ಎನ್.ಇ.ಪಿ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,6- ನೂತನ ಶಿಕ್ಷಣ ನೀತಿಯನ್ನು ವಿರೋಧಿಸಿ ದೇಶದಾದ್ಯಂತ ಒಂದು ಕೋಟಿ ಸಂಗ್ರಹ ನಡೆದಿದ್ದು. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಈಗಾಗಲೇ 1.62 ಲಕ್ಷ ಸಹಿ ಸಂಗ್ರಹಿಸಿ ಎಐಡಿಎಸ್ ಓ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದೆ.
ನಗರದಲ್ಲಿ ಇಂದು ಸಂಘಟನೆಯ ಕಛೇರಿಯಲ್ಲಿ ಎನ್. ಇ.ಪಿ ವಿರೋಧಿಸುವ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಭೆ ಜರುಗಿತು. ಈ ಸಭೆಗೆ ಮುಖ್ಯ ಅತಿಥಿಗಳಾಗಿ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಡಾ.ಎನ್. ಪ್ರಮೋದ್ ಆಗಮಿಸಿ. ಮೇ 1 ರಿಂದ ಆರಂಭವಾಗಿರುವ 150 ದಿನಗಳವರೆಗಿನ ಎಐಡಿಎಸ್ ನೇತೃತ್ವದಲ್ಲಿ ಜರುಗುತ್ತಿರುವ ‘ಎನ್.ಇ.ಪಿ -2020 ಅನ್ನು ತಿರಸ್ಕರಿಸಿ ‘, ‘ ಸಾರ್ವಜನಿಕ ಶಿಕ್ಷಣ ಉಳಿಸಿ ‘ ಎಂಬ ಘೋಷಣೆಯ ಬೃಹತ್ ಸಹಿ ಸಂಗ್ರಹಣಾ ಅಭಿಯಾನ ಅತ್ಯಂತ ಹುರುಪಿನಿಂದ ಮತ್ತು ಉತ್ಸಾಹಭರಿತವಾಗಿ ನಡೆಯುತ್ತಿದೆ. ಎನ್.ಇ.ಪಿ ಅಡಿಯಲ್ಲಿ ತರುತ್ತಿರುವ ಫ್ಯಾಸಿವಾದದ ಭಯಾನಕ ಅಂಶಗಳನ್ನು ನಾವು ನಮ್ಮ ವೈಚಾರಿಕ, ಕ್ರಾಂತಿಕಾರಿ ಹಾಗೂ ಒಕ್ಕೂಟ ಹೋರಾಟದ ಮೂಲಕವೇ ಬಗ್ಗು ಬಡಿಯಲು ಸಾಧ್ಯ. ದೇಶಾದ್ಯಂತ ಅಭೂತಪೂರ್ವ ಹೋರಾಟದ ವಾತಾವರಣ ಬೆಳೆಯುತ್ತಿದೆ ಎಂಬುದನ್ನು ನಾವು ಗಮನಿಸುತ್ತೇವೆ ಎಂದರು.
ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರ ರವಿಕಿರಣ್. ಜೆ.ಪಿ ಮಾತನಾಡಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ 1.62 ಲಕ್ಷ ಜನ ಸಹಿ ನೀಡುವುದರ ಮುಖಾಂತರ ತಮ್ಮ ತಮ್ಮಲ್ಲಿರುವ ಆಕ್ರೋಶವನ್ನು ಹೊರಹಾಕಿದ್ದಾರೆ. ನಮ್ಮ ‘ಸಹಿ ಸಂಗ್ರಹಣೆ’ ಯು ಕೇವಲ ಸಹಿ ಪಡೆಯುವುದಷ್ಟಕ್ಕೆ ಸೀಮಿತವಾಗಿರದೆ, ಎನ್.ಇ.ಪಿ – 2020 ವಿರೋಧಿಸಿ ವಿವಿಧ ಕಾರ್ಯಕ್ರಮಗಳನ್ನು ಅತ್ಯಂತ ಸೃಜನಾತ್ಮಕವಾಗಿ ಹಲವು ರೀತಿಯ ಚಟುವಟಿಕೆಗಳ ಮೂಲಕ ಸಹಿ ಸಂಗ್ರಹ ಅಭಿಯಾನವನ್ನು ಕೊಂಡೊಯ್ಯಬೇಕು. ನಂತರದ ದಿನಗಳಲ್ಲಿ ಇದು ಒಂದು ಸಾಮೂಹಿಕ ಹೋರಾಟದ ರೂಪ ಪಡೆಯುವಂತೆ ಬೆಳೆಸಬೇಕು ಎಂದರು.
ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷ ಜೆ.ಸೌಮ್ಯ, ಸಭೆಯ ಅಧ್ಯಕ್ಷತೆ ವಹಿಸಿದ್ದರು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಕೆ.ಈರಣ್ಣ, ಕಾರ್ಯದರ್ಶಿ ಕಂಬಳಿ ಮಂಜುನಾಥ, ಸೆಕ್ರೆಟರಿಯೇಟ್ ಸದಸ್ಯರಾದ ಎಮ್.ಶಾಂತಿ, ಅನುಪಮಾ, ಸಿದ್ದು, ನಿಹಾರಿಕ, ಪ್ರಮೋದ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.