ಎನ್‌ಡಿಎ ಗೆ ೪೦೦ ಸ್ಥಾನ ನಿಶ್ಚಿತ: ಜೈ ಶಂಕರ್ ಭವಿಷ್ಯ

ಬೆಂಗಳೂರು, ಏ. ೧೫- ಈ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ೪೦೦ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ನಾವು ೪೦೦ ಸ್ಥಾನ ಗೆಲ್ಲುತ್ತೇವೆ ಎಂಬುದು ಕಾಂಗ್ರೆಸ್‌ನ ಚಿಂತೆಗೆ ಕಾರಣವಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು
ಬೆಂಗಳೂರಿನ ಬಿಜೆಪಿಯ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ೩೦೦ ಸ್ಥಾನ ದಾಟಿದ್ದನ್ನು ದೇಶ ನೋಡಿದೆ. ಈಗ ಮೋದಿ ಸರ್ಕಾರ ೪೦೦ ಮುಟ್ಟೋದನ್ನು ದೇಶ ನೋಡಲಿದೆ ಎಂದರು.
ಪ್ರಧಾನಿ ಮೋದಿ ಅವರ ಕೈಗಳನ್ನು ಬಲಪಡಿಸಬೇಕಿದೆ. ಕರ್ನಾಟಕದಲ್ಲೂ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಜೈಶಂಕರ್ ಹೇ ಳಿದರು.
ಬಿಜೆಪಿ ಚುನಾವಣಾ ಪ್ರಣಾಳಿಕೆಯ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿಕಸಿತ ಮತ್ತು ಸುರಕ್ಷಿತ ಭಾರತದ ಬಗ್ಗೆ ಹೇಳಿದ್ದೇವೆ. ಪ್ರಧಾನಿ ಮೋದಿ ಗ್ಯಾರಂಟಿ ಬಗ್ಗೆಯೂ ಪ್ರಸ್ತಾಪಿಸಿದ್ದೇವೆ ಎಂದರು.
ಬಿಜೆಪಿಯ ಸಂಕಲ್ಪ ಪತ್ರದಲ್ಲಿ ನಮ್ಮ ಹತ್ತು ವರ್ಷಗಳ ಸಾಧನೆಯನ್ನು ಜನರ ಮುಂದಿಟ್ಟಿದ್ದೇವೆ. ಹಾಗೆಯೇ ಮುಂದಿನ ಐದು ವರ್ಷಗಳಲ್ಲಿ ಜಾರಿ ಮಾಡಲಿರುವ ಭರವಸೆಗಳನ್ನು ಪ್ರಸ್ತಾಪಿಸಿದ್ದೇವೆ ಎಂದರು.
ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಇಂದು ದೇಶದ ಆರ್ಥಿಕತೆ ಸರಿದಾರಿಯಲ್ಲಿದೆ. ಎಲ್ಲ ವರ್ಗಗಳ ವಿಕಾಸಕ್ಕೆ ಮೋದಿ ಸರ್ಕಾರ ಒತ್ತು ನೀಡಿದೆ. ೨೫ ಕೋಟಿ ಜನ ಕಳೆದ ಹತ್ತು ವರ್ಷಗಳಲ್ಲಿ ಬಡತನದಿಂದ ಮುಕ್ತರಾಗಿದ್ದಾರೆ. ಸಿಎಂ ಗರೀಭ್ ಕಲ್ಯಾಣ ಅನ್ನ ಯೋಜನೆ ಮುಂದಿನ ಐದು ವರ್ಷವೂ ಮುಂದುವರೆಯಲಿದೆ. ಪಿಎಂ ಆವಾಜ್ ಯೋಜನೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ೧೦೦ ಕೋಟಿ ಮನೆಗಳ ನಿರ್ಮಾಣ ಗುರಿ ಹೊಂದಿದ್ದೇವೆ ಎಂದರು.
ಕೋವಿಂಡ್ ನಂತರ ಆರ್ಥಿಕ ಸುಧಾರಣೆಗೆ ಹಲವು ಕ್ರಮ ಕೈಗೊಂಡಿದ್ದು, ದೇಶದ ಆರ್ಥಿಕತೆ ಶಕ್ತಿಯುತವಾಗಲು ಕಾರಣವಾಗಿದೆ. ಮುಂದಿನ ವರ್ಷಗಳಲ್ಲಿ ಜಗತ್ತಿನಲ್ಲೇ ಮೂರನೇ ದೊಡ್ಡ ಆರ್ಥಿಕ ಶಕ್ತಿ ಆಗಿ ಭಾರತ ಹೊರ ಹೊಮ್ಮಲಿದೆ ಎಂದರು.
ವಿಕಸಿತ ಭಾರತದ ಜತೆಗೆ ಸುರಕ್ಷಿತ ಭಾರತ ಭರವಸೆಯನ್ನು ನಾವು ಮಾಡಿದ್ದೇವೆ. ಭಯೋತ್ಪಾದನೆ ತಡೆ, ಗಡಿಗಳ ರಕ್ಷಣೆಗೆ ಮೋದಿ ಸರ್ಕಾರ ಬದ್ಧ ಎಂದರು.
ಈ ಹಿಂದೆ ಹೆಚ್‌ಎಎಲ್ ಮತ್ತು ಅದರ ಷೇರುಗಳ ಬೆಲೆ ಕುಸಿದಿತ್ತು. ಈಗ ಹೆಚ್‌ಎಎಲ್ ಷೇರುಗಳ ಬೆಲೆ ೩ ಸಾವಿರ ದಾಟಿದೆ. ಹೆಚ್‌ಎಎಲ್ ಹಲವು ಮೈಲಿಗಲನ್ನು ಸಾಧಿಸಿದೆ ಎಂದು ಅವರು ಹೇಳಿದರು.ಬಿಜೆಪಿಯ ಪ್ರಣಾಳಿಕೆಯಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆಯೂ ಭರವಸೆ ಇದೆ. ಬೆಂಗಳೂರಿಗೆ ಸಬ್ ಹರ್ಬನ್ ಯೋಜನೆ, ವಿಮಾನ ನಿಲ್ದಾಣದ ೨ನೇ ಟರ್ಮಿನಲ್ ನಿರ್ಮಾಣವನ್ನು ಮಾಡಲಾಗಿದೆ. ಐಟಿ-ಬಿಟಿ ಕಂಪನಿಗಳಿಗೆ ಬಲ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಮುಂದಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸವಾಲಿದೆ ಅದನ್ನು ದಿಟ್ಟವಾಗಿ ಎದುರಿಸುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದೆ ಎಂದರು.
ಭಾರತೀಯರಿದ್ದ ಹಡಗು ಇರಾನ್ ವಶದಲ್ಲಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದ ಒಳಗಷ್ಟೇ ಅಲ್ಲ, ಹೊರ ದೇಶದಲ್ಲೂ ಮೋದಿ ಅವರೇ ಗ್ಯಾರಂಟಿ. ಇರಾನ್ ಸರ್ಕಾರದ ಜತೆ ಭಾರತೀಯರ ಬಿಡುಗಡೆ ಬಗ್ಗೆ ಮಾತನಾಡಿದ್ದೇನೆ. ಆದಷ್ಟು ಬೇಗ ಇರಾನ್ ಭಾರತೀಯರನ್ನು ಬಿಡುಗಡೆ ಮಾಡುವ ವಿಶ್ವಾಸ ಇದೆ ಎಂದರು.

ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೆ ಚುನಾವಣಾ ಆಯೋಗದ ಅನಮತಿ ಕೇಳಲಾಗಿದೆ ಎಂದು ವಿದೇಶಾಂಗ ಸಚಿವ ಆರ್. ಜೈಶಂಕರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕರ್ನಾಟಕ ಮಾತ್ರವಲ್ಲ ಹಲವು ರಾಜ್ಯಗಳಿಗೆ ಎನ್‌ಡಿಆರ್‌ಆರ್ ಅಡಿ ಬರ ಪರಿಹಾರ ಬಿಡುಗಡೆ ಬಾಕಿ ಇದೆ. ಪರಿಹಾರದ ಬಿಡುಗಡೆಗೆ ಆಯೋಗದ ಅನುಮತಿ ಕೇಳಲಾಗಿದೆ ಎಂದರು.
ಈಗ ಪರಿಹಾರ ಬಿಡುಗಡೆ ವಿಚಾರ ಚುನಾವಣಾ ಆಯೋಗದ ಅಂಗಳದಲ್ಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು
ಎನ್‌ಆರ್‌ಆರ್‌ನ ಅದರದೆ ಆದ ನಿಯಮಗಳಿವೆ. ನಿಯಮಗಳಂತೆ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡುತ್ತದೆ ಎಂದು ಅವರು ಹೇಳಿದರು.