ಮದ್ದೂರು: ಜೂ.17:- ಅಭಿಷೇಕ್ ಮತ್ತು ಅವಿವಾ ದಂಪತಿಯ ಫೆÇೀಟೋವನ್ನು ಎತ್ತಿನ ಬೆನ್ನಮೇಲೆ ಬಿಡಿಸಿ ಅಂಬಿ ಪುತ್ರನಿಗೆ ಸಪ್ರ್ರೈಸ್ ನೀಡಿದ್ದಾರೆ ಮಂಡ್ಯ ಅಭಿಮಾನಿ. ವಿಶೇಷ ಗಿಫ್ಟ್‍ಗೆ ಅಭಿಷೇಕ್ ದಂಪತಿ ಫಿದಾ ಆಗಿದ್ದಾರೆ.
ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಜೂನ್ 5ರಂದು ಬಹುಕಾಲದ ಗೆಳತಿ ಅವಿವಾ ಬಿದಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫ್ಯಾಷನ್ ಡಿಸೈನರ್ ಅವಿವಾ ಬಿದಪ ಮತ್ತು ಅಭಿಷೇಕ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಪತಿ ಪತ್ನಿಯರಾಗಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ಅಭಿ-ಅವಿವಾ ಮದುವೆಗೆ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು. ಜೂನ್ 5ರಂದು ದಾಂಪತ್ಯ ಕಾಲಿಟ್ಟ ಅವಿವಾ ಮತ್ತು ಅಭಿಷೇರ್ ಜೂನ್ 7ರಂದು ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡರು.ಅಭಿಷೇಕ್ ಕುಟುಂಬ. ಅಭಿಮಾನಿಗಳಿಗೆ ಬೀಗರೂಟಕ್ಕೆ ಆಹ್ವಾನ ನೀಡಲಾಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳು ಬೀಗರೂಟಕ್ಕೆ ಹಾಜರಾಗಿ ಭರ್ಜರಿ ಊಟ ಸವಿದರು.
ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಕಾರ್ಯಕ್ರಮ ನಡೆದಿದೆ. ಅದೇ ಸ್ಥಳದಲ್ಲಿ ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟಿಸಿದ್ದರು. ಅದೇ ಜಾಗದಲ್ಲಿ ಅದ್ದೂರಿಯಾಗಿ ಬೀಗರೂಟ ನಡೆದಿದೆ.
ಅಭಿಷೇಕ್ ಮತ್ತು ಅವಿವಾ ಜೋಡಿಗೆ ಮಂಡ್ಯ ಅಭಿಮಾನಿ ವಿಶೇಷ ಗಿಫ್ಟ್ ನೀಡಿದ್ದಾರೆ. ಎತ್ತಿನ ಬೆನ್ನ ಮೇಲೆ ಅಭಿಷೇಕ್ ಮತ್ತು ಅವಿವಾ ಫೆÇೀಟೋ ಬಿಡಿಸಿಕೊಂಡಿದ್ದರು. ಅಭಿಷೇಕ್ ದಂಪತಿ ವಿಶೇಷ ಗಿಫ್ಟ್ ಜೊತೆ ನಿಂತು ಫೆÇೀಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಅಭಿಷೇಕ್ ಮತ್ತು ಅವಿವಾ ಇಬ್ಬರೂ ಎತ್ತಿನ ಪಕ್ಕದಲ್ಲಿ ನಿಂತು ಸಂಭ್ರಮಿಸಿದ್ದಾರೆ. ಅಭಿಮಾನಿಯ ಪ್ರೀತಿಗೆ ಮನ ಸೋತಿದ್ದಾರೆ. ಜೊತೆಯಲ್ಲಿ ಸುಮಲತಾ ಕೂಡ ಇದ್ದರು.
ಎತ್ತಿನ ಮೇಲೆ ಅಭಿಷೇಕ್ ಮತ್ತು ಅವಿವಾ ಫೆÇೀಟೋ ಜೊತೆಗೆ ತೇಜಗೌಡ ಚೀರನಹಳ್ಳಿ ಎಂದು ಬರೆಸಿಕೊಳ್ಳಲಾಗಿದೆ. ತೇಜಗೌಡ ಅವರ ಎತ್ತಿನ ಜೊತೆ ಅಭಿ ದಂಪತಿ ಇರುವ ಫೆÇೀಟೋ ವೈರಲ್ ಆಗಿದೆ. ಅಭಿಷೇಕ್ ಬಿಳಿ ಪಂಚೆ ಮತ್ತು ಶರ್ಟ್ ಧರಿಸಿದ್ದರು. ಅವಿವಾ ಗುಲಾಬಿ ಬಣ್ಣದ ಸೀರೆ ಮತ್ತು ಗೋಲ್ಡವ್ ಬ್ಲೌಸ್‍ನಲ್ಲಿ ಮಿಂಚಿದ್ದಾರೆ.
ಬೀಗರ ಔತಣ ಕೂಟಕ್ಕೆ ಜಿಲ್ಲೆಯಿಂದ ಸಾವಿರಾರು ಮಂದಿ ಅಂಬರೀಶ್ ಅಭಿಮಾನಿಗಳು ತಂಡೋಪತಂಡವಾಗಿ ಬಂದು ಊಟ ಸವಿದರು, ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗೆಜ್ಜಲಗೆರೆ ಕಾಲೋನಿಯ ಗ್ರಾಮದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಔತಣಕೂಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು ಮಂಡ್ಯ ಇತಿಹಾಸದಲ್ಲೇ ದೊಡ್ಡ ಮಟ್ಟದ ಬಾಡೂಡ ಕಾರಯಕ್ರಮ ನೆರವೇರಿದ್ದು ಸುಮಾರು 50ರಿಂದ 60 ಸಾವಿರ ಮಂದಿ ಜೊತೆಗೆ ಗಣ್ಯಾತಿಗಣ್ಯರು ಔತಣ ಕೂಟದಲ್ಲಿ ಪಾಲ್ಗೊಂಡರು,
ಮಂಡ್ಯ ಶೈಲಿಯಲ್ಲಿ ಬಾಡೂಟವನ್ನು ತಯಾರು ಮಾಡುವುದರ ಜೊತೆಗೆ 8 ಟನ್ ಮಟನ್ ಮಾಂಸ 10 ಟನ್ ಕೋಳಿ ಮಾಂಸ ಖಾದ್ಯಕ್ಕೆ ಬಳಸಲಾಗಿದ್ದು ಅಂಬರೀಶ್ ಅವರಿಗೆ ನೆಚ್ಚಿನ ಊಟವಾದ ಬೋಟಿ ಗೊಜ್ಜು ನಾಟಿ ಕೋಳಿ, ಚಿಕನ್ ಕಬಾಬ್, ಮಟನ್ ಬಿರಿಯಾನಿ, ಮೊಟ್ಟೆ ರಾಗಿ ಮುದ್ದೆ, ಅನ್ನ, ಸಾಂಬಾರ್, ರಸಂ, ಇನ್ನಿತರೆ ಹಲವು ಬಗೆಯ ಉಟೋಪಚಾರಗಳನ್ನು ಅಭಿಮಾನಿಗಳಿಗೆ ಉಣ ಬಡಿಸಲಾಯಿತು,
ನಿರೀಕ್ಷೆಗೂ ಮೀರಿ ಸಾವಿರಾರು ಮಂದಿ ಬೀಗರ ಔತಣ ಕೂಟದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ನೂಕು ನುಗ್ಗಲು ಆರಂಭವಾಯಿತಲ್ಲದೆ ಪೆÇಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತ ಸ್ಥಿತಿ ನಿರ?ಮಾಣಗೊಂಡು ಕೆಲವರಿಗೆ ಲಾಠಿ ರುಚಿ ತೋರಿಸಿದ ಪ್ರಸಂಗವು ಜರುಗಿತು,
ಸಂಚಾರ ಅಸ್ತವ್ಯಸ್ತ
ಅಧಿಕ ಸಂಖ್ಯೆಯಲ್ಲಿ ವಾಹನಗಳು ದ್ವಿಚಕ್ರ ವಾಹನಗಳು ಆಗಮಿಸಿದ ಹಿನ್ನೆಲೆಯಲ್ಲಿ ಮೈಸೂರು ಬೆಂಗಳೂರು ಹೆದ್ದಾರಿಯ ಸರ?ವಿಸ್ ರಸ್ತೆಯಲ್ಲಿ ಸಂಚಾರ ಹಸ್ತವ್ಯಸ್ತ ಗೊಂಡಿತಲ್ಲದೆ ಪ್ರಯಾಣಿಕರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ?ಮಾಣ ವಾಯಿತು,
ಸಸ್ಯಾಹಾರಿ ಊಟ
ಸುಮಾರು 500 ಮಂದಿಗೆ ಸಸ್ಯಾಹಾರಿ ಊಟದ ವ್ಯವಸ್ಥೆ ಕಲ್ಪಿಸಲಾಗಿತಲ್ಲದೆ ಪ್ರತ್ಯೇಕವಾಗಿ ಗಣ್ಯವ್ಯಕ್ತಿಗಳಿಗೆ ಮತ್ತು ವಿಶೇಷ ಅಹ್ವಾನಿತರಿಗೆ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗಿತ್ತು,
ಔತಣ ಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್, ಚಲುವರಾಯಸ್ವಾಮಿ, ಶಾಸಕರಾದ ಗಣಿಗ ರವಿಕುಮಾರ್, ಮಧು ಜಿ ಮಾದೇಗೌಡ, ದಿನೇಶ್ ಗೂಳಿ ಗೌಡ, ಸ್ಥಳಿಯ ಬಿಜೆಪಿ ಮುಖಂಡ ಎಸ್ ಪಿ ಸ್ವಾಮಿ ಹಾಗೂ ಇತರರು ಪಾಲ್ಗೊಂಡು ದಂಪತಿಗಳಿಗೆ ಶುಭ ಹಾರೈಸಿದರು.