ಎನ್‍ಟಿಎಂ ಶಾಲೆ ಉಳಿವಿಗೆ ಮುಂದುವರಿದ ಹೋರಾಟ

ಮೈಸೂರು: ನ.03:- ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಡಾ. ರಾಜ್‍ಕುಮಾರ್ ಅವರ ಪುತ್ತಳಿ ಮುಂಭಾಗ ಎನ್‍ಟಿಎಂ ಶಾಲೆಯನ್ನು ಕೆಡವಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳಿಗೆ ದ್ರೋಹ ಎಸಗಿರುವ ರಾಮಕೃಷ್ಣ ಆಶ್ರಮದವರು ಕೂಡಲೇ ಶಾಲೆಯನ್ನು ಮರು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಬಡವರ ಮಕ್ಕಳು ಕಲಿಯುತ್ತಿದ್ದ ಶಾಲೆಯನ್ನು ರಾಮಕೃಷ್ಣ ಆಶ್ರಮದವರು ಕೆಡವಿದ್ದಾರೆ. ಅದೇ ಸ್ಥಳದಲ್ಲಿ ಹೊಸದಾಗಿ ಶಾಲೆ ನಿರ್ಮಿಸುತ್ತೇವೆ ಎಂದು ಪ್ರಮುಖರ ಮುಂದೆ ಭರವಸೆ ನೀಡಿದ್ದರು. ಇದೀಗ ತಮ್ಮ ಒಪ್ಪಂದವನ್ನು ಮರೆತಿದ್ದಾರೆ. ಕೊಟ್ಟ ಮಾತನ್ನು ಉಲ್ಲಂಘಿಸಿರುವ ರಾಮಕೃಷ್ಣ ಮಠದವರು ಶಾಲೆಯನ್ನು ತೆರವುಗೊಳಿಸಿದ್ದಾರೆ. ಹೀಗಾಗಿ ಮತ್ತೆ ಶಾಲೆ ಉಳಿಸಿ ಹೋರಾಟ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಸಂಚಾಲಕ ಎಂ.ಮೋಹನ್‍ಕುವಾರ್‍ಗೌಡ, ರವೀಗೌಡ, ಕೃಷ್ಣ, ರವಿ, ರಾಜ್ ಕಿಶೋರ್, ಸುರೇಶ್, ಪ್ರಕಾಶ್, , ಪಾರ್ಥಸಾರಥಿ. ಬಾಲಕಲೃಷ್ಣ ಸಂಗಾಪುರ, ಬಸವರಾಜ್, ಸ್ವಾಮಿ, ಪ್ರಕಾಶ್, ಕರಿಗೌಡ, ಹೊಸಕೋಟೆ ಬಸವರಾಜು ಮತ್ತಿತರರು ಹಾಜರಿದ್ದರು.