ಎನ್‍ಎಸ್‍ಎಸ್‍ದಿಂದ ರಾಷ್ಟ್ರೀಯತೆ ಹಾಗೂ ವ್ಯಕ್ತಿತ್ವ ವಿಕಸನ:ಡಾ. ಸೋಮನಾಥ ರಡ್ಡಿ

ಚಿಟಗುಪ್ಪಾ : ಆ.10:ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್.) ವಾರ್ಷಿಕ ವಿಶೇಷ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವನೆ ಮೂಡುತ್ತದೆ ಹಾಗೂವ್ಯಕ್ತಿತ್ವ ವಿಕಸನ ವಾಗುತ್ತದೆ ಎಂದು ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಗುಲಬರ್ಗಾ ವಿಶ್ವವಿದ್ಯಾಲಯ ವಲಯ ಅಧ್ಯಕ್ಷರಾದ ಡಾ. ಸೋಮನಾಥ ರಡ್ಡಿ ಅವರು ತಿಳಿಸಿದ್ದಾರೆ.

ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಚಿಟಗುಪ್ಪದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದರು. ಶಿಬಿರದಲ್ಲಿ ಹಮ್ಮಿಕೊಂಡಿದ್ದ ಚಟುವಟಿಕೆಗಳಿಂದ ವಿಜ್ಞಾನದ ಅರಿವು ಹಾಗೂ ವೈಜ್ಞಾನಿಕ ಮನೋಭಾವನೆ ಮೂಡುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಹ-ಪ್ರಾಧ್ಯಾಪಕರಾದÀ ದಶರಥ ನಯನೂರ ಅವರು ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯ, ಇಂದು ಸಮಾಜಘಾತಕ ಶಕ್ತಿಗಳಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚುತಿದೆ, ಆದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಮೂಲಭೂತ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕೆ ಕರೆ ನೀಡಿದರು.

ಎನ್.ಎಸ್.ಎಸ್ ಅಧಿಕಾರಿ ಡಾ. ವೀರಶೆಟ್ಟಿ ಮೈಲೂರಕರ್ ಅವರು ಶಿಬಿರದ ವರದಿ ಮಂಡಿಸಿ ಒಂದು ವಾರ ನಡೆದ ಶಿಬಿರದಲ್ಲಿ ್ಲ 100 ಶಿಬಿರಾರ್ಥಿಗಳು ಭಾಗವಹಿಸಿದರು, ಶಿಬಿರದಲ್ಲಿ ಶ್ರಮದಾನ, ಸಂಪನ್ಮೂಲ ತಜ್ಞರಿಂದ ವಿಶೇಷ ಉಪನ್ಯಾಸಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಸಾಮಾಜಿಕ ಜಾಗೃತಿ ಮೂಡಿಸುವ ರೂಪಕಗಳು, ಚಿಟಗುಪ್ಪಾ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಚತಾ ಅಭಿಯಾನ, ಪ್ರತಿ ನಿತ್ಯ ಊಟದ ವ್ಯವಸ್ಥೆ, ಮನರಂಜನೆ ಕಾರ್ಯಕ್ರಮಗಳು, ಗ್ರಾಮೀಣ ಭಾಗದಲಿ ಸಮಿಕ್ಷೆಯ ತರಬೇತಿ, ಸಸಿ ನೆಡುವದು ಸೇರಿದಂತೆ ಹಲವು ಅರ್ಥಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯತು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಂದರ್ ಸಿಂಗ್ ಅವರು ಶಿಬಿರವು ತನ್ನ ಮೂಲ ಉದ್ದೇಶ ಈಢೆರಿಸುವ ಮೂಲಕ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಶಿಬಿರಾರ್ಥಿ ಕಾವ್ಯ ಸಜ್ಜನ, ಐಶ್ವರ್ಯ, ಶಾಲಿನಿ ಅನುಭವ ಹೇಳುತ್ತಾ, ಶಿಬಿರದಿಂದ ಹಲವು ಹೊಸ ವಿಷಯಗಳ ಜ್ಞಾನ ಪಡೆದಿದ್ದೆವೆ ಎಂದರು. ಅತಿಥಿಗಳಾಗಿ ಕಲಬುರಗಿಯ ಸರಕಾರಿ ಕಾಲೇಜಿ ಪ್ರಾಧ್ಯಾಪಕರಾದ ಡಾ. ಮಹಾದೇವ ಉದಗೀರೆ, ಡಾ. ವೀರಶೆಟ್ಟಿ ಚಿಟ್‍ಗುಪ್ಪಿಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ. ಕೆ.ಶಿವಕುಮಾರ, ಶ್ರವಣಕುಮಾರಿ ಬಿರಾದರ, ಡಾ. ಶಿವಕುಮಾರ ಬಿರಾದರ, ರವೀಂದ್ರಕುಮಾರ ಟಿಳೆಕರ್, ಸಯೀದಾ ಬಾನು ಡಾ. ಜೈಭಾರತ ಮಂಗೇಷ್ಕರ, ಡಾ ಜಯದೇವಿ ಗಾಯಕವಾಡ, ಭಾಗ್ಯವತಿ, ಡಾ.ಯೇಸುಮಿತ್ರ, ಜಬಿವುಲ್ಲಾ, ಶಾಂತಕುಮಾರ ಪಾಟೀಲ, ರಮೇಶಕುಮಾರ ಬಿರಾದರ, ಸೇರಿದಂತೆ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕು. ಭಾಗ್ಯಶ್ರೀ ನಿರೂಪಿಸಿದರು. ಅಶ್ರಫ್ ಸ್ವಾಗತಿಸಿದರು. ವೆಂಕಟೇಶ ವಂದಿಸಿದರು.