ಎದೆ ಹಾಲಿನ ಮಹತ್ವ ಕುರಿತು ಮನವರಿಕೆ ಮಾಡಿ: ಡಾ ಬುಳ್ಳಾ

ಬೀದರ್:ಆ.1: ‘ಆಶಾ ಕಾರ್ಯಕರ್ತೆಯರು ತಾಯಂದಿರಿಗೆ ಎದೆ ಹಾಲಿನ ಮಹತ್ವದ ಕುರಿತು ಮನವರಿಕೆ ಮಾಡಿಕೊಡಬೇಕು’ ಎಂದು ಮಕ್ಕಳ ತಜ್ಞ ಡಾ.ಶರಣ ಬುಳ್ಳಾ ಸಲಹೆ ನೀಡಿದರು.

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬೀದರ್ ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ತಾಯಿ ಎದೆ ಹಾಲು ಮಹತ್ವದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿ ಎದೆ ಹಾಲು ಮಕ್ಕಳಿಗೆ ಅಮೃತಕ್ಕೆ ಸಮಾನ. ತಾಯಂದಿರು ಮಕ್ಕಳಿಗೆ ತಪ್ಪದೆ ಎದೆ ಹಾಲು ಕುಡಿಸಬೇಕು ಎಂದು ಹೇಳಿದರು.

ಬ್ರಿಮ್ಸ್ ಅಧೀಕ್ಷಕ ಡಾ.ಶಿವಕುಮಾರ ಶೆಟಕಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ, ಡಾ. ಶಾಂತಲಾ ಕೌಜಲಗಿ, ಡಾ. ರವಿಕುಮಾರ ಹಾಗೂ ಎಫ್‍ಪಿಎಐ ಬೀದರ್ ಶಾಖೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು.

ಎಫ್‍ಪಿಎಐ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಸ್ವಾಗತಿಸಿದರು. ವಿಜಯಲಕ್ಷ್ಮಿ ಹುಡುಗೆ ನಿರೂಪಿಸಿದರು. ವಿನಾಯಕ ಕುಲಕರ್ಣಿ ವಂದಿಸಿದರು.
ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.