ಎನ್‌ಇಟಿ ಫಾಮ್‌ಸಿ : ಫಾರ್ಮಸಿ ಕೋವಿಜಿಲನ್ಸ ಸಪ್ತಾಹ ಆಚರಣೆ

ರಾಯಚೂರು.ಸೆ.೨೪-ನಗರದ ಪ್ರತಿಷ್ಠತ ಎನ್.ಇ.ಟಿ. ಫಾರ್ಮಸಿ ವಿದ್ಯಾಲಯ ದೇಶಾದ್ಯಂತ ಆಚರಿಸಲ್ಪಡುವ ರಾಷ್ಟ್ರಿಯ ಫಾರ್ಮಸಿ ಕೋವಿಜಿಲನ್ಸ ಸಪ್ತಾಹದ ಮುಕ್ತಾಯ ಸಮಾರಂಭವನ್ನು ನವೋದಯ ವೈದ್ಯಕೀಯ ವಿದ್ಯಾಲಯದ ಡಾ.ಗುರುಮೂರ್ತಿ ಸಭಾಂಗಣದಲ್ಲಿ ವೈಭವದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಡಾ.ಟಿ.ಶ್ರೀನಿವಾಸರವರು ಮುಖ್ಯಅಥಿತಿಯಾಗಿ ಭಾಗವಹಿಸಿದ್ದರು. ನವೋದಯ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಅಶೋಕ ಮಹೇಂದ್ರಕರ ಗೌರವನಿತ ಅಥಿತಿಯಾಗಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ದೊಡ್ಡಯ್ಯ, ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ.ಶಂಕ್ರಪ್ಪ ಮುದಗಲ್, ಜನರಲ್ ಮೆಡಿಸನ್ ವಿಭಾಗದ ಮುಖ್ಯಸ್ಥರು, ನವೋದಯ ಆಸ್ಪತ್ರೆಯ ಹಾಗೂ ಡಾ.ಶಿವಕುಮಾರ, ಪ್ರಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು ಫಾರ್ಮಸಿ ಪ್ರಾಕ್ಟಿಸ್ ವಿಭಾಗ ಎನ್.ಇ.ಟಿ. ಫಾರ್ಮಸಿ ವಿದ್ಯಾಲಯ ಇವರು ಸಪ್ತಾಹದ ಸಂಚಾಲಕರಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕು.ಮಿದುನ್ಯ ಹಾಗೂ ಕು.ಅಶ್ಲೆ ಇವರ ಪ್ರಾಥನೆಯೊಂದಿಗೆ ದಿನದ ಕಾರ್ಯಕ್ರಮಗಳು ಪ್ರಾರಂಭಗೊಂಡವು. ಡಾ.ಶಿವರಾಜಗೌಡ ಪ್ರಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು ಫಾಮಾ ಕಾಲೇಜು ವಿಭಾಗವರು ವೇದಿಕೆಯ ಮೇಲಿನ ಗಣ್ಯರಿಗೆ ಹಾಗೂ ಸಭೆಗೆ ಆಗಮಿಸಿದ ಅತಿಥಿ ಮತ್ತು ವಿದ್ಯಾಥಿಗಳಿಗೆ ಸ್ವಾಗತ ಕೋರಿದರು. ಇದಾದ ನಂತರ ಸಾಂಪ್ರದಾಯಕವಾಗಿ ವೇದಿಕೆಯ ಮೇಲಿದ್ದ ಗಣ್ಯರಿಂದ ದೀಪ ಬೆಳಗಿಸುವ ಕಾಯ್ರಕ್ರಮ ನೆರವೇರಸಲ್ಪಿಟ್ಟತು.
ಡಾ.ಟಿ.ಶ್ರೀನಿವಾಸ ಮುಖ್ಯಅಥಿತಿಗಳಾಗಿ ಮಾತನಾಡುತ್ತ ಫಾಮ ಕೋವಿಜಿಲನ್ಸ ಅಂದರೆ ಏನು, ಹಾಗೂ ಹಲವು ಔಷಧಗಳು ಪ್ರತಿನಿತ್ಯ ಸೇವಿಸುವ ರೋಗಿಗಳಲ್ಲಿ ಕೆಲವು ಔಷಧಿಗಳು ಯಾವ ರೀತಿಯಾಗಿ ದೇಹದಲ್ಲಿ ದುಷ್ಪರಿಣಾಮ ಬೀರುತ್ತವೆ ಹಾಗೂ ಇದನ್ನು ತಡೆಗಟ್ಟಲು ಬಳಸಲ್ಪದುವ ಕೆಲವು ವಿದಾನಗಳ ಬಗ್ಗೆ ವಿವರಿಸದರು. ಮುಂದುವರಿದು ಮಾತನಾಡುತ್ತಾ ರೋಗಿಯ ಆರೋಗ್ಯದ ಸುರಕ್ಷತೆಯಲ್ಲಿ ಫಾಮಾಸಿಸ್ಟ ಮಾಡುತ್ತಿರುವ ಸಹಾಯ ಮತ್ತು ಪ್ರಯತ್ನಗಳ ಕುರಿತು ವಿವರಿಸಿದರು.
ಫಾಮಾ ಸಿಸ್ಟ ಹಾಗೂ ವೈದ್ಯಕೀಯ ಕ್ಷೆತ್ರಕ್ಕೆ ಸಂಭದಪಟ್ಟ ನುರಿತ ತಜ್ಞರ ಸಹಭಾಗಿತ್ವದಿಂದ ಈ ಕ್ಷೆತ್ರವು ಅತ್ಯಂತ ಮಹತ್ವವನ್ನು ಪಡೆಯಲಿದೆ ಮತ್ತು ಪಡೆದೆ ತೀರುತ್ತದೆ ಎಂದು ಹೇಳಿದರು. ಡಾ.ಹೆಚ್.ದೊಡ್ಡಯ್ಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆರೋಗ್ಯ ಕ್ಷೇತ್ರದ ಮಹತ್ವದ ಘಟಕಗಳಾದ ವೈದ್ಯಕೀಯ, ನಸ್ರಿಂಗ, ಫಿಜಿಯೊಥೆರಪಿಗಳಲ್ಲಿ ಚಿಕಿತ್ಸೆ ನೀಡುವ ಗುಂಪಿನೊಂದಿಗೆ ಫಾಮಾ ಸಿಸ್ಟ ಸಹ ತಂತ್ರಜ್ಞಾನ ಮತ್ತು ಕತ ವ್ಯವನ್ನು ಉಪಯೋಗಿಸುವದು ಈ ದಿನಗಳಲ್ಲಿ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.
ಈ ದಿಶೆಯಲ್ಲಿ ಎನ್.ಇ.ಟಿ. ಫಾಮ್‌ಸಿ ವಿದ್ಯಾಲಯ ಹಾಗೂ ನವೋದಯ ವೈದ್ಯಕೀಯ ವಿದ್ಯಾಲಯ ಸಹಬಾಗಿತ್ವದಲ್ಲಿ ಸ್ಥಾಪಿಸಲ್ಪಟ್ಟ ಫಾಮ ಕೋವಿಜಿಲನ್ಸ ಕೇಂದ್ರ ಸಮಪ ಕವಾಗಿ ಕಾಯ ನಿವ್ರಹಿಸುತ್ತಿದ್ದು ಕೆಲವು ಔಷದಿಗಳ ದುಷ್ಪರಿಣಾಮ ಹಾಗೂ ಹಾನಿ ಕುರಿತು ಸಂಭಂದ ಪಟ್ಟವರ ಗಮನಕ್ಕೆ ತರುವಲ್ಲಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಿಯ ಫಾಮ ಕೋವಿಜಿಲನ್ಸ ಸಪ್ತಾಹದ ಆಚರಣೆಯ ಅಂಗವಾಗಿ ಕಾಲೇಜಿನಿಂದ ಯೋಜಿಸಲ್ಪಟ್ಟ ಪ್ರಭಂದ ಸ್ಪಧೆ, ರಸಪ್ರಶ್ನೆ ಹಾಗೂ ವಿಷಯ ಸಂಭಂದ ಪಟ್ಟ ಬಿತ್ತಿ ಚಿತ್ರಗಳ ಪ್ರಧಶನಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಕೊಡಲಾಯಿತು. ಬೇರೆ ಬೇರೆ ಕಾಲೇಜುಗಳಿಂದ ಭಾಗವಹಿಸಿದ ವಿದ್ಯಾಥಿಗಳಿಗೆ ಅವರು ಪಾಲ್ಗೊಂಡಿದ್ದರ ಬಗ್ಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
ವಿದ್ಯಾಥಿಗಳಲ್ಲಿ ಫಾಮ ಕೋವಿಜಿಲನ್ಸ ಬಗ್ಗೆ ಜಾಗೃತೆ ಮತ್ತು ಅರಿವು ಹೆಚ್ಚಿಸುವ ದೃಷ್ಠಯಿಂದ ಡಾ.ಪ್ರಭಾಕರ ಪಾಟೀಲ, ಪ್ರಾಧ್ಯಾಪಕರು ಫಾಮಾ ಕಾಲೇಜು ವಿಭಾಗ ನವೋದಯ ವೈದ್ಯಕೀಯ ವಿದ್ಯಾಲಯ ಹಾಗೂ ಡಾ.ಶಿವಕುಮಾರ, ಎನ್.ಇ.ಟಿ. ಫಾಮ್‌ಸಿ ಕಾಲೇಜು ಇವರಿಂದ ಹಲವು ವಿಧದ ಔಷಧಿಗಳ ದುಷ್ಪರಿಣಾಮ ಹಾಗೂ ಅದನ್ನು ತಡೆಗಟ್ಟುವ ವಿಧಾನಗಳು ಹಾಗೂ ಸರಕಾರದ ಗಮನಕ್ಕೆ ತರುವ ಕಾರ್ಯತಂತ್ರಗಳ ಬಗ್ಗೆ ಹಂತ ಹಂತವಾಗಿ ಚಚಿಸಿದರು.
ಇದಾದ ನಂತರ ಶ್ರೀ.ಬಿನು ಕೆ. ಎಮ್ ಸಭೆಗೆ ವಂದನಾಪಣೆ ಸಲ್ಲಿಸದರು ಹಾಗೂ ಫ್ರಸ್ ಸಾಬೂ ಕಾರ್ಯಕ್ರಮವನ್ನು ನಿರೂಪಿಸಿದರು. ಅಲ್ಪೊಪಹಾರದೊಂದಿಗೆ ಸಪ್ತಾಹದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಕ್ತಾಯಗೊಂಡವು.