ಎನ್‌ಇಟಿ : ಫಾರ್ಮಸಿ ಕಾಲೇಜಿಗೆ ರ್‍ಯಾಂಕ್‌ಗಳ ಹೆಮ್ಮೆ

ರಾಯಚೂರು.ಜ.೧೦- ನವೋದಯ ಶಿಕ್ಷಣ ಸಂಸ್ಥೆಯ ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು ಹಲವು ಱ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ ಬೆಂಗಳೂರು ನಡೆಸಿದ ಫಾರ್ಮಾ ಡಿ, ಬಿ ಫಾರ್ಮಾ ಕೋರ್ಸ್ ಅಂತಿಮ ಪರೀಕ್ಷೆಯಲ್ಲಿ ನವೋದಯ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಅನೇಕ ರ್‍ಯಾಂಕ್ ಗಿಟ್ಟಿಸಿಕೊಂಡಿದ್ದಾರೆ. ಫಾರ್ಮಾ ಡಿ ವಿಭಾಗದ ವಿದ್ಯಾರ್ಥಿಗಳಾದ ಕು.ಸ್ಟೆಫಿ ಎಲಿಸಾ ವರ್ಗೀಸ್, ಕು.ಬೀನೂ ಪ್ರಸಾದ ಹಾಗೂ ದೇವಥಿ ವೆಂಕಟಲಕ್ಷ್ಮೀ ಶ್ರಾವ್ಯ ಇವರು ಐದನೇ ವರ್ಷದ ವಿಶ್ವವಿದ್ಯಾಲಯ ಘೋಷಿಸಿದ ಹತ್ತು ಱ್ಯಾಂಕ್‌ಗಳಲ್ಲಿ ಅನುಕ್ರಮವಾಗಿ ಎರಡನೇಯ, ಮೂರನೇಯ ಹಾಗೂ ಎಂಟನೇಯ ರ್‍ಯಾಂಕ್ ಪಡೆದಿದ್ದಾರೆ.
ಅಲ್ಲದೇ, ಬಿ ಫಾರ್ಮಾ ಕೋರ್ಸಿನ ವಿದ್ಯಾರ್ಥಿನಿ ಕು.ತನ್ವಿ ಗೋಯಲ್ ಅಂತಿಮ ಪರೀಕ್ಷೆಯಲ್ಲಿ ಎಂಟನೇ ರ್‍ಯಾಂಕ್ ಗಳಿಸಿದ್ದಾರೆ. ಇದಲ್ಲದೇ ಐದನೇಯ ಫಾರ್ಮಾ ಡಿ ಅಂತಿಮ ಪರೀಕ್ಷೆಯಲ್ಲಿ ೩೨ ವಿದ್ಯಾರ್ಥಿಗಳು ಕೋರ್ಸಿನ ವಿವಿಧ ವಿಷಯಗಳಲ್ಲಿ ಉನ್ನತ ಱ್ಯಾಂಕ್‌ಗಳನ್ನು ಪಡೆದಿದ್ದಾರೆ. ಬಿ ಫಾರ್ಮಾ ಕೋರ್ಸ್‌ನ ಅಂತಿಮ ಪರೀಕ್ಷೆಯಲ್ಲಿ ೨೭ ವಿದ್ಯಾರ್ಥಿಗಳು ಕೋರ್ಸಿನ ವಿವಿಧ ವಿಷಯಗಳಲ್ಲಿ ಉನ್ನತ ರ್‍ಯಾಂಕ್‌ಗಳನ್ನು ಪಡೆದು ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಅಮೋಘ ಸಾಧನೆಯನ್ನು ಮೆಚ್ಚಿ ನವೋದಯ ಸಂಸ್ಥೆಯ ಚೇರಮನ್ ಎಸ್.ಆರ್. ರೆಡ್ಡಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ದೊಡ್ಡಯ್ಯ ಮತ್ತು ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.