ಎನ್ಇಪಿ ನೀತಿ ರದ್ದತಿಗೆ ಪ್ರಗತಿ ಪರ ವಿದ್ಯಾರ್ಥಿ ಸಂಘಟನೆ‌ಗಳ ಆಗ್ರಹ 

ಸಂಜೆವಾಣಿ ವಾರ್ತೆ

ಜಗಳೂರು.ಆ.೨೫:- ಶೀಘ್ರ ಎನ್‌ ಇಪಿ ನೀತಿ ರದ್ದು ಪಡಿಸಲು‌ ಆಗ್ರಹಿಸಿ‌ ಪ್ರಗತಿ ಪರ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿ ನಂತರ ಲಿಖಿತ ಮನವಿ ಸಲ್ಲಿಸಿದರು.ಡಿಎಸ್ ಎಸ್ ತಾಲೂಕು ಸಂಚಾಲಕ ಮಲೆ ಮಾಚಿಕೆರೆ  ಸತೀಶ್, ಮಾತನಾಡಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಗಳಿಗೆ ಮರುಪರೀಕ್ಷೆಗೆ ಅವಕಾಶ ನೀಡ  ಬೇಕು.ಪದವಿ ಕಾಲೇಜುಗಳಲ್ಲಿ ಕ್ಯಾರಿ ಓವರ್ ಸಿಸ್ಟಮ್ ನಡಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ ವ್ಯಾಸಂಗದಲ್ಲಿ ಬಡ್ತಿಗೆ ಅವಕಾಶವಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದವರಿಗೆ ಮರುಪರೀಕ್ಷೆ ನಡೆಸಬೇಕು.ದೇಶದಲ್ಲಿ ಯುಜಿಸಿ‌ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.ಬೇರೆ ವಿಶ್ವವಿದ್ಯಾ ನಿಲಯಗಳಲ್ಲಿ ಇರುವ ಅವಕಾಶದಂತೆ ದಾವಣಗೆರೆ ವಿಶ್ವ ವಿದ್ಯಾನಿಲಯ ಅನುಸರಿಸಬೇಕು ಎಂದು ಒತ್ತಾಯಿಸಿ ದರು.ಎಸ್ ಎಫ್ ಐ ಜಿಲ್ಲಾ ಸಂಚಾಲಕ ಅನಂತರಾಜ್ ಮಾತ ನಾಡಿ ಬರಪೀಡಿತ ತಾಲೂಕಿನಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ತೇರ್ಗಡೆ ಹೊಂದುತ್ತಿದ್ದು. ಸ್ನಾತಕೋತ್ತರ ಪದವಿಗೆ ಚಿತ್ರದುರ್ಗ, ಚಳ್ಳಕೆರೆ, ದಾವಣ ಗೆರೆ ವಿಶ್ವವಿದ್ಯಾನಿಲಯ ಕ್ಯಾಂಪಸ್‌ ಗೆ ತೆರಳುವ ಅನಿವಾ ರ್ಯತೆ‌ ಎದುರಾಗಿದೆ.ಕೂಡಲೇ ಅರ್ಹತೆಯಿರುವ ವಿಭಾಗ ಗಳ‌ ಸ್ನಾತಕೋತ್ತರ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಡಿಎಸ್ ಎಸ್ ತಾಲೂಕು ಸಂಚಾಲಕ ಸತೀಶ್ ಮಲೆಮಾಚಿಕೆರೆ,ದಲಿತ ವಿದ್ಯಾರ್ಥಿ ಒಕ್ಕೂಟದ ಹುಚ್ಚವ್ವನಹಳ್ಳಿ ಜೀವನ್ ,ಎಸ್ ಎಫ್ ಐ ಜಿಲ್ಲಾ ಸಂಚಾಲಕ ಅನಂತರಾಜ್, ಕರಿಬಸಪ್ಪ.ಎಐಎಸ್ ಎಫ್ ರಾಜ್ಯ ಸಹ ಕಾರ್ಯದರ್ಶಿ ಮಾದಿಹಳ್ಳಿ ಮಂಜಪ್ಪ, ಎಐಎಸ್ ಎಫ್ ಮುಖಂಡರಾದ ಮಧು ದೇವಿಕೆರೆ, ಕಿರಣ್,ಲಿಂಗಣ್ಣಹಳ್ಳಿ ಮಂಜುನಾಥ್,ಪ್ರಗತಿ ಪರ ಸಂಘಟನೆ ಮುಖಂಡರಾದ ವಿವೇಕಾನಂದ,ಅಜಯ್, ಕಾರ್ತಿಕ,ರಾಕೇಶ್,ಗುರು,ತಿಮ್ಮಣ್ಣ ಸೇರಿದಂತೆ‌ಇದ್ದರು.