
ಸಿರವಾರ.ಮಾ.೦೪- ಎನ್‌ಹೆಚ್‌ಎಂ ಒಳಗುತ್ತಿಗೆ ನೌಕರರು ರಾಜ್ಯದಲ್ಲಿ ಸುಮಾರು ೧೫ ವರ್ಷಗಳಿಂದ ಗುತ್ತಿಗೆ ನೌಕರರಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆರೋಗ್ಯ ಇಲಾಖೆಯ ತಾಲೂಕ ಮತ್ತು ಜಿಲ್ಲಾ ಕಚೇರಿಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಈ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಸೇವ ಭದ್ರತೆಯಿಲ್ಲ ಸರ್ಕಾರವು ಕೇವಲ ೧೨ ರಿಂದ ೧೪ ಸಾವಿರ ರೂಪಾಯಿ ಸಂಬಳವನ್ನು ನೀಡುತ್ತಿದೆ. ಇದರಿಂದ ಇಂದಿನ ದುಬಾರಿ ಮಾರುಕಟ್ಟೆಯಲ್ಲಿ ನೌಕರರು ಜೀವನ ನಡೆಸಲು ಕಷ್ಚವಾಗಿದೆ ಮಕ್ಕಳಿಗೆ ಸರಿಯಾಗಿ ಒಳ್ಳೆಯ ಶಿಕ್ಷಣ ಕೂಡಿಸಲು ಆಗದೆ ಮುಂದಿನ ಭವಿಷ್ಯದ ಬಗ್ಗೆ ನೆನದು ಕಣ್ಣಿರಿನಲ್ಲಿ ಕಾಲ ಕಳೆಯುವಂತೆ ಆಗಿದೆ. ಒಂದು ಕನಿಷ್ಠ ವೇತನವೂ ಇಲ್ಲದೆ ಸೇವಾ ಭದ್ರತೆಯೂ ಇಲ್ಲದೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸರ್ಕಾರಕ್ಕೆ ನಾಲ್ಕು ವರ್ಷಗಳಿಂದ ಎನ್‌ಎಚ್‌ಎಮ್ ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡುವಂತೆ ಮನವಿ ನೀಡಿದ್ದೇವೆ ಹಾಗೂ ಮುಷ್ಕರ ಮಾಡಿದಾಗಲೂ ಸರ್ಕಾರ ಭರವಸೆಯನ್ನು ನೀಡಿ ನಂತರ ಯಾವುದೇ ಪ್ರಕ್ರಿಯೆಗಳನ್ನು ಮಾಡದೇ ನಮ್ಮ ಕಣ್ಣಿಗೆ ಮಂಕು ಬೂದಿ ಹೇರಚಿದೆ. ಒಳ ಗುತ್ತಿಗೆ ನೌಕರರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ.
ರಾಜ್ಯದ ಎಲ್ಲಾ ಎನ್‌ಹೆಚ್‌ಎಂ ಒಳಗುತ್ತಿಗೆ ನೌಕರರು ಹುದ್ದೆಯನ್ನು ಖಾಯಂ ಮಾಡುವಂತೆ ಆಗ್ರಹಿಸಿ ದಿ.೧೩.೨. ೨೦೨೩ ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸುತ್ತಿದ್ದೇವೆ. ಇಂದಿಗೆ ೨೦ ನೇ ದಿನ ಮುಷ್ಕರ ಮುಂದುವರೆದಿದೆ. ಸರ್ಕಾರವು ಎನ್‌ಎಚ್‌ಎಮ್ ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ಪ್ರಾರಂಭಿಸುವವರಗೆ ಮುಷ್ಕರ ಹಿಂದೆ ಪಡೆಯುವುದಿಲ್ಲ. ಅನಿರ್ದಿಷ್ಟವಾದಿಯಾಗಿ ನಿರಂತರವಾಗಿ ಮುಷ್ಕರ ನಡೆಯುತ್ತದೆ ಎಂದು ಈ ಮೂಲಕ ಸರ್ಕಾರಕ್ಕೆ ಒಳ ಗುತ್ತಿಗೆ ನೌಕರ ಪ್ರೇಮ್ ಪ್ರಸಾದ್ ಸಿರವಾರ ಖಾಯಂ ಮಾಡಲೇ ಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಒಂದು ವೇಳೆ ನಮ್ಮ ಬೇಡಿಕೆಯನ್ನು ಹೀಡೆರಿಸದೆ ಇದ್ದಲ್ಲಿ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಎನ್‌ಎಚ್‌ಎಮ್ ಒಳ ಗುತ್ತಿಗೆ ನೌಕರರು ಆಡಳಿತ ಪಕ್ಷದ ವಿರುದ್ದ ಮತದಾನ ಮಾಡುವಂತೆ ತಿಳಿ ಹೇಳಿ ನಾವು ಎಲ್ಲಾ ಎನ್‌ಎಚ್‌ಎಮ್ ಒಳ ಗುತ್ತಿಗೆ ನೌಕರರು ಬಿಜೆಪಿ ಪಕ್ಷದ ವಿರುದ್ದ ಮತ ಹಾಕಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.