ಎನ್‌ಆರ್‌ಬಿಸಿ ೧೧ ಕಿ.ಮೀ ಅಧುನಿಕರಣ ಕಾಮಗಾರಿ ಕಳಪೆ ಅರೋಪ

ಲಿಂಗಸುಗೂರ.ಜು.೨೭-ತಾಲೂಕಿನ ಗೋರೆಬಾಳ ಹತ್ತಿರ ನಡೆಯುತ್ತಿರುವ ನಾರಾಯಣಪೂರ ಬಲದಂಡೆ ಕಾಲುವೆ ಅಧುನಿಕರಣ ೧೧ ಕಿ.ಮೀ ಬಾಕಿ ಉಳಿದ ಕಾಮಗಾರಿ ಬೇಕಾ ಬಿಟ್ಟಿಯಾಗಿ ಸಂಪೂರ್ಣ ಕಳಪೆಯಾಗಿದ್ದು ಕಾಮಗಾರಿ ಸ್ಥಳದಲ್ಲಿ ಕೂಲಿಕಾರರೆ ಇಂಜಿನಿಯರಗಳಾಗಿದ್ದು ಗುತ್ತಿಗೆದಾರ ಡಿವೈ ಉಪ್ಪಾರ ಹಾಗೂ ಸಂಬಂದಿಸಿದ ಅಭಿಯಂತರರು ಸೇರಿ ಹಣ ಲೂಟಿ ನಡೆಸಲಾಗಿದ್ದು ಸ್ಪಷ್ಠವಾಗಿದೆ ಎಂದು ಕಾಂಗ್ರೆಸ್ ಹಿರಿಯ ದಲಿತ ಮುಖಂಡರು ಮಾಜಿ ಜಿ.ಪಂ ಸದಸ್ಯ ಎಚ್ ಬಿ ಮುರಾರಿ ಆರೋಪಿಸಿರುವರು.
ಅವರು ೧೧ ಕಿ.ಮೀ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಲೈನಿಂಗ ಕಾಮಗಾರಿ ಸ್ಥಳ ವಿಕ್ಷಿಸಿ ಮಾತನಾಡಿ ಕೆ ಬಿ ಜೆ ಎನ ಎಲ್ ನ ಯಾವೊಬ್ಬ ಅಭಿಯಂತರು ಸ್ಥಳಕ್ಕೆ ಭೇಟಿ ನೀಡಿಲ್ಲಾ ಹಾಗೂ ಗುತ್ತಿಗೆದಾರರ ಸೈಟ ಇಂಜಿನಿಯರಗಳು ಇರುವದಿಲ್ಲಾ ಇಲ್ಲಿ ಕೂಲಿಕಾರರರೆ ಇಂಜಿನಿಯರಗಳಾಗಿದ್ದು ಎಸ್ಟಿಮೇಟ್ ಪ್ರಕಾರ ಮಾಡದೆ ಅವೈಜ್ಞಾನಿಕವಾಗಿ ತರಾತುರಿಯಲ್ಲಿ ರಾತ್ರಿ ಸಮಯದಲ್ಲಿ ಮಾಡುತ್ತಿರುವುದು ಸಂಶಯಕ್ಕೆ ಎಡೆ ಮಾಡುತ್ತದೆ.
ಕಳೆದ ನಾಲ್ಕುದಿನಗಳಿಂದ ರೈತ ಸಂಘದವರು ಪ್ರತಿಭಟನೆ ನಡೆಸುತ್ತಿದ್ದರು ಕ್ಯಾರೆ ಅನ್ನುವರು ಯಾರು ಇಲ್ಲಾ ಒಟ್ಟಾರೆ ಮುಚ್ಚಿಹಾಕಿ ನೀರು ಹರಿಸುವ ಯತ್ನದಲ್ಲಿದ್ದು ಇದರಿಂದ ಈ ಭಾಗದ ರೈತರಿಗೆ ದೊಡ್ಡ ಅನ್ಯಾಯವಾಗುತ್ತದೆ ಸದರಿ ಕಾಮಗಾರಿ ಗುಣಮಟ್ಟದ್ದ ಬಗ್ಗೆ ಲೋಕಾಯಯುಕ್ತರು ವಿಧಾನಸಭಾ ಅಂದಾಜು ಸಮಿತಿವರು ಗುತ್ತಿಗೆದಾರ ವಿರುದ್ದಹಾಗೂ ಕೆ ಬಿ ಜೆ ಎನ ಎಲ್ ಅಭಿಯಂತರಗಳ ವಿರುದ ವರದಿ ನೀಡಲಾಗಿದ್ದು ಸಂಬಂದಿಸಿದವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ವ್ಯವಸ್ಥಾಪಕ ನಿರ್ದೆಶಕರಿಗೆ ಒತ್ತಾಯಿಸುವದಾಗಿ ತಿಳಿಸಿ ಒಳ್ಳೆ ಹೆಸರು ಹೊಂದಿದ ಗುತ್ತಿಗೆದಾರ ಡಿವೈ ಉಪ್ಪಾರ ನಿರ್ಲಕ್ಷ್ಯಯಧೋರಣೆ ಸಮಂಜಸವಲ್ಲಾ ಎಂದು ಮುರಾರಿ ಅರೋಪ
ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಮಲ್ಲನಗೌಡ ರಾಂಪುರ, ತಾಲೂಕ ಅಧ್ಯಕ್ಷ ಅಮರೇಶ, ಸರಕಾರ ಶಂಕ್ರಪ್ಪ ,ಲಾಲಪ್ಪ ,ಅನೀಲಕುಮಾರ, ಉಮೇಶ ಇತರರು ಇದ್ದರು.