ಎನ್‌ಐಟಿಕೆಯಲ್ಲಿ ಆಹಾರ ಮತ್ತು ತರಕಾರಿ ತ್ಯಾಜ್ಯದಿಂದ ಜೈವಿಕ ಅನಿಲ ಘಟಕ ಸ್ಥಾಪನೆ

ಮಂಗಳೂರು, ಮಾ.೨೬- ದೇಶದಲ್ಲಿ ೫ಸಾವಿರ ಜೈವಿಕ ಅನಿಲ ಉತ್ಫಾದನಾ ಘಟಕಗಳನ್ನು ತೆರೆಯುವ ಗುರಿಹೊಂದಿರುವುದಾಗಿ ಕೇಂ ದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವೀಡಿಯೋ ಸಂದೇಶ ಮೂಲಕ ತಿಳಿಸಿದ್ದಾರೆ. ತ್ಯಾಜ್ಯದಿಂದ ಜೈವಿಕ ಇಂಧನ ತಯಾರಿ ಘಟಕದ ಉದ್ಘಾಟನಾ ಸಮಾರಂಭ ಮತ್ತು “ಮೈರೆ ಟೆಕ್ನಿ ಮಾಂಟ್ ಸೆಂಟರ್ ಫಾರ್ ರೀಸರ್ಚ್ ಆನ್ ವೇಸ್ಟ್ ರೀಸೈಕ್ಲಿಂಗ್ ಅಂಡ್ ಸರ್ಕ್ಯೂಲರ್ ಎಕಾನಮಿ” ಒಪ್ಪಂದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರತಿನಿಧಿಸಿ ಎನ್‌ಐಟಿಕೆ ಸಭಾಂಗಣದ ವರ್ಚುವ ಲ್ ವೇದಿಕೆಯ ಮೂಲಕ ಮಾತನಾಡುತ್ತಿದ್ದರು
ನೈಸರ್ಗಿಕ ಸಂಪನ್ಮೂಲಗಳನ್ನು ಪರಿವರ್ತಿ ಸುವಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಮೈರೆ ಟೆಕ್ನಿಮಾಂಟ್ ಸಮೂಹ ಸುರ ತ್ಕಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಕ್ಯಾಂಪಸ್‌ನಲ್ಲಿ ಜೈವಿಕ ತ್ಯಾಜ್ಯ ಪುನರ್‌ಬ ಳಕೆಯ ಪೈಲಟ್ ಘಟಕವನ್ನು ಆರಂಭಿಸಿದೆ, ಈ ಯೋಜನೆಗೆ ಟೆಕ್ರಿಮಾಂಟ್ ಅಂಗಸಂಸ್ಥೆ ಸಮೂಹದ ಲಿಮಿಟೆಡ್ (ಟಿಸಿಎಂಪಿಎಲ್)ನ ಭಾರತೀಯ ಭಾಗವಾದ ಉದ್ಯಮ ಸಂಸ್ಥೆ ಗಳ ಸಾಮಾಜಿಕ ಹೊಣೆಗಾರಿಕೆಯಡಿ ಹಣಕಾಸು ನೆರವು ನೀಡುತ್ತಿದೆ ಎಂದು ಮೈರೆ ಟೆಕ್ನಿಮಾಂಟ್ ಅಧ್ಯಕ್ಷ ಫ್ಯಾ ಬ್ರಿಝಿಯೋ ಡಿ ಅಮಾಟೋ ತಿಳಿಸಿದ್ದಾರೆ. ಸುಸ್ಥಿರ ಅಭಿವ್ರದ್ಧಿಯ ನಿಟ್ಟಿನಲ್ಲಿ ಈ ರೀತಿಯ ಒಡಂಬಡಿಕೆ ಭಾರತ ಮತ್ತು ಇಟೆಲಿಯ ನಡುವೆ ನಡೆದ ಒಪ್ಪಂದ ಮಹತ್ವದ ಬೆಳವ ಣಿಗೆ ಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಎನ್ ಐಟಿಕೆ ನಿರ್ದೇಶಕ ಕರಣಂ ಉಮಾಮಹೇಶ್ವರ ರಾವ್,ಪ್ರೊ.ಪಾಂಡು ರಂಗ ವಿಠಲ,ಎಸ್ .ಎಂ.ಕುಲಕರ್ಣಿ,ಮನಪಾ ಜಂಟಿ ಆಯುಕ್ತ ಡಾ. ಜಿ. ಸಂತೋಷ್ ಕುಮಾರ್ ,ಮೈರೆ ಟೆಕ್ನಿಮಾಂಟ್ ಸಮೂಹದ ಆಡಳಿತ ನಿರ್ದೇಶಕ ಫಿರೋ ಬ್ರೆಟ್ಟೋ ಫೆಲ್ಝಿರೋ, ಉಪಾಧ್ಯಕ್ಷ ಮಿಲಿಂದ್ ಬ್ರೈಡ್,ಎನ್ ಐಟಿಕೆ ಉಪ ನಿರ್ದೇಶಕ ಅನಂತನಾರಾಯಣ,ಎನ್ ಐಟಿ ಕೆ ಬಯೋಗ್ಯಾಸ್ ಯೋಜನೆಯ ಸಂಯೋ ಜಕರಾದ ಸಂತೋಷ್ ಬಾಬು, ವಾಸುದೇವ ಎಂ ಮೊದಲಾದ ವರು ವರ್ಚುವಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂದರ್ಭದಲ್ಲಿ ಮೈರೆ ಟೆಕ್ನಿಮಾಂಟ್ ಸೆಂಟರ್ ಫಾರ್ ರೀಸರ್ಚ್ ಆನ್. ವೇಸ್ಟ್ ರೀಸೈಕಲಿಂಗ್ ಅಂಡ್ ಸರ್ಕ್ಯುಲರ್ ಎಕಾನಮಿ ಹೆಸರಿನ ಸಂಶೋಧನಾ ಕೇಂದ್ರವನ್ನು ಆರಂಭಿಸಲು ಎನ್ ಐಟಿಕೆ ಜೊತೆ ಒಪ್ಪಂದ ನಡೆಯಿತು.
*ಎನ್ ಐಟಿಕೆ ಜೈವಿಕ ಅನಿಲ ಘಟಕ ಮತ್ತು ಸಂಶೋಧನಾ ಕೇಂದ್ರ:–ಈ ಕೇಂದ್ರದ ಮೂಲಕ ಇಂಧನ ಪರಿವರ್ತನೆಗಾಗಿ ಉನ್ನತ ಮಟ್ಟದ ಸಂಶೋಧನೆಗೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸಲು ತರಬೇತಿ ಪಡೆದವರನ್ನು ಅವರ ಅಭಿವೃದ್ಧಿ ಮತ್ತು ಸಬಲೀಕರಣದ ಹಾದಿಗಳಲ್ಲಿ ಬೋಧಿಸುವ ಮೂಲಕ ಗ್ರೂಪ್‌ನ ವಿಶಿಷ್ಟ ಸಾಮರ್ಥ್ಯಗಳು ಮತ್ತು ಪರಿಣತಿಯನ್ನು ಹೆಚ್ಚಳ ಆಗುವಂತೆ ಮಾಡುತ್ತದೆ. ಮೈರೆ ಟೆಕೊಮಾಂಟ್ ೨೦೨೧-೨೨ ರ ನಂತರ ೧೬ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆ ಮತ್ತು ಶಕ್ತಿ ಪರಿವರ್ತನ ಹಾಗೂ ಗ್ರೀನ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ಅವರ ಪ್ರವರ್ತಕ ಕಾರ್ಯಗಳಿಗಾಗಿ ವಿದ್ಯಾರ್ಥಿವೇತನವನ್ನು ಈಗಾಗಲೇ ಕಂಪನಿಯು ೨೦೨೦-೨೧ ನೇ ಸಾಲಿನಲ್ಲಿ ಎನ್‌ಐಟಿಕೆಯಲ್ಲಿ ಎರಡು ವಿದ್ಯಾರ್ಥಿ ವೇತನಗಳನ್ನು ಪ್ರಾಯೋಜಿಸಿದೆ.
ಈ ಜೈವಿಕ ಅನಿಲ ಪೈಲಟ್ ಘಟಕವು ಕ್ಯಾಂಪಸ್ ನೊಳಗೆ ಇಂಧನ ಸ್ವಾವಲಂಬನೆಯನ್ನು ಸಾಧಿಸುವುದಕ್ಕೆ ಮೀಸಲಾಗಿದೆ. ಈ ಬಯೋಗ್ಯಾಸ್ ಘಟಕದಲ್ಲಿ ಕ್ಯಾಂಟೀನ್ ಮತ್ತು ಹಾಸ್ಟೆಲ್ ಬ್ಲಾಕ್‌ಗಳಲ್ಲಿ ಆಹಾರ ಮತ್ತು ತರಕಾರಿ ತ್ಯಾಜ್ಯಗಳನ್ನು ಬಳಸಿ ಅನಿಲ ಉತ್ಪಾದನೆ ಮಾಡಿ ಎನ್‌ಐಟಿಕೆಗೆ ಇಂಧನ ಒದಗಿಸಲಿದೆ