ಎನ್‍ಎಂಎಂಎಸ್ ಪರೀಕ್ಷೆ: 103 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದ ಭಾಗ್ಯಶ್ರೀ

ವಿಜಯಪುರ:ಮೇ.25: ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣೆ 2023-2024 ನೇ ಸಾಲಿನ
ಎನ್‍ಎಂಎಂಎಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ಹೊನ್ನುಟಗಿ. ಶಾಲೆಯ ವಿದ್ಯಾರ್ಥಿಯಾದ ಕುಮಾರಿ ಭಾಗ್ಯಶ್ರೀ ಮಹಾದೇವ ಬಿರಾದಾರ. ಪರೀಕ್ಷೆಯಲ್ಲಿ 103 ಅಂಕಗಳನ್ನು ಪಡೆಯುವುದರ ಮೂಲಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ. ಮೇ 21ರಂದು ಪ್ರಕಟಿಸಿದ ಫಲಿತಾಂಶ ಪಟ್ಟಿಯಲ್ಲಿ ಸ್ಥಾನ ಪಡೆಯುವುದರ ಮೂಲಕ ಹೊನ್ನುಟಗಿ ಗ್ರಾಮಕ್ಕೆ ಹಾಗೂ ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾಳೆ. ಆಯ್ಕೆಯಾದ ವಿದ್ಯಾರ್ಥಿ ನಿಗೆ ಪ್ರತಿ ವರ್ಷ 2000 ವಿದ್ಯಾರ್ಥಿ ವೇತನ( ಸ್ಕಾಲರ್ಶಿಪ್) ಕೇಂದ್ರ ಸರ್ಕಾರ ನೀಡುತ್ತದೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಮುಖ್ಯ ಗುರುಮಾತೆರಾದ ಶ್ರೀಮತಿ ಯು ಎನ್ ತೊರವಿ, ಮತ್ತು ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಶ್ರೀಶೈಲ್ ಬಿರಾದಾರ, ವಿಜ್ಞಾನ ಶಿಕ್ಷಕರಾದ ಶ್ರೀ ಗುರುರಾಜ್ ಕುಲಕರ್ಣಿ, ಕನ್ನಡ ಶಿಕ್ಷಕರಾದ ಶ್ರೀ ಶಿವರಾಜ ಬಿರಾದಾರ, ಮತ್ತು ಶ್ರೀ ಎಸ್ ಎಸ್ ನವಲಗುಂದ, ಶ್ರೀ ಜಿ ಎಮ್ ಪಾಟೀಲ್, ಶ್ರೀ ಆರ್ ಕೆ ಪತ್ತಾರ್, ಎಚ್ ಡಿ ಕಲಕೇರಿ ಮತ್ತು ಶ್ರೀಮತಿ ಎಸ್ ಪಿ ಕಡ್ಲಿಮಟ್ಟಿ ಸೇರಿದಂತೆ ಎಲ್ಲ ಶಿಕ್ಷಕರು ಹಾಗೂ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮದ ಶಿಕ್ಷಣ ಪ್ರೇಮಿಗಳು ಅಭಿನಂದಿಸಿದ್ದಾರೆ.