ಎನ್‌ಡಿಎಗೆ ಶೇ.೫೭ರಷ್ಟು ಮತ: ಸಮೀಕ್ಷೆ ಬಹಿರಂಗ

ನವದೆಹಲಿ,ಸೆ.೨೪- ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕಾರ ಮಾಡಿದ ನಂತರ ತಕ್ಷಣಕ್ಕೆ ಲೋಕಸಭೆ ಚುನಾವಣೆ ನಡೆದರೆ ಹಿಂದುಳಿದ ವರ್ಗದ ಮಹಿಳೆಯರು ಶೇ.೫೭ರಷ್ಟು ಎನ್‌ಡಿಎಗೆ, ಶೇ.೩೦ರಷ್ಟು ಇಂಡಿಯಾಗೆ ಮತ್ತು ಶೇ.೧೩ರಷ್ಟು ಮಂದಿ ಇತರರಿಗೆ ಮತ ಹಾಕಲಿದ್ದಾರೆ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ.
ಸಂಸತ್ತಿನ ವಿಶೇಷ ಅಧಿವೇಶನದ ಕೊನೆಯ ದಿನದಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ನಡೆಸಲಾದ ಸಮೀಕ್ಷೆಯಲ್ಲಿ ಸದ್ಯ ಮಹಿಳೆಯರಿಗೆ ಮೀಸಲಿರುವ ೮೪ ಕ್ಷೇತ್ರಗಳಿಂದ ಮಾಹಿತಿ ಸಂಗ್ರಹಿಸಿ ಈ ವಿಷಯ ಹೊರ ಹಾಕಿದ್ದಾರೆ.
ಇನ್ನು ಪುರುಷರ ವಿಷಯದಲ್ಲಿ ಶೇಕಡಾ ೫೬ ರಷ್ಟು ಮಂದಿ ಎನ್‌ಡಿಎಗೆ ಶೇಕಡಾ ೩೧ ರಷ್ಟು ಇಂಡಿಯಾಗೆ ಮತ್ತು ಶೇಕಡಾ ೧೩ರಷ್ಟು ಇತರರಿಗೆ ಮತ ಹಾಕುತ್ತಾರೆ. ಒಟ್ಟಾರೆ ಹಿಂದುಳಿದ ಮತದಾರರಿಗೆ ಸಂಬಂಧಿಸಿದಂತೆ ಶೇಕಡಾವಾರು ಪ್ರಮಾಣ ಎನ್ ಡಿಎ ಪಾಲಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ವಿವಿಧ ರಾಜ್ಯಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಲೋಕಸಬೆಗೆ ತಕ್ಷಣ ಚುನಾವಣೆ ನಡೆದರೆ ಮಹಿಳೆಯರ ಮತ ಯಾವ ಪಕ್ಷಕ್ಕೆ ಎಂಬ ವಿಷಯ ಮುಂದಿಟ್ಟುಕೊಂಡು ಪ್ರಶ್ನೆಗಳನ್ನು ಕೇಳಲಾಗಿತ್ತು. ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಶೇ. ೩೩ ರಷ್ಟು ಮೀಸಲಾತಿ ಜಾರಿ ನಂತರ ಎನ್ ಡಿಎ ಪರ ಒಬಿಸಿ ಮಂದಿ ಒಲವು ತೋರಿದ್ದಾರೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಹುಕಾಲದಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ.ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಜೊತೆಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಪ್ರಾತಿನಿಧ್ಯದ ನಿಬಂಧನೆಯೊಂದಿಗೆ ಅದನ್ನು ತಕ್ಷ
ಣವೇ ಜಾರಿಗೆ ತರಬೇಕೆಂದು ಒತ್ತಾಯಿಸಿದೆ.
ಮೀಸಲಾತಿಯನ್ನು ಹಂಚಿಕೆ ಮಾಡ ದಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ಒಬಿಸಿ ವಿರೋಧಿ ಎಂದು ಆರೋಪಿಸಿದೆ. ಇದರ ತಕ್ಷ ಣದ ಅನುಷ್ಠಾನ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದು ಒಬಿಸಿಗಳಿಗೆ ಮೀಸಲಾತಿ ನೀಡದಿದ್ದರೆ ಶಾಸನ “ಅಪೂರ್ಣ ಎಂದು ಹೇಳಿದ್ದಾರೆ.