ಎನ್‌ಇಟಿ : ಇಂದಿನಿಂದ ಮೂರು ದಿನಗಳ ಕಾಲ ಶ್ರೀವಾರಿ ಕಲ್ಯಾಣೋತ್ಸವ

ರಾಯಚೂರು.ನ.೧೪- ನವೋದಯ ಶಿಕ್ಷಣ ಸಂಸ್ಥೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಶ್ರೀವಾರಿ ಕಲ್ಯಾಣೋತ್ಸವ ಮತ್ತು ಪುಷ್ಪಯಾಗ ಕಾರ್ಯಕ್ರಮ ನಡೆಯಲಿದ್ದು, ಮುಂಜಾನೆ ಸುಪ್ರಭಾತದೊಂದಿಗೆ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು.
ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಖಾಸನ ಆಗಮನ ಶಾಸ್ತ್ರ ಪ್ರಕಾರ ತಿರುಮಲ ತಿರುಪತಿ ಅರ್ಚಕರಿಂದ ಶ್ರೀವಾರಿ ಕಲ್ಯಾಣೋತ್ಸವ ಮತ್ತು ಪುಷ್ಪಯಾಗ ಕಾರ್ಯಕ್ರಮ ನಡೆಯಲಿದೆ. ನ.೧೪, ೧೫, ೧೬ ಮೂರು ದಿನಗಳ ಕಾಲ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲು ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ. ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀವಾರಿ ಕಲ್ಯಾಣೋತ್ಸವ ಮತ್ತು ಪುಷ್ಪಯಾಗ ಪೂಜಾ ಕೈಂಕರ್ಯ ಅತ್ಯಂತ ವೈಭವದಿಂದ ನಿರ್ವಹಿಸಲಾಗುತ್ತದೆ.
ಮುಂಜಾನೆ ಸುಪ್ರಭಾತ, ತೋಮಲ ಸೇವೆ ಅರ್ಚನ, ಸ್ನಾಪನ ತಿರುಮಂಜನ ಕಾರ್ಯಕ್ರಮ ನಡೆಸಲಾಯಿತು. ಸಂಜೆ ೫.೩೦ ಕ್ಕೆ ಎದುರುಗೊಳ್ಳುವಿಕೆ ಹಾಗೂ ರಾತ್ರಿ ೮.೪೫ ಕ್ಕೆ ಏಕಾಂತ ಸೇವೆ ನಡೆಯಲಿದೆ. ನವೋದಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.