ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಮಹೇಶ್ ಚೇತರಿಕೆ

ಚಾಮರಾಜನಗರ, ಮಾ.13:- ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಮಹೇಶ್ ಅವರಿಗೆ ಶನಿವಾರ ದಿಢೀರ್‍ಎದೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ವೈದ್ಯರು ಆಂಜಿಯೋಗ್ರಾಂ ಮಾಡಿದ ಬಳಿಕ ಗಾಬರಿಯಾಗುವ ಸಮಸ್ಯೆ ಇಲ್ಲ ಎಂದು ಸ್ವತಃ ಶಾಸಕರು ಹಾಗೂ ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ನಿನ್ನೆ ನಿಧನರಾಗಿದ್ದ ದೃವನಾರಾಯಣ್ ಅವರ ಅಂತಿಮ ದರ್ಶನವನ್ನು ಮೈಸೂರಿನ ವಿಜಯನಗರದ ಧ್ರುವನಾರಾಯಣ್ ನಿವಾಸದಲ್ಲಿ ಪಡೆದುತಮ್ಮ ಸ್ವಕ್ಷೇತ್ರ ಕೊಳ್ಳೆಗಾಲದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣಅವರನ್ನು ಸ್ಥಳೀಯ ಕೊಳ್ಳೆಗಾಲ ಆಸ್ಪತ್ರೆಗೆ ತಪಾಸಣೆಗೆ ಕರೆದುಕೊಂಡು ಹೋಗಲಾಯಿತು.
ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡಎಂದು ಶಾಸಕರಿಗೆ ಹೇಳಿ ಅವರನ್ನು ನಿನ್ನೆಯೇ ಮೈಸೂರಿನ ಅಪೆÇೀಲೋ ಬಿಜಿಎಸ್‍ಆಸ್ಪತ್ರೆಗೆ ಕಳುಹಿಸಿದ್ದರು. ಎನ್.ಮಹೇಶ್ ಅವರೆ ದಿಢೀರ್ ಎದೆ ನೋವು ಕಾಣಿಸಿಕೊಂಡಿದ್ದ ಘಟನೆ ಕೊಳ್ಳೇಗಾಲ ಕ್ಷೇತ್ರದ ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿತ್ತು.
ಇಸಿಜಿ, ಆಂಜಿಯೋ ಗ್ರಾಂ ಚಿಕಿತ್ಸೆ: ಅಲ್ಲಿಅವರಿಗೆ ಇಸಿಜಿ ಸೇರಿದಂತೆಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದೆ. ಹೃದಯ ಭಾಗದಲ್ಲಿ ಸ್ವಲ್ಪ ಬ್ಲಾಕ್ ಆಗಿರುವುದು ಗೊತ್ತಾಗಿದ್ದು, ಶನಿವಾರ ಸಂಜೆಯೇ ಅವರಿಗೆ ಆಂಜಿಯೋಗ್ರಾಂ ಮಾಡಲಾಗಿದೆ. ಈಗ ಅವರಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಸೋಮವಾರಅವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗುವುದು ಎಂದು ಅಪೆÇೀಲೋ ಆಸ್ಪತ್ರೆಯ ಉಪಾಧ್ಯಕ್ಷಡಾ ಭರತ್ ರೆಡಿ ್ಡಅವರು ತಿಳಿಸಿದ್ದಾರೆ.