ಎನ್‌ಆರ್‌ಬಿಸಿ ೫ಎ. ಕಾಲುವೆ ಅನುಷ್ಟಾನಕ್ಕೆ ಒತ್ತಾಯಿಸಿ -ಧರಣಿ

ಮಸ್ಕಿ,ನ.20- ಎನ್ ಆರ್ ಬಿಸಿ ವ್ಯಾಪ್ತಿಯ ೫ಎ. ಕಾಲುವೆ ನೀರಾವರಿ ಯೋಜನೆ ಅನುಷ್ಟಾನ ಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಪಾಮನ ಕೆಲ್ಲೂರ ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿ ನ.20 ರಂದು ರೈತರು ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪ ಗೌಡ ಹರ್ವಾಪೂರ ಹೇಳಿದರು. ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿದರು ೫ಎ. ಶಾಖಾ ಕಾಲುವೆ ನೀರಾವರಿ ಯೋಜನೆ ಅನುಷ್ಟಾನ ಗೊಳಿಸುವಂತೆ ರೈತರು ಕಳೆದ 12 ವರ್ಷಗಳಿಂದ ಹೋರಾಟ ನಡೆಸಿದ್ದಾರೆ ಸರಕಾರ ಮತ್ತು ಜನ ಪ್ರತಿನಿಧಿಗಳು ಸುಳ್ಳು ಭರವಸೆ ನೀಡುವ ಮೂಲಕ ರೈತರನ್ನು ವಂಚಿಸುತ್ತ ಬಂದಿದ್ದಾರೆ ರೈತರ ಹಿತ ಕಾಪಾಡಲು ಯಾರೂ ಕಾಳಜಿ ವಹಿಸುತ್ತಿಲ್ಲ ರೈತರು ಈ ಸಲ ಬಣ್ಣದ ಮಾತುಗಳಿಗೆ ತಾಂತ್ರಿಕ ತೊಂದರೆ ನೆಪಗಳಿಗೆ ಮಾರು ಹೋಗುವುದಿಲ್ಲ ಶಾಖಾ ಕಾಲುವೆಗೆ 500 ಕೋಟಿ ಅನುದಾನ ಬಿಡುಗಡೆ ಮಾಡುವ ವರೆಗೆ ಸರಕಾರದ ವಿರುದ್ದ ಧರಣಿ ನಡೆಸುತ್ತೆವೆ ಎಂದು ಹರ್ವಾಪೂರ ಗುಡುಗಿದರು. ಉಪ ಚುನಾವಣೆ ವೇಳೆ ನಾನಾ ಯೋಜನೆಗಳಿಗೆ ಸರಕಾರ ಕೋಟಿ ಗಟ್ಟಲೆ ಅನುದಾನ ಬಿಡುಗಡೆ ಮಾಡುತ್ತಿದೆ ರೈತರ ಬದುಕು ಹಸನ ಮಾಡುವ ನೀರಾವರಿ ಯೋಜನೆಗೆ ಸರಕಾರ ಹಣ ಏಕೆ ಬಿಡುಗಡೆ ಮಾಡುತ್ತಿಲ್ಲ ತಿಳಿಯದಾಗಿದೆ ಎಂದರು. ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಅನಿರ್ಥಿಷ್ಟಾವಧಿ ಧರಣ ನಡೆಸಲಾಗುತ್ತಿದೆ 5ಎ. ಕಾಲುವೆ ಯೋಜನೆ ಅನುಷ್ಟಾನಕ್ಕೆ ಸರಕಾರ ಲಿಖಿತ ಭರವಸೆ ನೀಡುವ ತನಕ ಹೋರಾಟ ಮುಂದು ವರೆಯಲಿದೆ ರೈತರನ್ನು ನಿರ್ಲಕ್ಷ್ಯಿಸುವ ಸರಕಾರ ಗಳಿಗೆ ಉಳಿಗಾಲ ವಿಲ್ಲ ಎಂದು ಬಸವರಾಜಪ್ಪ ಗೌಡ ಹರ್ವಾಪೂರ ಹೇಳಿದರು. ಹೋರಾಟ ಸಮಿತಿ ಮುಖಂಡರಾದ ಶಿವನಗೌಡ ವಟಗಲ್,ನಾಗ ರೆಡ್ಡೆಪ್ಪ ದೇವರ ಮನಿ ಇದ್ದರು.

(೧೯,ನ.ಎಂಎಸ್ಕೆ ಪೋಟೋ೦೨)