ಎನ್‍ಎಸ್‍ಎಸ್ ಶಿಭಿರಾರ್ಥಿಗಳಿಗೆ 5ದಿನದ ಕಾರ್ಯಾಗಾರ:ಪಾಟೀಲ

ತಾಳಿಕೋಟೆ:ಜು.21:75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಇಲಾಖೆ ಹಾಗೂ ಶ್ರೀ ಎಚ್.ಎಸ್.ಪಾಟೀಲ ಸ್ವತಂತ್ರ ಪಧವಿಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಗೆ ದಿ. 22 ಶುಕ್ರವಾರರಿಂದ ದಿ.26 ಮಂಗಳವಾರದ ವರೆಗೆ 5 ದಿನಗಳ ಕಾರ್ಯಾಗಾರ ಹಾಗೂ ಶ್ರಮದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಂಗಮಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಹೇಳಿದರು.

ಬುಧವಾರರಂದು ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ಸಭಾಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈ ಶಿಬಿರದ ಉದ್ದೇಶ ಸ್ವಚ್ಚ ಭಾರತ, ಶ್ರೇಷ್ಠ ಭಾರತ, ಯುವಶಕ್ತಿ ದೇಶದ ಆಸ್ತಿ ಎಂಬ ವಿಷಯದ ಮೇಲೆ ಅನೇಕ ಕಾರ್ಯಕ್ರಮಗಳು ಪ.ಪೂ.ಕಾಲೇಜ್ ಆವರಣದಲ್ಲಿ ಜರುಗಲಿವೆ ಎಂದರು.

ದಿ.22 ಶುಕ್ರವಾರರಂದು ಸಮಾಜದ ಅಭ್ಯುದಯವೇ ರಾಷ್ಟ್ರದ ಅಭ್ಯುದಯ ಎಂಬ ವಿಷಯದ ಮೇಲೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಅಂದು ಶಿಬಿರದ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಉದ್ಘಾಟನೆ ನಡೆಯಲಿದೆ ಬೆಳಿಗ್ಗೆ 9 ಗಂಟೆಗೆ ದ್ವಜಾರೋಹಣ-ರಾಷ್ಟ್ರಗೀತೆ ಜರುಗಲಿದೆ. ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗಶಿವಾಚಾರ್ಯ ಮಹಾ ಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರಿನ ಗೌರವ ಕಾರ್ಯದರ್ಶಿ ಶ್ರೀಮತಿ ಇಂದಿರಾ ಕೃಷ್ಣಪ್ಪ ಅವರು ನೇರವೇರಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಖ್ಯಾತ ಸಾಹಿತಿ ಬಿ.ಆರ್.ಪೊಲೀಸ್‍ಪಾಟೀಲ, ಸಂಯೋಜಕರಾದ ಡಾ.ವ್ಹಿ.ಪ್ರಶಾಂತ, ನಿವೃತ್ತ ಪ್ರಾಚಾರ್ಯ ಆರ್.ಎನ್.ಪಾಟೀಲ, ಎಚ್.ಎಸ್.ಪಾಟೀಲ ಪ.ಪೂ.ಕಾಲೇಜ್ ಪ್ರಾಂಶುಪಾಲರಾದ ಶ್ರೀಮತಿ ಎಂ.ಎಸ್.ಬಿರಾದಾರ, ಉಪನ್ಯಾಸಕರಾದ ಪ್ರಕಾಶ ಪಾಟೀಲ ಅವರು ಆಗಮಿಸಲಿದ್ದಾರೆಂದರು.

ದಿ.23ರಂದು ಶಿಕ್ಷಣವೇ ಜೀವನ ಜೀವನವೇ ಶಿಕ್ಷಣ ಎಂಬ ವಿಷಯದ ಮೇಲೆ ನಡೆಯಲಿರುವ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಫೀರಾಪೂರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಬಿ.ದಮ್ಮೂರಮಠ ಅವರು ಆಗಮಿಸಲಿದ್ದು ಸ್ವಚ್ಚ ಗ್ರಾಮ ಸ್ವಸ್ಥ ಗ್ರಾಮ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದು ಈ ಸಮಯದಲ್ಲಿ ತಹಶಿಲ್ದಾರ ಶ್ರೀಧರ ಗೋಟೂರ, ಪ್ರಾಚಾರ್ಯ ಭೀಮಣ್ಣ ಅರಕೇರಿ, ಜೆಎಸ್‍ಜಿ ಪ.ಪೂ.ಕಾಲೇಜ್ ನಿರ್ದೇಶಕ ಶ್ರೀಕಾಂತ ಪತ್ತಾರ, ಶಿಕ್ಷಕ ಎಸ್.ವ್ಹಿ.ಜಾಮಗೊಂಡಿ, ಯು.ಎಚ್.ಗಟನೂರ, ಭಾಗವಹಿಸಲಿದ್ದು ಅಂದೇ ಮದ್ಯಾಹ್ನ 3 ಗಂಟೆಗೆ ಭಾರತೀಯರಿಗೆ ಜಾತ್ಯಾತೀತ ಮನೋಭಾವದ ಅಗತ್ಯತೆ ಮತ್ತು ಸಾಧ್ಯಾಸಾಧ್ಯತೆಗಳು ಎಂಬ ವಿಷಯದ ಮೇಲೆ ಶಿಬಿರಾರ್ಥಿಗಳಿಗೆ ಚರ್ಚಾ ಸ್ಪರ್ದೆ ನಡೆಯಲಿದೆ ಎಂದು ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ತಿಳಿಸಿದರು.

ದಿ.24ರವಿವಾರರಂದು ಆತ್ಮ ವಿಸ್ವಾಸವೇ ಯಶಸ್ವಿನ ಮೆಟ್ಟಿಲು ಎಂಬ ವಿಷಯದ ಮೇಲೆ ಕಾರ್ಯಕ್ರಮ ನಡೆಯಲಿದ್ದು ವಿಶೇಷ ಉಪನ್ಯಾಸಕರಾಗಿ ಹೆಗ್ಗನದೊಡ್ಡಿ ಪ್ರೌಢ ಶಾಲೆಯ ಸಹ ಶಿಕ್ಷಕ ಸಾಹೇಬಗೌಡ ಬಿರಾದಾರ ಅವರು ಉಪನ್ಯಾಸಕರಾಗಿ ಆಗಮಿಸಲಿದ್ದು ರಾಷ್ಟ್ರ ನಿರ್ಮಾಣದಲ್ಲಿ ಎನ್.ಎಸ್.ಎಸ್.ಪಾತ್ರ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದು ಈ ಸಮಯದಲ್ಲಿ ಎಸ್.ಕೆ.ಪ.ಪೂ.ಕಾಲೇಜ್ ಪ್ರಾಚಾರ್ಯ ಕೆ.ಕಿಶೋರಕುಮಾರ, ಸರ್ವಜ್ಞ ವಿದ್ಯಾಪೀಠ ಪ್ರೌಢ ಶಾಲೆಯ ಅಧ್ಯಕ್ಷ ಸಿದ್ದನಗೌಡ ಮಂಗಳೂರ, ಪ್ರಾಚಾರ್ಯ ಎಚ್.ಬಿ.ನಡುವಿನಮನಿ, ಎಂ.ಎಸ್.ರಾಯಗೊಂಡ, ಆಗಮಿಸಲಿದ್ದಾರೆ, ಅಂದೇ ಮದ್ಯಾಹ್ನ 3 ಗಂಟೆಯಿಂದ ಶಿಬಿರಾರ್ಥಿಗಳಿಗೆ ಪ್ರಬಂದ ರಚನಾ ಸ್ಪರ್ದೆ ಯೊಳಗೊಂಡು ವಿವಿಧ ಸ್ಪರ್ದೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ದಿ.25 ಸೋಮವಾರರಂದು ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ವಿಷಯದ ಮೇಲೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕಪ್ಪತಗುಡ್ಡ ನಂದಿವೇರಿ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ. ಡಾ.ವೂಡೇ.ಪಿ.ಕೃಷ್ಣ ಅವರು ಆಗಮಿಸಲಿದ್ದು ಉಪನ್ಯಾಸಕರಾಗಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಮಂಗಲಾ ಕೊಳೂರ ಅವರು ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದು ಈ ಸಮಯದಲ್ಲಿ ಸಾಹಿತಿ ಬಿ.ಆರ್.ಪೊಲೀಸ್‍ಪಾಟೀಲ, ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಉಪನ್ಯಾಸಕ ಶಿವಕುಮಾರ ನಾಯಕ, ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 11-30 ಗಂಟೆಯಿಂದ 1-30 ಗಂಟೆಯವರೆಗೆ ಶಿಬಿರಾರ್ಥಿಗಳಿಂದ ಶ್ರಮದಾನ ನಡೆಯಲಿದ್ದು ಅಂದೇ ಮದ್ಯಾಹ್ನ 3 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ತಿಳಿಸಿದರು.

ಈ ಸಮಯದಲ್ಲಿ ಎಚ್.ಎಸ್.ಪಿ.ಪ.ಪೂ.ಕಾಲೇಜ್, ಸಂಗಮೇಶ್ವರ ಪ್ರೌಢ ಶಾಲೆಯ, ಶಿಕ್ಷಕವೃಂದದವರು ಉಪಸ್ಥಿತರಿದ್ದರು.