ಎನ್‍ಎಸ್‍ಎಸ್ ದೇಶ ರಕ್ಷಣೆಯ ಕವಚ ಇದ್ದಂತೆ:ಇಂದಿರಾಕೃಷ್ಣಪ್ಪ

ತಾಳಿಕೋಟೆ:ಜು.23: ಭಾರತ ದೇಶ ಪ್ರಭುದ್ದತೆಯ ರಾಷ್ಟ್ರವಾಗಬೇಕೆಂಬ ಆಲೋಚನೆಯೊಂದಿಗೆ ಮಹಾತ್ಮಾ ಗಾಂಧಿಜಿ ಅವರ ಶತಮಾನೋತ್ಸವದ ದಿನದಂದು ಕಟ್ಟಲಾಗಿರುವ ಎನ್‍ಎಸ್‍ಎಸ್ ಘಟಕದಲ್ಲಿ ನಮ್ಮ ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನಿರಂತರ ಕೆಲಸ ಮಾಡುತ್ತಿದ್ದಾರೆಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಶ್ರೀಮತಿ ಇಂದಿರಾ ಕೃಷ್ಣಪ್ಪ ಅವರು ಹೇಳಿದರು.
ಶುಕ್ರವಾರರಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಇಲಾಖೆ ಹಾಗೂ ಶ್ರೀ ಎಚ್.ಎಸ್.ಪಾಟೀಲ ಸ್ವತಂತ್ರ ಪಧವಿಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆದ ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಗೆ 5 ದಿನದ ಕಾರ್ಯಾಗಾರ ಹಾಗೂ ಶ್ರಮದಾನ ಶಿಬಿರ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ನೇರವೇರಿಸಿ ಮಾತನಾಡುತ್ತಿದ್ದ ಅವರು ಎನ್‍ಎಸ್‍ಎಸ್ ಘಟಕ ದೇಶಾಧ್ಯಂತ ತನ್ನ ಕಾರ್ಯ ಚಟುವಟಿಕೆಗಳು ನಿರಂತರ ನಡೆಸುತ್ತಿದೆ 5 ಸಾವಿರ ಶಾಲೆಗಳಲ್ಲಿ ಕಾರ್ಯಚಟುವಟಿಕೆಗಳು ನಡೆದಿವೆ ರಾಷ್ಟ್ರೀಯ ಸೇವಾ ಯೋಜನೆ(ಎನ್‍ಎಸ್‍ಎಸ್) ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳಲ್ಲಿ ದೇಶ ಸೇವೆ, ದೇಶಾಭಿಮಾನ, ಸಿಸ್ತು ಅಲ್ಲದೇ ಉತ್ತಮ ನಾಗರಿಕನನ್ನಾಗಿ ರೂಪಿಸುವಂತಹ ಕೆಲಸ ಮಾಡುತ್ತಿದೆ ಎಂದ ಅವರು ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಸ್ವಚ್ಚತೆಯ ಕಡೆಗೆ, ಪರಿಸರದ ಕಡೆಗೆ ಗಮನವಿಟ್ಟು ಕೆಲಸ ಮಾಡಬೇಕು ಗ್ರಾಮೀಣ ಭಾಗದಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕೆಂದು ಸಲಹೆ ನೀಡಿದ ಅವರು ವಿಶ್ವ ಜ್ಞಾನ ಜ್ಯೋತಿಯಾಗಿ ಬೆಳಗಿದವರು ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿಜಿ ಮತ್ತು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಆಗಿದ್ದಾರೆ ಅವರಿಂದ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇವೆಂದ ಅವರು ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡವರಾಗಿದ್ದಾರೆ ಅವರ ಮಾರ್ಗದರ್ಶನದಲ್ಲಿ ಇಲ್ಲಿಯ ಎನ್‍ಎಸ್‍ಎಸ್ ಘಟಕ ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದೆ ಎಂದರು.
ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ವಿದ್ಯಾರ್ಥಿಗಳಲ್ಲಿ ಕೇವಲ ಶಿಕ್ಷಣವಷ್ಟೇ ಅಲ್ಲದೇ ಸಮಾಜಿಕವಾಗಿ, ದೇಶ ಸೇವೆಯಲ್ಲಿ, ತೊಡಗಿಸಿಕೊಳ್ಳುವಂತಹ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದವರಾಗಿದ್ದಾರೆ ಎನ್‍ಎಸ್‍ಎಸ್ ಘಟಕವು ತನ್ನ ಶಕ್ತಿ ಮೀರಿ ದೇಶದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಸಾಗಿದೆ ಶಸಕ್ತ ಭಾರತ ಕಟ್ಟಲು ಎನ್‍ಎಸ್‍ಎಸ್ ಘಟಕವು ಅಗತ್ಯವಾಗಿದ್ದು ಆರೋಗ್ಯಕರ ಜೀವನದಲ್ಲಿ ಮುನ್ನಡೆಯಲಿ ಅನೇಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಸುಂದರ, ಸ್ವಚ್ಚ, ನಗರ ಮತ್ತು ಗ್ರಾಮವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಸಾಗಿದೆ ಎಂದ ಅವರು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಸಿಸ್ತುಬದ್ದವಾದ ಜೀವನದೊಂದಿಗೆ ಸುಂದರ ಜೀವನ ರೂಪಿಸಿಕೊಳ್ಳಬೇಕೆಂದರು.
ಇನ್ನೋರ್ವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಖ್ಯಾತ ಸಾಹಿತಿ ಬಿ.ಆರ್.ಪೊಲೀಸ್‍ಪಾಟೀಲ ಅವರು ಮಾತನಾಡಿ ನಾವು ಮಾಡುವ ಕೆಲಸದಲ್ಲಿ ಬದ್ದತೆ ಮತ್ತು ಶುದ್ದತೆ ಎಂಬುದು ಇರಬೇಕು ಅಂದಾಗ ಮಾಡಿದ ಕೆಲಸ ಸಾರ್ಥಕತೆಯ ಜೊತೆಗೆ ಶ್ರೇಯಸ್ಸನ್ನು ತಂದುಕೊಡುತ್ತದೆ ಇದನ್ನು ವಿದ್ಯಾರ್ಥಿಗಳ ಜೀವನದಲ್ಲಿ ಮೈಗೂಡಿಸಿಕೊಳ್ಳಲು ಎನ್‍ಎಸ್‍ಎಸ್ ಘಟಕ ಪ್ರೇರಣಾ ಶಕ್ತಿಯಾಗಿ ನಿಂತಿದೆ ಇದರಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿರುವ ವಿಧ್ಯಾರ್ಥಿಗಳು ಜಾಗೃತರಾಗಿ ಸಮಾಜದ ಜಾಗೃತಿಗಾಗಿ ಸ್ವಚ್ಚ, ಸುಂದರ ಮನಸ್ಸುಗಳ ಕಟ್ಟಿ ಬೆಳೆಸುವಂತಹ ಕೆಲಸ ಮಾಡಬೇಕೆಂದರು.
ಇನ್ನೋರ್ವ ಬೆಂಗಳೂರ ಗಾಂಧಿ ಭವನದ ಸಂಯೋಜಕರಾದ ಡಾ.ವ್ಹಿ.ಪ್ರಶಾಂತ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಬಯಲು ಶೌಚಾಲಯವೆಂಬುದು ನಾವು ಅತೀ ಹೆಚ್ಚು ಕಾಣುತ್ತಿದ್ದೇವೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದರೂ ಅದು ಬದಲಾವಣೆಯಾಗುತ್ತಿಲ್ಲಾ ಇದಕ್ಕೆ ಮೂಲ ಕಾರಣ ಜನರಲ್ಲಿ ತಿಳುವಳಿಕೆ ಮತ್ತು ಜಾಗೃತಿಯ ಕೊರತೆ ಕಾರಣವಾಗಿದೆ ಇದನ್ನು ಸರಿಪಡಿಸುವಂತಹ ಕೆಲಸ ಕೇವಲ ಎನ್‍ಎಸ್‍ಎಸ್ ಘಟಕದಿಂದ ಮಾತ್ರ ಸಾಧ್ಯವಿದೆ ಎನ್‍ಎಸ್‍ಎಸ್ ಘಟಕದಲ್ಲಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿಯ ಪ್ರತಿ ಮನೆಗಳಿಂದ ಸಂಚರಿಸಿ ಜಾಗೃತಿ ತಿಳುವಳಿಕೆ ಮೂಡಿಸುವಂತಹ ಕೆಲಸ ಮಾಡಬೇಕಿದೆ ದೇಶದ ಐಕ್ಯತೆಗೋಸ್ಕರ ಎನ್‍ಎಸ್‍ಎಸ್ ಕೆಲಸ ಮಾಡುತ್ತಿದೆ ಎಲ್ಲರೂ ಒಂದಾಗಿ ಹೊಸ ನಾಡನ್ನು ಹೊಸ ಹಳ್ಳಿಯನ್ನು ಕಟ್ಟಬೇಕಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕೆಂದರು.
ತಾಲೂಕಾ ತಹಶಿಲ್ದಾರ ಶ್ರೀಧರ ಗೋಟೂರ ಬ.ಸಾಲವಾಡಗಿ ಸರ್ಕಾರಿ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಮಂಗಲಾ ಕೊಳೂರ ಅವರು ಮಾತನಾಡಿ ಎನ್‍ಎಸ್‍ಎಸ್ ಘಟಕದ ಕೆಲಸ ಕೇವಲ ಸ್ವಚ್ಚ ಮಾಡುವದಲ್ಲಿ ಮಲೀನತೆಯಾಗುವದನ್ನು ತಡೆಯುವಂತಹದ್ದಾಗಿದೆ ಎಲ್ಲೆಂದರಲ್ಲಿ ಕಸ ಹಾಕುವದು, ಬಯಲು ಶೌಚಕ್ಕೆ ಹೋಗುವದು ಇವೇಲ್ಲವನ್ನು ತಡೆಗಟ್ಟಲು ಸಣ್ಣ ಪ್ರಯತ್ನ ಮಾಡಿದರೆ ಸಾಕಷ್ಟು ಬದಲಾವಣೆಯನ್ನು ತರಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ವಿಧ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೂ ಮುಂಚೆ ಶಾಲಾ ಆವರಣದಲ್ಲಿ ಶ್ರಮದಾನ ಮೂಲಕ ಶೌಚಾಲಯ ನಿರ್ಮಾಣದ ಕೆಲಸಕ್ಕೆ ಅಥಿತಿ ಮಹೋದಯರು ಚಾಲನೆ ನೀಡಿದರು. ಬೆಳಿಗ್ಗೆ ದ್ವಜಾರೋಹಣದ ಮೂಲಕ ರಾಷ್ಟ್ರಗೀತೆ ಮಾಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕ ಭೀಮಣ್ಣ ಅರಕೇರಿ ಅವರು ಪ್ರತಿಜ್ಞಾವಿಧಿ ಭೋದಿಸಿದರು.
ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ ಪಾಟೀಲ, ಸುನೀಲ ಪಾಟೀಲ, ಕಿರಣ ಪಾಟೀಲ, ಪ್ರಾಂಶುಪಾಲರಾದ ಶ್ರೀಮತಿ ಎಂ.ಎಸ್.ಬಿರಾದಾರ, ಅಶೋಕ ಕಟ್ಟಿ, ಎಸ್.ವ್ಹಿ.ಜಾಮಗೊಂಡಿ, ಎಸ್.ಸಿ.ಗುಡಗುಂಟಿ, ಎನ್.ಬಿ.ಪಾಟೀಲ, ಎಂ.ಎಸ್.ರಾಯಗೊಂಡ, ಎಸ್.ವ್ಹಿ,ಮಂಗ್ಯಾಳ, ವ್ಹಿ.ಎಚ್.ಘಟನೂರ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಕುಮಾರಿ ಜ್ಯೋತಿ ಪೊಲೀಸ್‍ಪಾಟೀಲ, ಜೆ.ಎಂ.ಕೊಣ್ಣೂರ, ಮುತ್ತು ಬಿರಾದಾರ, ವಿಠ್ಠಲ ವಿಜಾಪೂರ, ಎಸ್.ಎಸ್.ಪಾಟೀಲ, ಕುಮಾರಿ ಆರ್.ಎಚ್.ಯರದಿಹಾಳ, ಮೊದಲಾದವರು ಇದ್ದರು.
ಪ್ರಕಾಶ ಪಾಟೀಲ ಸ್ವಾಗತಿಸಿದರು. ಹಿರಿಯ ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿ ವಂದಿಸಿದರು.