ಎನ್‍ಐಇ ಕಾಲೇಜಿನ ಪೆÇ್ರಫೆಸರ್ ಡಾ.ಸಿ.ಕೆ.ವನಮಾಲರಿಗೆ ವಿಪ್ರ ಮಹಿಳಾ ರತ್ನ ಪ್ರಶಸ್ತಿ

ಸಂಜೆವಾಣಿ ನ್ಯೂಸ್
ಮೈಸೂರು: ಏ.01:- ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ವಿಪ್ರ ಸಹಾಯವಾಣಿ ವತಿಯಿಂದ ವಿಶ್ವೇಶ್ವರ ನಗರದಲ್ಲಿರುವ ಕೆ ವಿ ಆರ್ ವೆಡ್ಡಿಂಗ್ ಬಿಲ್ಸ್ ಕಲ್ಯಾಣ ಮಂಟಪದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶಿಕ್ಷಣ ಕ್ಷೇತ್ರದಿಂದ ಶ್ರೀರಾಂಪುರದ ನಿವಾಸಿ ಎನ್ ಐ ಇ ಕಾಲೇಜಿನ ಪೆÇ್ರಫೆಸರ್ ಡಾ.ಸಿ.ಕೆ.ವನಮಾಲ ರವರಿಗೆ ವಿಪ್ರ ಮಹಿಳಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ರೂಪದರ್ಶಿ ಹಾಗೂ ಅಂಕಣಕಾರರಾದ ರೂಪ ಅಯ್ಯರ್,ಸೈಕಲ್ ಪ್ಯೂರ್ ಅಗರಬತ್ತಿ
ಸುಗಂಧ ದ್ರವ್ಯಗಳ ತಯಾರಕರು ಹಾಗೂ ಮುಖ್ಯಸ್ಥರದ ಜಾನವಿ ಮೂರ್ತಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ವಿಪ್ರ ಮಹಿಳಾ ಸಂಗಮ ಅಧ್ಯಕ್ಷರಾದ ಡಾಕ್ಟರ್ ಲಕ್ಷ್ಮಿ ದೇವಿ, ಕಿರುತರೆ ನಟ ನಾರಾಯಣಸ್ವಾಮಿ, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಹಾಗೂ ಇನ್ನಿತರರು ಹಾಜರಿದ್ದರು