ಎನ್‌ಎಸ್‌ಎಸ್. ವತಿಯಿಂದ ವಾರ್ಷಿಕ ವಿಶೇಷ ಶಿಬಿರ

ರಾಯಚೂರು,ಸೆ.೧೦-
ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಬಿ.ಆರ್.ಬಿ ವಾಣಿಜ್ಯ ಮಹಾವಿದ್ಯಾಲಯದ ರಾಯಚೂರು ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಘಟಕ ಅಮೃತ ಸಮುದಾಯದ ಅಡಿಯಲ್ಲಿ ದತ್ತು ಪಡೆದ ಗ್ರಾಮಗಳಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ದಿನಾಂಕ ೦೬.೦೯.೨೦೨೩ ರಂದು ರಾಯಚೂರು ಜಿಲ್ಲೆಯ ಮಾಸದೊಡ್ಡಿ ಎಂಬ ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವೀರಣ್ಣ ಮುಖ್ಯೋಪಾಧ್ಯಯರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮಾಸದೊಡ್ಡಿ ಹಾಗೂ ಸಂದೀಪ ಕಾರಭಾರಿ ಐಕ್ಯೂಎಸಿ ಸಂಯೋಜಕರು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಘಟಕದ ಸಂಯೋಜಕರಾದ ಡಾ ಶ್ಯಾಮ ಗಾಯಕವಾಡ್ ಹಾಗೂ ಎಲ್ಲಾ ಶಿಬಿರಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಆ ದಿನ ಸಾಯಂಕಾಲ ಜಿಲ್ಲಾ ಏಡ್ಸ್ ತಡೆ ಹಾಗೂ ನಿಯಂತ್ರಣ ಮತ್ತು ರಕ್ತದಾನದ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಈ ಉಪನ್ಯಾಸಕ್ಕೆ ಮುಖ್ಯ ಅತಿಥಿಗಳಾಗಿ ಮಲ್ಲಯ್ಯ ಮಠಪತಿ ಜಿಲ್ಲಾ ನಿರ್ವಾಹಕರು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ರಾಯಚೂರು, ಇವರು ಮಾತನಾಡಿದರು. ರಕ್ತದಾನದ ಮಹತ್ವ ಹಾಗೂ ರಕ್ತದಾನ ಮಾಡುವುದರಿಂದ ಮಾನವನಲ್ಲಿ ಲವಲವಿಕೆ ಹಾಗೂ ಹೊಸ ರಕ್ತದ ಉತ್ಪಾದನೆಯ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಶೀಲಾಕುಮಾರಿ ದಾಸ ಪ್ರಾಚಾರ್ಯರು ಬಿ.ಆರ್.ಬಿ. ಮಹಾವಿದ್ಯಾಲಯ ರಾಯಚೂರು ಇವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವೀರಣ್ಣ ಮುಖ್ಯೋಪಾಧ್ಯಯರು, ಸಂದೀಪ ಕಾರಭಾರಿ ಹಾಗೂ ಡಾ ಶ್ಯಾಮ ಗಾಯಕವಾಡ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ತೈಸಿನ್ ರಜ ನಿರೂಪಿಸಿದರು. ಡಾ ಶ್ಯಾಮ ಗಾಯಕವಾಡ್ ಅವರು ಸ್ವಾಗತಿಸಿದರು. ಸಂದೀಪ ಕಾರಭಾರಿ ವಂದಿಸಿದರು.