ಎನ್‍ಡಿಆರ್‍ಆಫ್ ನಿಧಿಯಲ್ಲಿ ರೈತರಿಗೆ ದ್ವಿಗುಣ ಪರಿಹಾರ ಕೊಡಿಸಿ

ಕಲಬುರಗಿ,ನ.23-ಬರ ಪೀಡಿತ ಕಲಬುರಗಿ ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರದಿಂದ ಎನ್‍ಡಿಆರ್‍ಆಫ್ ನಿಧಿಯಲ್ಲಿ ದ್ವಿಗುಣ ಪರಿಹಾರ ಕೊಡಿಸಬೇಕು ವiತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಒಣ ಬೇಸಾಯಕ್ಕಾಗಿ ರೈತರು ಪಡೆದಿರುವ ಬೆಳೆ ಸಾಲ ಮನ್ನಾ ಮಾಡಿಸಬೇಕು ಎಂದು ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಆರ್.ಅಶೋಕ ಅವರನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಾ.ಸಿದ್ರಾಮಪ್ಪ ಪಾಟೀಲ ದಂಗಾಪೂರ್ ಒತ್ತಾಯಿಸಿದ್ದಾರೆ.
ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರಥಮ ನಿಲುವಳಿಯಾಗಿ ಬರ ಪರಿಹಾರ ಮತ್ತು ರೈತರ ಸಾಲ ಮನ್ನಾ ವಿಷಯ ಚರ್ಚೆಗೆ ತರಲಾಗುವುದು ಎಂದು ಆರ್.ಅಶೋಕ ಅವರು ಹೇಳಿಕೆ ನೀಡಿರುವುದನ್ನು ಸ್ವಾಗತಿಸಿರುವ ದಂಗಾಪೂರ್ ಅವರು ಕೇಂದ್ರ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಕೊಡಿಸಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಭಗವಂತ ಖೂಬಾ ಮತ್ತು ಎ.ನಾರಾಯಣ ಸ್ವಾಮಿ ಅವರಿಗೆ ರಾಜ್ಯ ಕೃಷಿಕ ಸಮಾಜದ ವತಿಯಿಂದ ಈಗಾಗಲೆ ಮನವಿ ಪತ್ರ ಸಲ್ಲಿಸಿ ರಾಜ್ಯದ ರೈತರಿಗೆ ದ್ವಿಗುಣ ಪರಿಹಾರ ನೀಡಲು ಮನವಿ ಮಾಡಲಾಗಿದೆ. ಅದರಂತೆ ಆರ್.ಅಶೋಕ ಅವರು ಸಹ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಜ್ಯದ ರೈತರಿಗೆ ದ್ವಿಗುಣ ಪರಿಹಾರ ಕೊಡಿಸಬೇಕು ಎಂದು ದಂಗಾಪೂರ ಆಗ್ರಹಿಸಿದ್ದಾರೆ.