ಎದೆ ನೋವಿಗೆ ಕೆಲವೊಂದು ಮನೆಮದ್ದು

ಎದೆನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು ಮತ್ತು ಇದು ಭವಿಷ್ಯದಲ್ಲಿ ಬರದಂತೆ ತಡೆಯಬಹುದು. ವೈದ್ಯರು ಪರೀಕ್ಷೆ ಮಾಡಿ ಎದೆ ನೋವು ಗಂಭೀರ ಪರಿಸ್ಥಿತಿಯಲ್ಲ ಎಂದು ಹೇಳಿದ ಬಳಿಕ ಮಾತ್ರ ಮನೆಮದ್ದನ್ನು ಪರೀಕ್ಷಿಸಬೇಕು.
ಆಮ್ಲೀಯ ಹಿಮ್ಮುಖ ಹರಿವು ಎದೆನೋವಿಗೆ ಕಾರಣವಾಗಿದ್ದರೆ ಆಗ ಕೆಲವು ಬಾದಾಮಿ ತಿನ್ನಬಹುದು ಅಥವಾ ಒಂದು ಕಪ್ ಬಾದಾಮಿ ಹಾಲು ಕುಡಿದರೆ ಅದರಿಂದ ನೆರವಾಗುವುದು. ಇದನ್ನು ಸಾಬೀತು ಮಾಡಲು ವೈಜ್ಞಾನಿಕವಾಗಿ ಯಾವುದೇ ಸಾಕ್ಷ್ಯಗಳು ಇಲ್ಲ. ಆದರೆ ಹೆಚ್ಚಿನ ಜನರು ಇದನ್ನು ಬಳಸಿಕೊಂಡು ಅದು ಒಳ್ಳೆಯ ಪರಿಹಾರ ನೀಡಿದ ಕಾರಣದಿಂದಾಗಿ ಅದನ್ನು ಬೇರೆಯವರಿಗೂ ಹೇಳುತ್ತಿದ್ದಾರೆ. ಬಾದಾಮಿಯಲ್ಲಿ ಉನ್ನತ ಮಟ್ಟದ ಕೊಬ್ಬು ಇದೆ ಮತ್ತು ಇದರಿಂದಾಗಿ ಆಮ್ಲದ ಹಿಮ್ಮುಖ ಹರಿವು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಬಾದಾಮಿಯು ನೋವನ್ನು ಮತ್ತಷ್ಟು ಹೆಚ್ಚು ಮಾಡುವುದು. ಅದಾಗ್ಯೂ, ಕೆಲವೊಂದು ಅಧ್ಯಯನಗಳು ಹೇಳುವಂತೆ ಬಾದಾಮಿ ಸೇವಿಸಿದರೆ ಅದರಿಂದ ಹೃದಯದ ಕಾಯಿಲೆ ನಿವಾರಿಸಬಹುದು. ಬಾದಾಮಿಯು ತಕ್ಷಣವೇ ನೋವನ್ನು ಕಡಿಮೆ ಮಾಡುವುದಿಲ್ಲ. ಆದರೆ ಇದು ಹೃದಯದ ಸಂಪೂರ್ಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹೃದಯ ಅಥವಾ ಎದೆ ನೋವಿಗೆ ಪ್ರಮುಖ ಕಾರಣ ಸ್ನಾಯುಗಳಿಗೆ ಒತ್ತಡ ಬೀಳುವುದು. ವ್ಯಾಯಾಮ, ಅತಿಯಾದ ದೈಹಿಕ ಚಟುವಟಿಕೆ ಅಥವಾ ಮೊಂಡು ಆಘಾತ ಇತ್ಯಾದಿಗಳು ಇಂತಹ ನೋವಿಗೆ ಪ್ರಮುಖ ಕಾರಣವಾಗಿರಬಹುದು. ಹೆಚ್ಚಿನ ಸಂದರ್ಭದಲ್ಲಿ ಇಂತಹ ಭಾಗಕ್ಕೆ ತಂಪಾದ ಶಾಖ ನೀಡಿದರೆ ಆಗ ನೀವು ನಿವಾರಣೆ ಆಗುವುದು.
ಗ್ಯಾಸ್ ಅಥವಾ ಹೊಟ್ಟೆ ಉಬ್ಬರದಿಂದಾಗಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ಬಿಸಿ ಪೇಯವನ್ನು ಬಳಸಬಹುದು. ಬಿಸಿ ಪೇಯವು ಜೀರ್ಣಕ್ರಿಯೆಗೆ ಸಹಕಾರಿ ಆಗಲಿದೆ. ಕೆಲವೊಂದು ಪಾನೀಯಗಳು ಬೇರೆ ಪಾನೀಯಗಳಿಗಿಂತಲೂ ತುಂಬಾ ಒಳ್ಳೆಯದು. ದಾಸವಾಳದ ಚಹಾದಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ ಮತ್ತು ಇದು ಹೊಟ್ಟೆ ಉಬ್ಬರ ನಿವಾರಣೆ ಮಾಡಲು ನೆರವಾಗುವುದು. ದಾಸವಾಳದ ಚಹಾ ರಕ್ತದೊತ್ತಡ ತಗ್ಗಿಸುವುದು ಮತ್ತು ಕೊಲೆಸ್ಟ್ರಾಲ್‌ನ್ನು ಕೂಡ ಕಡಿಮೆ ಮಾಡುವುದು. ಈ ಎಲ್ಲಾ ಲಾಭಗಳಿಂದಾಗಿ ಹೃದಯದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.
ಎದೆ ನೋವಿಗೆ ಮತ್ತೊಂದು ಪರಿಹಾರವೆಂದರೆ ಬಿಸಿ ಅಥವಾ ತಣ್ಣೀರಿಗೆ ಅಡುಗೆ ಸೋಡಾ ಹಾಕುವುದು. ಕ್ಷಾರೀಯ ಗುಣವನ್ನು ಹೊಂದಿರುವಂತಹ ಇದು ಹೊಟ್ಟೆಯಲ್ಲಿನ ಆಮ್ಲವನ್ನು ಕಡಿಮೆ ಮಾಡುವುದು ಮತ್ತು ಇದರಿಂದ ನೋವು ನಿವಾರಣೆ ಆಗುವುದು. ಅಡುಗೆ ಸೋಡಾವು ಎದೆಯುರಿ ನಿವಾರಣೆ ಮಾಡಲು ತುಂಬಾ ಒಳ್ಳೆಯದು. ಆದರೆ ಇದರಿಂದ ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು ಎಂದು 2013ರಲ್ಲಿ ಅಧ್ಯಯನವೊಂದು ಹೇಳಿದೆ.
ಬೆಳ್ಳುಳ್ಳಿಯು ಎದೆನೋವಿಗೆ ತುಂಬಾ ಒಳ್ಳೆಯ ಮನೆಮದ್ದು. ಆದರೆ ಇದು ವೈಜ್ಞಾನಿಕವಾಗಿ ಸಾಬೀತು ಆಗಿಲ್ಲ. ಎರಡು ಎಸಲು ಬೆಳ್ಳುಳ್ಳಿಯನ್ನು ಬಿಸಿ ಹಾಲಿಗೆ ಹಾಕಿಕೊಳ್ಳಬೇಕು. ಬೆಳ್ಳುಳ್ಳಿ ನುಂಗುವ ಬದಲು ಅದನ್ನು ಜಗಿದು ತಿಂದರೆ ಅದರಿಂದ ಹೆಚ್ಚಿನ ಲಾಭವಾಗಲಿದೆ. ಕೆಲವೊಂದು ಅಧ್ಯಯನಗಳು ಬೆಳ್ಳುಳ್ಳಿಯು ಹೃದಯದ ಸಮಸ್ಯೆ ಕಡಿಮೆ ಮಾಡುವುದು ಮತ್ತು ಅಪಧಮನಿಗಳ ಜಮೆ ಆಗಿರುವಂತಹ ಪದರ ಕಡಿಮೆ ಮಾಡುವುದು ಎಂದು ಹೇಳಿವೆ.
ಆಮ್ಲೀಯ ಹಿಮ್ಮುಖ ಹರಿವು ನಿವಾರಣೆ ಮಾಡಲು ಆ್ಯಪಲ್ ಸೀಡರ್ ವಿನೇಗರ್ ಮತ್ತೊಂದು ಮನೆಮದ್ದಾಗಿದೆ. ಊಟಕ್ಕೆ ಮೊದಲು ಅದರ ಬಳಿಕ ಇದನ್ನು ಕುಡಿದರೆ ಅದರಿಂದ ಆಮ್ಲೀಯ ಪ್ರತಿರೋಧ ತಡೆಯಬಹುದು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಸಾಬೀತುಮಾಡಲು ಹೆಚ್ಚಿನ ಸಾಕ್ಷ್ಯಗಳು ಇಲ್ಲ. ಆ್ಯಪಲ್ ಸೀಡರ್ ವಿನೇಗರ್ ನಿಂದ ಹೆಚ್ಚಿನ ಅಡ್ಡಪರಿಣಾಮಗಳು ಇಲ್ಲ. ರಕ್ತ ತೆಳುವಾಗುವ ಔಷಧಿ ತೆಗೆದುಕೊಳ್ಳುತ್ತಾ ಇರುವ ಜನರು ಇದನ್ನು ಬಳಸಬಾರದು. ಇದು ರಕ್ತವನ್ನು ತೆಳು ಮಾಡುವುದು.
ಎದೆ ನೋವು ಇರುವ ಸಂದರ್ಭದಲ್ಲಿ ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳಬಹುದು. ನೋವು ನಿವಾರಕ ವಾಗಿರುವಂತಹ ಆಸ್ಪಿರಿನ್ ಎದೆ ನೋವನ್ನು ಗಂಭೀರ ಸಮಸ್ಯೆಯಲ್ಲದ ಸಂದರ್ಭದಲ್ಲಿ ಕಡಿಮೆ ಮಾಡುವುದು. ಕಡಿಮೆ ಡೋಸ್ ನ ಆಸ್ಪಿರಿನ್ ನ್ನು ಬಳಸಿದರೆ ಆಗ ಹೃದಯಾಘಾತ ತಡೆಯಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಆಸ್ಪಿರಿನ್ ನಿಂದಾಗಿ ರಕ್ತಸ್ರಾವವಾಗುವ ಕಾರಣದಿಂದಾಗಿ ಇದು ವಿವಾದಕ್ಕೆ ಸಿಲುಕಿದೆ.
ಎದೆ ನೋವು ಕಾಣಿಸಿಕೊಂಡ ವೇಳೆ ನೀವು ಹಾಗೆ ತಲೆಯನ್ನು ಸ್ವಲ್ಪ ಎತ್ತರದ ಜಾಗಕ್ಕೆ ಇಟ್ಟು ಮಲಗಿ. ಇದರಿಂದ ಸ್ವಲ್ಪ ಆರಾಮ ಸಿಗುವುದು. ಆಮ್ಲ ಹಿಮ್ಮುಖ ಹರಿವಿನಿಂದಾಗಿ ಇದು ಕಾಣಿಸಿಕೊಂಡಿದ್ದರೆ ಆಗ ಈ ರೀತಿ ಮಲಗಿದರೆ ನೆರವಾಗಲಿದೆ.
ಬೇರೆ ಗಿಡಮೂಲಿಕೆಗಳಂತೆ ಶುಂಠಿಯು ಕೂಡ ಉರಿಯೂತ ಶಮನಕಾರಿ ಗುಣ ಹೊಂದಿದೆ. ಶುಂಠಿಯು ಹೊಟ್ಟೆಯ ಸಮಸ್ಯೆ ಹಾಗೂ ವಾಂತಿ ಕಡಿಮೆ ಮಾಡುವುದು ಎಂದು ಹೇಳಲಾಗುತ್ತದೆ.
ಒಂದು ದೊಡ್ಡ ಬಟ್ಟಲು ತಣ್ಣೀರು ಮತ್ತು ನಿಂಬೆ ರಸವನ್ನು ಕನಿಷ್ಠ ಒಂದು ವಾರದವರೆಗೆ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.
ಕೊತ್ತಂಬರಿ ಬೀಜದಿಂದ ಎದೆ ನೋವಿಗೆ ಮುಕ್ತಿ
ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ. ಈ ಪುಡಿಯನ್ನು ನೀರಿನಲ್ಲಿ ನೆನೆ ಹಾಕಿ ಚೆನ್ನಾಗಿ ಕುದಿಸಿ, ಆರಿಸಿ ಆ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಬರುವ ಎದೆ ನೋವು ಕಾಡುವುದಿಲ್ಲ.
ಅರಶಿನವು ಉರಿಯೂತ ಶಮನಕಾರಿ ಆಗಿದೆ ಮತ್ತು ಇದು ಎದೆ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಶಿನ ಹಾಕಿ ಕುಡಿದರೆ ಅದರಿಂದ ನೋವು ನಿವಾರಣೆ ಆಗುವುದು. ಅರಶಿನದಲ್ಲಿ ಇರುವಂತಹ ಕೆಲವೊಂದು ಗುಣಗಳು ಹೃದಯದ ಕಾಯಿಲೆ ಸಮಸ್ಯೆ ಕಡಿಮೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ. ಅರಶಿನವು ಕೊಲೆಸ್ಟ್ರಾಲ್ ನ್ನು ಕೂಡ ಕಡಿಮೆ ಮಾಡುವುದು
ಎಂದು ಅಧ್ಯಯನಗಳು ಕಂಡುಕೊಂಡಿದೆ