
ಶಹಾಬಾದ:ಆ.11:ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್‍ಎಸ್‍ಎಸ್ ಶಿಬಿರ ನಡೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದರ ಅನುಭವ ಪಡೆದುಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು. ಅವರು ನಗರದ ಸರ್ಕಾರಿ ಮೆಟ್ರೀಕ್ ಪೂರ್ವ ವಸತಿ ನಿಲಯದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ, ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ “ಸಶಕ್ತ ಮಹಿಳೆ ದೇಶದ ಹೆಮ್ಮೆ (ಸ್ವಸ್ಥ ಸಮಾಜ) ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ನನ್ನ ಭೂಮಿ ನನ್ನ ದೇಶ ಹಾಗೂ ಮತದಾನದ ಮಹತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ನಾಯಕತ್ವ, ಶಿಸ್ತು, ಧೈರ್ಯ ಇವರುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದೊಂದಿಗೆ ಉತ್ತಮ ಸಂಪರ್ಕದೊಂದಿಗೆ ಶಾಂತಿ, ನೆಮ್ಮದಿಯಿಂದ ಜೀವನ ನಿರ್ವಹಣೆ ಬಗ್ಗೆ ತಿಳಿಯಬೇಕು. ಶಿಕ್ಷಣ ಹೇರಿಕೆ ಆಗಬಾರದು. ಪಠ್ಯ ಶಿಕ್ಷಣದ ಜತೆ ಸಮುದಾಯದ ಪರಿಚಯ, ಸೇವೆ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕøತಿ ಪ್ರದರ್ಶನಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಸಹ ಭೋಜನ ಕ್ರೀಡೆ ಮೂಲಕ ಸಮಗ್ರತೆ ಪರಿಕಲ್ಪನೆ ಹೀಗೆ ಹಲವು ಚಿಂತನೆ ಸಾಕಾರಾಕ್ಕಾಗಿ ಶಿಬಿರ ನಡೆಯುತ್ತದೆ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ನಗರಸಭೆ ಸದಸ್ಯ ಡಾ.ಅಹ್ಮದ ಪಟೇಲ್ ಅವರು ಮಾತನಾಡಿ ಕಲಿಕೆ ವಿದ್ಯಾರ್ಥಿ ಶಿಕ್ಷಕರ ನಡುವಿನ ಕೊಂಡಿ ಆಗಿರದೆ ಸಮುದಾಯ ನಡುವೆಯೂ ರಚನಾತ್ಮಕ ಸಂಬಂಧ ಏರ್ಪಡಬೇಕು ಎನ್ನುವ ಆಶಯದೊಂದಿಗೆ ಎನ್ ಎಸ್‍ಎಸ್ ಶಿಬಿರ ನಡೆಸಲಾಗುತ್ತದೆ. ಗ್ರಾಮದ ಸ್ವಚ್ಛತೆ ಕೆಲಸದ ಜತೆ ಗ್ರಾಮೀಣರಲ್ಲಿ ಆರೋಗ್ಯ ಅರಿವು, ಮೌಢ್ಯತೆ ಹೋಗಲಾಡಿಸುವುದು ಕಂದಾಚಾರಕ್ಕೆ ವಿರುದ್ಧವಾಗಿ ಯುವಕರ ಪ್ರೇರಣೆ ಹೀಗೆ ಹಲವು ಮಾರ್ಗದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಎನ್‍ಎಸ್‍ಎಸ್ ಅಧಿಕಾರಿ ಪೀರಪಾಶಾ ಹೊನಗುಂಟಿ, ಪ್ರಾಂಶುಪಾಲ ನಾನಾಗೌಡ ಹಿಪ್ಪರಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಪತ್ರಕರ್ತ ವಾಸುದೇವ ಚವ್ಹಾಣ್, ಮಲ್ಲಿಕಾರ್ಜುನ ಹಳ್ಳಿ, ಅಪ್ಜಲ್ ಪಟೇಲ, ವೇದಿಕೆಯಲಿದ್ದರು. ನಿಶಾ ಹೊಸಮನಿ ನಿರೂಪಿಸಿದರು, ಸುಜಾತಾ ಹಣಮಂತ ಸ್ವಾಗತಿಸಿದರು. ಬುಷರಾ ವಂದಿಸಿದರು. ಉಪನ್ಯಾಸಕರಾದ ಗುರುಲಿಂಗಪ್ಪ ತುಂಗಳ, ರಾಜಶೇಖರ ದಂಡಾವತಿ, ವಿಜಯಕುಮಾರ, ಚಂದ್ರಕಲಾ, ಜಯಂತ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದರು.