ಎನ್‌ಸಿಪಿ ನಾಯಕ ಜಯಂತ್‌ಗೆ ಇಡಿ ಸಮನ್ಸ್

ನವದೆಹಲಿ,ಮೇ.೧೧- ಐಎಲ್ ಅಂಡ್ ಎಫ್ ಎಸ್ ಹಣ ಲೇವಾದೇವಿ ಪ್ರಕರಣದಲ್ಲಿ ಎನ್ ಸಿಪಿ ಹಿರಿಯ ನಾಯಕ ಜಯಂತ್ ಪಾಟೀಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಐಎಲ್ ಅಂಡ್ ಎಫ್ ಎಸ್ ನ ಎರಡು ಮಾಜಿ ಲೆಕ್ಕಪರಿಶೋಧಕ ಸಂಸ್ಥೆಗಳಾದ ಬಿಎಸ್ ಆರ್ ಮತ್ತು ಅಸೋಸಿಯೇಟ್ಸ್ ಮತ್ತು ಡೆಲಾಯ್ಟ್ ಹ್ಯಾಸ್ಕಿನ್ಸ್ ಮತ್ತು ಮಾರಾಟಗಳ ವಿರುದ್ಧ ಜಾರಿ ನಿರ್ದೇಶನಾಲ ಶೋದ ನಡೆಸಿದ ಬಳಿಕ ಈ ಸಮನ್ಸ್ ಜಾರಿ ಮಾಡಿದೆ.
ಐಎಲ್ ಆಂಡ್ ಎಫ್ ಎಸ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಜಯಂತ್ ಪಾಟೀಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎನ್ನುವುದನ್ನು ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.
ನಾಳೆ ಹಾಜರಾಗಲು ಸೂಚನೆ:.
ಮಹಾರಾಷ್ಟ್ರ ಎನ್‌ಸಿಪಿ ಮುಖ್ಯಸ್ಥರಾಗಿರುವ ಪಾಟೀಲ್ ಅವರನ್ನು ನಾಳೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟೀಲ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬೈನಲ್ಲಿನ ಇಬ್ಬರು ಲೆಕ್ಕ ಪರಿಶೋಧಕರಿಗೆ ಸಂಬಂಧಿಸಿರುವ ನಿವೇಶನಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಶೋಧಿಸಲಾಗಿದೆ ಎಂದು ಅವರು ತಿಳಿಸಲಾಗಿದೆ.