ಎನ್‌ಎಸ್ ಬೋಸರಾಜುಗೆ ಟಿಕೆಟ್ ನೀಡಲು ಒತ್ತಾಯ

ರಾಯಚೂರು,ಏ.೧೬- ವಿಧಾನಸಭಾ ಚುನಾವಣೆಯಲ್ಲಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಎನ್, ಎಸ್, ಬೋಸರಾಜ್ ಅವರು ಬಿಟ್ಟರೇ ಉಳಿದವರೆಲ್ಲ ಹಂಬಲಿಸುತ್ತಿದ್ದಾರೆ ಅವರೆಲ್ಲಾ ಅಸಮರ್ಥರಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಶೀರ್ ದ್ದೀನ್ ತಿಳಿಸಿದರು.
ಇಂದು ನಗರದಲ್ಲಿ ಎನ್ ಎಸ್ ಬೋಸರಾಜ್ ಅವರ ಸಾವಿರಾರು ಜನ ಬೆಂಬಲಿಗರು ಸಭೆ ನಡೆಸಿದರು, ಈ ಸಂದರ್ಭದಲ್ಲಿ ಎನ್ ಎಸ್ ಬೋಸರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು, ಅವರಿಗೆ ಕೈ ತಪ್ಪಿದ್ದೆ ಆದರೆ ರವಿ ಬೋಸರಾಜ್ ಅವರನ್ನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು.
ಪಕ್ಷವನ್ನು ಎಲ್ಲರೂ ಸೇರಿ ಬಲಪಡಿಸೋಣ, ಕಾಂಗ್ರೆಸ್ ಟಿಕೆಟ್ ನೋಡುತ್ತಾರೆ ಎನ್ನುವ ವಿಶ್ವಾಸವಿದೆ,ಕೆಲವರು ಹಣದ ಆಸೆಗೆ ಪಕ್ಷದ ಟಿಕೆಟ್ ಪಡೆಯುತ್ತಿದ್ದಾರೆ,ಅವರು ಯಾರು ಗೆಲುವು ಪಡೆಯಲು ಟಿಕೆಟ್ ಕೇಳುತ್ತಿಲ್ಲ, ಹಾಲಿ ಶಾಸಕರ ವಿರುದ್ಧ ಸೋಲಬೇಕೆಂದು ಟಿಕೆಟ್ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಮಾತನಾಡಿದರು.
ಕಳೆದ ೩೦ವರ್ಷದಿಂದ ಪಕ್ಷದಲ್ಲಿ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿರುವ ಎನ್ ಎಸ್ ಬೋಸರಾಜ್ ಅವರಿಗೆ ಟಿಕೆಟ್ ನೀಡದಿದ್ದರೆ, ಜಿಲ್ಲೆಯ ಏಳು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೊಡೆತ ಬೀಳುತ್ತದೆ, ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು.