ಎನ್‍ಎಸ್‍ಎಸ್ ಘಟಕದಡಿಯಲ್ಲಿ ಮಕ್ಕಳ ದಿನಾಚರಣೆ

ಕಲಬುರಗಿ:ನ.15:ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸ್ಟೇಷನ್ ಬಜಾರ್ ಕಲ್ಬುರ್ಗಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕದಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.
ಮಕ್ಕಳ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಡಮನಿ ಮಕ್ಕಳು ಮುಗ್ಧರು ,ಅಮಾಯಕರು ,ನಿಷ್ಕಪಟಿ ನಿಷ್ಕಳಂಕ ಇತ್ಯಾದಿ ಮೈ ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ. ಇಂಥ ಮನಸುಗಳಿಗೆ ಒಳ್ಳೆಯ ಬೀಜ ಬಿತ್ತುವ ಕೆಲಸ ದೇಶದಲ್ಲಿ ನಡೆಯಬೇಕು ಅಂದಾಗ ದೇಶವನ್ನು ಸುಭದ್ರವಾಗಿ ಕಟ್ಟಬೇಕು ಇಂದಿನ ಮಕ್ಕಳೇ ನಾಳಿನ ಸತ್ ಪ್ರಜೆಗಳು ಆಗುವುದರಿಂದ ಆಳುವ ಸರ್ಕಾರಗಳು ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಭರಿತ ಹಾಗೂ ವೈಜ್ಞಾನಿಕ ಮನೋಭಾವವುಳ್ಳ ಒಂದು ವಾತಾವರಣ ಸೃಷ್ಟಿಸಬೇಕು ಎಂದರು. ಅಲ್ಲದೆ ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಅವರು ಭಾರತವನ್ನು ಕೃಷಿ, ಕೈಗಾರಿಕೆ, ಸಾರಿಗೆ, ಶಿಕ್ಷಣ ,ನೀರಾವರಿ ಇತ್ಯಾದಿ ಕ್ಷೇತ್ರಗಳಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿ ತರುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ನಾಂದಿ ಹಾಡಿದರು. ಇಂತಹ ದೂರ ದೃಷ್ಟಿ ಮುತ್ಸದಿ ರಾಜಕೀಯ ನಾಯಕ ಅಗರ್ಭ ಶ್ರೀಮಂತ ಇದ್ದರು ದೇಶಕ್ಕಾಗಿ 9 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವುದು ನಮಗಾಗಿ ಅನ್ನುವುದು ವಿದ್ಯಾರ್ಥಿಗಳು ಮನ ಗಾಣಬೇಕು . ದೇಶವನ್ನು ಬಡತನ ,ಅನಕ್ಷರತೆ, ವಲಸೆ , ಇತ್ಯಾದಿ ಸಮಸ್ಯೆಗಳಿಂದ ಭಾರತವನ್ನು ಪಾರ ಮಾಡಿದ ಮಹನಾಯಕರಾಗಿದ್ದಾರೆ. ಬೃಹತ್ ನಿರಾವರಿ ಯೋಜನೆಗಳು, ಮಹಾ ರತ್ನ ಕಂಪನಿಗಳು, ಐಐಟಿ,ಐಐಎಂ, ಇವರ ಕಾಲದಲ್ಲಿ ನಿರ್ಮಾಣವಾದವು ಎನ್ನುವುದನ್ನು ವಿದ್ಯಾರ್ಥಿಗಳು ಮನದಟ್ಟ ಮಾಡಿಕೊಳ್ಳಬೇಕು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಶ್ರೀಮತಿ ಸುಜಾತ ಬಿರಾದಾರ್ ಜವಾಹಲಾಲ್ ನೆಹರು ದೇಶದ ಆಸ್ತಿಯಾಗಿದ್ದಾರೆ. ಭಾರತವನ್ನು ಸರ್ವಪಥದಲ್ಲಿ ಮುನ್ನಡೆಸುವುದರ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಂಚಶೀಲ ತತ್ವದ ಮೂಲಕ ಭಾರತಕ್ಕೆ ತನ್ನದೇ ಆದ ಸ್ಥಾನವನ್ನು ತಂದುಕೊಟ್ಟ ಮಹಾನ್ ನಾಯಕರಾಗಿದ್ದಾರೆ .ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ನಾಯಕರಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸತತ ಪ್ರಯತ್ನದ ಮೂಲಕ ಮುಂದೆ ಬರಬೇಕು ಎಂದು ಕರೆ ನೀಡಿದರು.ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಅದು ನಮಗೆ ಹೆಮ್ಮೆ ತಂದು ಕೊಡುತ್ತದೆ ಎಂದರು. ಮಕ್ಕಳು ಈ ನಿಟ್ಟಿನಲ್ಲಿ ಜೀವನದಲ್ಲಿ ಕಾಯಕ ಮನೋಭಾವ ಮೈಗೂಡಿಸಿಕೊಂಡು ದುಶ್ಚಟಗಳಿಂದ ದೂರ ಇದ್ದು ಸತತ ಅಭ್ಯಾಸದಲ್ಲಿ ನಿರತನಾದಾಗ ಮಾತ್ರ ಹೆಮ್ಮೆಪಡುವ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಉಪನ್ಯಾಸಕರು ಸೇರಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿ ಅರ್ಥಪೂರ್ಣ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಿ ವಿದ್ಯಾರ್ಥಿಗಳಿಗೆ ಮಾದರಿಯಾದರು.ಉಪನ್ಯಾಸಕರಾದ ಮಾಪ್ಪಣ್ಣ ಜಿರೋಳ್ಳಿ ,ಬಾಬು ಲೋಕೋ ಚವಾಣ, ಮಲ್ಲಯ್ಯ ಮಠಪತಿ , ವಿದ್ಯಾರ್ಥಿ ಪ್ರತಿನಿಧಿಗಳಾದ ಅಭಿಷೇಕ್ ,ಪ್ರವೀಣ್ ,ಅರುಣ್ ,
ಜಿತೇಂದ್ರ ವೇದಿಕೆ ಮೇಲೆ ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾರ್ಥನೆಯನ್ನು ಶ್ರೀಮತಿ ರೇಖಾ ರೈಚೂರ್ಕರ್ , ನಿರೂಪಣೆಯನ್ನು ಪಾಂಡು ಎಲ್. ರಾಠೋಡ್ ಸ್ವಾಗತವನ್ನು ಬಲರಾಮ್ ಚೌಹಾಣ್ ವಂದನಾರ್ಪಣೆಯನ್ನು ಶ್ರೀನಿವಾಸ್ ಐ ಜಿ ನಿರ್ವಹಿಸಿದರು.