ಎನ್ಐಎ ತನಿಖಾಧಿಕಾರಿಗಳಿಂದ ಸಂಪತ್ ರಾಜ್ ವಿಚಾರಣೆ

ಬೆಂಗಳೂರು, ನ.20- ಡಿಜೆ ಮತ್ತು ಕೆಜಿ ಹಳ್ಳಿ ಗಲಾಟೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್​ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಎನ್​ಐಎ ತನಿಖಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಸಂಪತ್​ ರಾಜ್ ವಿಚಾರಣೆ ಸಂಬಂಧ ಎನ್​ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ನಗರದ ಸಿಸಿಹೆಚ್​ 67 ನೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕೆ ನ್ಯಾಯಾಲಯ ಕೂಡ ಸಮ್ಮತಿ ನೀಡಿದೆ.

ಜೈಲಿನಲ್ಲೇ ವಿಚಾರಣೆ ನಡೆಸುವಂತೆ ಸೂಚನೆ ಹೇಳಿದ್ದು, ಇದೇ ತಿಂಗಳ 23 ಮತ್ತು 24 ರಂದು ಜೈಲಿನಲ್ಲಿಯೇ ವಿಚಾರಣೆ ಮಾಡುವಂತೆ ಎನ್​ಐಎ ಅಧಿಕಾರಿಗಳಿಗೆ ಕೋರ್ಟ್​ ನಿರ್ದೇಶನ ನೀಡಿದೆ.

ಗಂಭೀರ ಸ್ವರೂಪ ಪಡೆದುಕೊಂಡಿರುವ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಈಗಾಗಲೇ ಯುಎಪಿಎ ಆಕ್ಟ್ ಅಡಿ ಕೇಸ್​ ದಾಖಲಾಗಿದೆ. ಜತೆಗೆ ನಗರದ ವಿವಿಧ ಕಡೆ ದಾಳಿ ನಡೆಸಲಾಗಿದೆ.