
ಸೇಡಂ: ಮಾ.11:ರೈತರ ಸಂಕಷ್ಟಗಳಿಗೆ ಮಿಡಿಯುತ್ತಾ, ತಮ್ಮ ರೈತಪರ ನಿಲುವುಗಳಿಂದಲೇ ರೈತರಿಗೆ ಹತ್ತಿರವಾಗಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸೇಡಂ ಕ್ಷೇತ್ರದ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿಯವರು
ಸದಾ ಒಂದಿಲ್ಲೊಂದು ರೀತಿಯಲ್ಲಿ ರೈತಪರವಾಗಿ ಕಾರ್ಯಗಳನ್ನು ಮಾಡಲು ಹಾತೊರೆಯುವ ರೈತಪರ ಕಾಳಜಿ ಹೊಂದಿರುವ ನಿಜವಾದ ರೈತರಾಗಿದ್ದಾರೆ.
ಒಬ್ಬ ರೈತನ ಕಷ್ಟ ಇನ್ನೊಬ್ಬ ರೈತನಿಗಷ್ಟೇ ಅರಿವಾಗುತ್ತದೆ ಎನ್ನುವುದಕ್ಕೆ ಜಿ ಲಲ್ಲೇಶ್ ರೆಡ್ಡಿಯವರ ಈ ನಡೆಯೇ ನೈಜ ನಿದರ್ಶನವಾಗಿದೆ.
ಇಂದು ಬೆನಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಎತ್ತಿನ ಬಂಡಿ ಓಡಿಸಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಅನೇಕ ತೊಂದರೆಗಳಿಂದ ರೈತರು ಆತ್ಮಹತ್ಯೆಯಂತಹ ದಾರಿ ತುಳಿಯುತ್ತಿದ್ದಾರೆ ಅಂತಹ ಕಠಿಣ ನಿರ್ಧಾರಕ್ಕೆ ರೈತರು ಯಾವತ್ತೂ ಬರಬಾರದು ರೈತ ಸಂಕುಲದೊಂದಿಗೆ ಸದಾಕಾಲ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಇದ್ದೆ ಇರುತ್ತದೆ ಎಂದು ಇದೇ ವೇಳೆ ರೈತರಿಗೆ ಬೆಂಬಲವಾಗಿ ನಿಂತರು.
ಈ ವೇಳೆಯಲ್ಲಿ ಶಿವಲಿಂಗ ರೆಡ್ಡಿ ಪಾಟೀಲ ಬೆನಕನಹಳ್ಳಿ, ರಾಘವೇಂದ್ರ ಅಗನೂರು, ಪ್ರವೀಣ್ ಕುಲಕರ್ಣಿ, ಗಿರೀಶ್ ನಾಗರಾಳ್, ಭೀಮಾಶಂಕರ ಕೊರವಿ ಸೇರಿದಂತೆ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.