡಾ.ನೀಲಕಂಠ ವಾಲಿ, ಪ್ರೊ. ಜಗದೇವಿ ಹೀರೆಮಠ, ಡಾ. ಜಯಶ್ರೀ ಬಡಿಗೇರ್, ಡಾ. ಮೈತ್ರಾದೇವಿ ಹಳೆಮನಿ, ಡಾ. ರೇಣುಕಾ ಪಾಟೀಲ, ಡಾ. ಶ್ರೀದೇವಿ ಸರಡಗಿ, ಶ್ರಿಮತಿ. ಸುಮಂಗಲಾ ಪಾಟೀಲ, ಕು. ವೈಶಾಲಿ, ಅಸ್ಟಗಿ, ಶ್ರೀ. ಬಿ.ಓ.ಬೊಮ್ಮಪ್ಪ, ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆ ಪ್ರೊ. ಬಿ.ಎಸ್. ಕಾಗೆ, ನೆರವೇರಿಸಿದರು. ಪ್ರಾರ್ಥನಾ ಗೀತೆಯನ್ನು ಕುಮಾರಿ. ದೇವಿಕಾ ಹಾಡಿದರು. ಸ್ವಾಗತವನ್ನು ಡಾ. ಪ್ರಾಣೇಶ ಎಸ್, ಎನ್.ಎಸ್.ಎಸ್. ‘ಅ’ ಘಟಕದ ಕಾರ್ಯಕ್ರಮಾಧಿಕಾರಿಗಳು ಮಾಡಿದರು. ವಂದನಾರ್ಪಣೆಯನ್ನು ಡಾ. ಶಂಕ್ರಪ್ಪ ಕೆ, ಎನ್.ಎಸ್.ಎಸ್. ‘ಬ’ ಘಟಕದ ಕಾರ್ಯಕ್ರಮಾಧಿಕಾರಿಗಳು ನೆರವೇರಿಸಿದರು.