ಎನ್.ಆರ್.ಸಿ ನೀಟ್  ಅಕಾಡೆಮಿಯ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.28: ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಶಿಕ್ಷಕರ ಮಾರ್ಗಧರ್ಶನದಂತೆ ಪ್ರಯತ್ನ ಮಾಡಿದ್ದೇ ಆದರೆ ಸುಲಭವಾಗಿ ವೈದ್ಯಕೀಯ ಸೀಟುಗಳನ್ನು ಪಡೆಯಬಹುದಾಗಿದೆ ಎಂದು   ವೆಂಕಟೇಶ್ ಪ್ರಸಾದ್ ರವರು ಅಭಿಪ್ರಾಯ ಪಟ್ಟರು. ನಗರದ ಕಪ್ಪಗಲ್ ರಸ್ತೆಯಲ್ಲಿರುವ ಎನ್.ಆರ್.ಸಿ ನೀಟ್  ಅಕಾಡಮಿಯ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಅಕಾಡೆಮಿಯ ಸದುಪಯೋಗಕ್ಕೆ ಕರೆ ನೀಡಿದರು.
ಮುಖ್ಯ ಅಥಿತಿಗಾಳಾಗಿ ಆಗಮಿಸಿದ್ದ ಎಸ್.ಜಿ.ಟಿ ಕಾಲೇಜಿನ ಪ್ರಾಚಾರ್ಯರಾದ ಜಿ.ನಾಗರಾಜ್ ಮಾತನಾಡಿ, ಆತ್ಮ ವಿಶ್ವಾಸ ಮತ್ತು ವಿಷಯಗಳನ್ನು ಸುಲಭವಾಗಿದೆ ಎಂದು ಪರಿಗಣಿಸಿ ಅಭ್ಯಾಸ ಮಾಡಿದರೆ ಯಶಸ್ಸು ಸಿಗುವುದು, ಹಾಗು ಈ 6 ವರ್ಷಗಳಲ್ಲಿ 150 ಎಂ.ಬಿ.ಬಿ.ಎಸ್. ಸೀಟುಗಳನ್ನು ಎನ್.ಆರ್.ಸಿ ನೀಟ್ ಅಕಾಡಮಿಯು ಪಡೆದಿರುವುದು ಬಹಳ ಸಂತೋಷದ ವಿಷಯ ಎಂದು ತಿಳಿಸಿ ಎನ್.ಆರ್.ಸಿ ನೀಟ್ ಅಕಾಡಮಿಯ ಎನ್ ರಾಮಣ್ಣ ಚೌದರಿಯವರಿಗೆ ಅಭಿನಂದಿಸುತ್ತಾ ಅವರ ಹುಟ್ಟು ಹಬ್ಬಕ್ಕೆ ಶುಭಕೋರಿದರು.
ಈ ಕಾರ್ಯಕ್ರಮಕ್ಕೆ  ಪೋಷಕರಾದ ಎಸ್.ಎನ್ ರುದ್ರಪ್ಪ , ಶರಣಬಸವ ಹಾಗು ಮುಖಂಡರಾದ ಮಾರೆಣ್ಣ, ಹನುಮಂತಪ್ಪ, ಗಾದಿಲಿಂಗಪ್ಪ ಮತ್ತು ಸುರೇಶ್ ರವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಎಲ್ಲಾ ಪೋಷಕರು ಈ ಅಕಾಡಮಿಯ ಸಾದನೆಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಹಾಗು ವಿಮ್ಸ್ ಗೆ ಪ್ರವೇಶ ಪಡೆದ 8 ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.