ಎನ್‍ಎಸ್‍ಎಸ್ ಶಿಬಿರ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

ಕಲಬುರಗಿ, ಜೂ.10- ನಗರದ ಪ್ರತಿಷ್ಠಿತ ಶಿಕ್ಷಣ ಮಹಾವಿದ್ಯಾಲಯವಾದ ನೂತನ ವಿದ್ಯಾಲಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ನಾಲ್ಕನೇ ದಿನವಾದ ಇಂದು ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಕುರಿತು ಕಲಬುರಗಿ ಜಿಲ್ಲೆಯ ಎನ್‍ಎಸ್‍ಎಸ್ ನೋಡಲ್ ಅಧಿಕಾರಿಗಳಾದ ಹಾಗೂ ನೂತನ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ನರಸಿಂಗರಾವ.ಆರ್. ಕುಲಕರ್ಣಿ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಪರಿಸರ ಸಂರಕ್ಷಿಸಬೇಕಾದರೆ ಇಂದಿನಿಂದ ಪ್ರತಿಯೊಬ್ಬರ ಮನೆಯ ಮುಂದೆ ಒಂದೊಂದು ಗಿಡವನ್ನು ನೆಡಬೇಕೆಂದು ಪ್ರತಿಜ್ಞೆ ಮಾಡಿದಾಗ ಮಾತ್ರ ಪರಿಸರವನ್ನು ಸಂರಕ್ಷಿಸಬಹುದು ಎಂಬ ಕಿವಿಮಾತು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಸೌಮ್ಯ ದೇಶಪಾಂಡೆ. ಅಧ್ಯಕ್ಷತೆಯನ್ನು ಡಾ. ಭರತ್ ಕುಲಕರ್ಣಿ ಅವರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಎಎಸ್?ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಗುಂಡಪ್ಪ ಅವಂಟಿ ಯವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಎನ್‍ಎಸ್‍ಎಸ್ ಸ್ವಯಂಸೇವಕರಾದ ಸುಮಂಗಲ ಅವರು ನಡೆಸಿಕೊಟ್ಟರು ಮೊಘಲಪ್ಪ ಅವರು ಸ್ವಾಗತಿಸಿದರು ಮಂಜುಳಾ ಅವರು ವಂದಿಸಿದರು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‍ಎಸ್‍ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.