ಎನ್‌ಡಿಎ ಅವಧಿಯಲ್ಲಿ ನೇಮಕಾತಿ ಹೆಚ್ಚಳ

ನವದೆಹಲಿ, ಫೆ. ೧೨- ಯುಪಿಎ ಸರ್ಕಾರ ೧೦ ವರ್ಷಗಳ ಆಡಳಿತ ಅವಧಿಗಿಂತ ಹೆಚ್ಚಾಗಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ೧.೫ ಪಟ್ಟು ಹೆಚ್ಚು ಸರ್ಕಾರಿ ಉದ್ಯೋಗಿಗಳನ್ನು ಒದಗಿಸಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಕೇಂದ್ರ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ನೇಮಕಾತಿಗೆ ಸುದೀರ್ಘ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ೧೦ ವರ್ಷಗಳ ಅವಧಿಯಲ್ಲಿ ತ್ವರಿತವಾಗಿ ನೇಮಕಾತಿಯನ್ನು ಮಾಡಲಾಗಿದೆ ಎಂದು ಹೇಳಿದರು.ರಾಜಧಾನಿ ದೆಹಲಿಯಲ್ಲಿಂದು ದಾಖಲೆಯ ೧ ಲಕ್ಷ ಜನರಿಗೆ ರೋಜ್‌ಗಾರ್ ಮೇಳದ ಯೋಜನೆಯಡಿಯಲ್ಲಿ ವಿಡೀಯೋ ಕಾನ್ಫೆರೆನ್ಸ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಿ ಮೋದಿ ಮಾತನಾಡಿದರು.ಯುಪಿಎ ಸರ್ಕಾರದಲ್ಲಿ ಉದ್ಯೋಗ ಜಾಹೀರಾತಿನ ಸಮಸ್ಯೆಯಿಂದ ನೇಮಕಾತಿ ಪತ್ರಗಳನ್ನು ವಿತರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಕೇಂದ್ರ ದಲ್ಲಿ ತಾವು ಅಧಿಕಾರ ವಹಿಸಿಕೊಂಡ ನಂತರ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕತೆ ಕಾಯ್ದೆಕೊಂಡಿದ್ದೇವೆ ಎಂದು ಕಾಂಗ್ರೆಸ್‌ನ ಆಡಳಿತ ವೈಫಲ್ಯವನ್ನು ಟೀಕಿಸಿದರು.
ನಿಗದಿತ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರಯತ್ನಗಳು ಮುಂದುವರೆದಿವೆ. ರೋಜ್‌ಗಾರ್ ಮೇಳದ ಅಡಿಯಲ್ಲಿ ಆಯ್ಕೆಯಾಗಿರುವ ಸಿಬ್ಬಂದಿಗಳನ್ನು ಕಂದಾಯ, ಉನ್ನತ ಶಿಕ್ಷಣ, ಗೃಹ ಅಣುಶಕ್ತಿ, ಹಣಕಾಸು ಸೇವೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಕ್ಷಣೆ ವ್ಯವಹಾರಗಳು, ರೈಲ್ವೆ ಇಲಾಖೆಯ ವಿವಿಧ ಸಚಿವಾಲಯಗಳಲ್ಲಿ ಮರುಸೇರ್ಪಡೆ ಮಾಡಲಾಗುವುದು ಎಂದರು.೧ ಕೋಟಿ ಮನೆಗಳ ಛಾವಣಿಗಳ ಮೇಲೆ ಸೌರಶಕ್ತಿ ಅಳವಡಿಕೆ, ಮೂಲಸೌಕರ್ಯಕ್ಕಾಗಿ ಹೆಚ್ಚಿನ ಪ್ರಮಾಣ ಹೂಡಿಕೆ ಮಾಡಿ ಉದ್ಯೋಗ ಅವಕಾಶವನ್ನು ಕಲ್ಪಿಸಲಾಗಿದೆ. ೧.೨೫ ಲಕ್ಷ ಸ್ಟಾರ್ಪಪ್‌ಗಳ ಮೂಲಕ ಸ್ಟಾರ್ಪಟ್ ಕ್ಷೇತ್ರದಲ್ಲಿ ಭಾರತವು ವಿಶ್ವದ ೩ನೇ ದೊಡ್ಡ ದೇಶವಾಗಿ ಹೊರಹೊಮ್ಮಿದೆ ಎಂದ ಅವರು. ಯುವಕರು ಸಣ್ಣ ನಗರಗಳಲ್ಲಿ ತಮ್ಮದೇ ಸಂಸ್ಥೆಗಳನ್ನು ಸ್ಥಾಪಿಸಿದ್ದು ಇದರಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತಿವೆ ಎಂದು ಹೇಳಿದರು.
ಸ್ಟಾರ್ಪಪ್‌ಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಸಂಶೋಧನೆ ಹಾಗೂ ನಾವೀನ್ಯತೆ ವಲಯಕ್ಕೆ ೧ ಲಕ್ಷ ಕೋಟಿ ನೀಡಲಾಗಿದೆ ಎಂದು ಮೋದಿ ತಿಳಿಸಿದರು.
ಮೋದಿ ನೇತೃತ್ವದ ಸರ್ಕಾರ ಒಂದೂವರೆ ವರ್ಷದಲ್ಲಿ ೮ ಲಕ್ಷ ಉದ್ಯೋಗ ಕಲ್ಪಿಸಿದೆ. ಈ ಹಿಂದೆ ೭೦ ಸಾವಿರ ಮಂದಿಗೆ ನೇಮಕಾತಿ ಪತ್ರ ನೀಡಿತ್ತು. ಇಂದು ೧ ಲಕ್ಷ ನೇಮಕಾತಿ ಪತ್ರ ವಿತರಿಸಿರುವುದು ಅತ್ಯಂತ ಗರಿಷ್ಠ ಮಟ್ಟದ್ದಾಗಿದೆ.