ಎನ್ಟಿಪಿಸಿ ಸಂತ್ರಸ್ತರ ಬೇಡಿಕೆಗೆ ಸ್ಪಂದನೆ

ಕೊಲ್ಹಾರ:ಮಾ.3: ಸಚಿವ ಶಿವಾನಂದ ಪಾಟೀಲ್ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಾಧಿತ ಸಂತ್ರಸ್ತರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ ಎಂದು ಕೂಡಗಿ ವಿದ್ಯುತ್ ಸ್ಥಾವರ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಮುಖಂಡ ಸಿ.ಪಿ ಪಾಟೀಲ್ ಹೇಳಿದರು.
ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಟೌನ್ ಶಿಪ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಎನ್ಟಿಪಿಸಿ ಬಾಧಿತ ಸಂತ್ರಸ್ತರ ಪ್ರಮುಖ ಬೇಡಿಕೆಗಳ ಪರಿಹಾರಕ್ಕಾಗಿ ಒತ್ತಾಯಿಸಲಾಗಿತ್ತು. ಅದರಂತೆ ಸಚಿವ ಶಿವಾನಂದ ಪಾಟೀಲರು ಉಷ್ಣ ವಿದ್ಯುತ್ ಸ್ಥಾವರದ ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ಬಾಧಿತ ಸಂತ್ರಸ್ತರ ಬೇಡಿಕೆಗಳಾದ ಖಾಯಂ ಉದ್ಯೋಗ ವಿಷಯವಾಗಿ 2 ತಿಂಗಳಲ್ಲಿ 34 ಹುದ್ದೆಗಳನ್ನು ತುಂಬಲು ಅಧಿಕಾರಿಗಳು ಪ್ರಕ್ರಿಯೆ ನಡೆಸಿದ್ದಾರೆ.
ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ 4 ಲಕ್ಷದಂತೆ ಹೆಚ್ಚುವರಿ ಪರಿಹಾರ ವಿಷಯವಾಗಿ ಎನ್ಟಿಪಿಸಿ 3 ತಿಂಗಳೊಳಗೆ ನಿರ್ಧಾರದ ಜೊತೆಗೆ ಭೂಮಿ ಸವಳು, ಜವಳು ಜಮೀನಿಗೆ 20 ದಿನಗಳಲ್ಲಿ ಪರಿಹಾರ ನೀಡಲಾಗವುದು ಜೊತೆಗೆ ಖಾಯಂ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ಉಷ್ಣ ವಿದ್ಯುತ್ ಸ್ಥಾವರದ ಅಧಿಕಾರಿಗಳು ಸಂತ್ರಸ್ತರಿಗೆ ನೀಡಿದ್ದಾರೆ ಎಂದು ಅವರು ಹೇಳಿದರು.
ಹೋರಾಟ ಸಮಿತಿ ಪದಾಧಿಕಾರಿಗಳಾದ ಸುರೇಶ್ ದಳವಾಯಿ, ಅರವಿಂದ ಕೊಪ್ಪದ, ಮಲ್ಲಿಕಾರ್ಜುನ ವೀರಣ್ಣನವರ, ನಾರಾಯಣ ಶಿರಗೇರ, ದಯಾನಂದ ಕೊಪ್ಪದ, ಮಹಾಂತೇಶ ಕೊಪ್ಪದ, ಹುಮಾಯನ ಗಡೇದ, ಹೊನ್ನಪ್ಪ ಅಂಗಡಿ ಹಾಗೂ ಇತರರು ಉಪಸ್ಥಿತರಿದ್ದರು.