ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಗೆ ಮತದಾನ ಮಹತ್ವದ ಕುರಿತು ಅರಿವು

ವಿಜಯಪುರ,ಏ.10:ವಿಜಯಪುರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ಹಿಟ್ಟನಹಳ್ಳಿ ಗ್ರಾಮದ ಮಾರುತೇಶ್ವರ ದೇವಾಲಯದಲ್ಲಿ ಆಯೋಜಿಸಿದ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರ ಶಿಬಿರಾರ್ಥಿಗಳಿಗೆ ಮತದಾನದ ಮಹತ್ವದ ಕುರಿತು ಮಾಹಿತಿಯನ್ನು ನೀಡಲಾಯಿತು.
ನಂತರ 100 ಕ್ಕಿಂತ ಹೆಚ್ಚು ಶಿಬಿರಾರ್ಥಿಗಳು ನಾಗಠಾಣ ವಿಧಾನಸಭಾ ಮತಕ್ಷೇತ್ರದ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥಾವನ್ನು ಏರ್ಪಡಿಸಲಾಯಿತು. ಜೊತೆಗೆ ಪಂಚಾಯತಿ ಮತಗಟ್ಟೆ ಸಂಖ್ಯೆ 284 ರಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ನಂತರ ಎಲ್ಲ ವಿದ್ಯಾರ್ಥಿನಿಯರಿಂದ ಮತದಾನ ಜಾಗೃತಿ ಕುರಿತು ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಯಿತು
ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಸಂಯೋಜನಾಧಿಕಾರಿ ಡಾ. ಪ್ರಕಾಶ ರಾಠೋಡ ಹಾಗೂ ಜಿಲ್ಲಾ ಚುನಾವಣಾ ರಾಯಭಾರಿ ರಾಜು ಪವಾರ ಅವರು ಜಾಥಾಗೆ ಚಾಲನೆಯನ್ನು ನೀಡಿದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ಡಿ.ಎಸ್ ತಳವಾರ, ಸಮುದಾಯ ಆರೋಗ್ಯ ಅಧಿಕಾರಿ ಸಂತೋಷ ನಡುವಿನಮನಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ.ಎಸ್ ಟಿ ಬೋಳರೆಡ್ಡಿ ಅವರು ಘೋಷಣೆಯನ್ನು ಮಾಡುವುದರ ಮೂಲಕ ಗ್ರಾಮದ ಜನರಲ್ಲಿ ಮತದಾನ ಜಾಗೃತಿಯನ್ನು ಮೂಡಿಸಿದರು. ಎನ್‍ಎಸ್‍ಎಸ್À ಕಾರ್ಯಕ್ರಮ ಅಧಿಕಾರಿ ಪಿ.ಆರ್. ಡೋಣೂರ ಅವರು ಹಾಗೂ ಎನ್‍ಎಸ್‍ಎಸ್ ಕಾರ್ಯದರ್ಶಿ ಖಾಜಾಅಮೀನ ವಾಲಿಕಾರ ಅವರು ಪಾಲ್ಗೊಂಡಿದ್ದರು.
ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಮತದಾನ ಜಾಗೃತಿಯ ವಿಷಯದ ಕುರಿತು ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ಅದರಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡುವುದರ ಮೂಲಕ ಎಲ್ಲರಲ್ಲಿಯೂ ಮತದಾನದ ಜಾಗೃತಿಯನ್ನು ಮೂಡಿಸಿದರು. ಈ ರಂಗೋಲಿ ಸ್ಪರ್ಧೆಯಲ್ಲಿ ಶಿಬಿರಾರ್ಥಿಗಳೊಂದಿಗೆ ಗ್ರಾಮಸ್ಥರು ಸಹ ಭಾಗವಹಿಸಿದ್ದರು.