ಎದೆನೋವು : ಚಿರಯುವಕ ಸಾವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.24 :- ಎದೆನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಯಲ್ಲಿ  21 ರ ಚಿರಯುವಕ ಶುಕ್ರವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಜರುಗಿದೆ.
ಸಿದ್ದಾಪುರ ಶಿವಕುಮಾರ (21) ಎದೆನೋವಿನಿಂದ ಮೃತಪಟ್ಟ ಯುವಕನಾಗಿದ್ದಾನೆ. ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದು ಶುಕ್ರವಾರ ಸಂಜೆ ಸಿದ್ದಾಪುರ ಗ್ರಾಮದ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ  ಚಿಕಿತ್ಸೆ ಫಲಕಾರಿಯಾಗದೆಅದೇದಿನ  ರಾತ್ರಿ ಮೃತಪಟ್ಟಿದ್ದು ಇದ್ದೊಬ್ಬ ಮಗನನ್ನು ಕಳಕೊಂಡ ಪಾಲಕರ ರೋಧನೆ ಹೇಳತೀರದು, ಮೃತ ಶಿವಕುಮಾರನ  ತಂದೆ – ತಾಯಿ ಸೇರಿದಂತೆ ಅಪಾರ ಸ್ನೇಹಿತರು ಬಂಧುಬಳಗ, ಶಿಕ್ಷಕ ವರ್ಗ ಹಾಗೂ ಇತರರನ್ನು ಅಗಲಿದ್ದು ಶನಿವಾರ  ಮಧ್ಯಾಹ್ನ ಮೃತ ಯುವಕನ ಅಂತ್ಯಕ್ರಿಯೆ ಜರುಗಿದೆ.