ಎತ್ತಿನ ಬಂಡಿಗಳ ಮೂಲಕ ಸ್ವೀಪ್ ಜಾಥಾ

ಕಲಬುರಗಿ,ಏ.30-ಜಿಲ್ಲೆಯ ಸೇಡಂ ನಗರದಲ್ಲಿ ಸಂತೆ ದಿನವಾದ ಇಂದು ತಾಲೂಕ ಸ್ವೀಪ್ ಸಮಿತಿಯಿಂದ ಶ್ರೀ ಕೊತ್ತಲಬಸವೇಶ್ವರ ದೇವಾಲಯ ದಿಂದ ಎತ್ತಿನ ಬಂಡಿಗಳು ಮತ್ತು ಗ್ರಾ.ಪಂ ಆಟೋ ಟ್ರಾಲಿಗಳ* ಮೂಲಕ ಕಡ್ಡಾಯ ಮತದಾನ ಮಾಡುವ ಕುರಿತು ಜಾಗೃತಿ ಸ್ವೀಪ್ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಂಕರ್ ರಾಥೋಡ್ ಹಾಗೂ ಪುರಸಭೆಯ ಮುಖ್ಯ ಅಧಿಕಾರಿಗಳಾದ
ಯೇಸು ಬೆಂಗಳೂರ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎತ್ತಿನ ಬಂಡಿಯ ಜಾಥವೂ ಚೌರಸ್ತಾ, ಕಿರಣಾ ಬಜಾರ್, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಮೂಲಕ ಬಸವೇಶ್ವರ ವೃತ್ತ (ಕಲ್ಬುರ್ಗಿ ಕ್ರಾಸ್) ಹತ್ತಿರ ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾವಿಧಿಯನ್ನು ಮಾಡಲಾಯಿತು. ತಾಲೂಕ ಪಂಚಾಯತ ಯೋಜನಾ ಅಧಿಕಾರಿಗಳು, ಎ.ಡಿ. ನರೇಗಾ ವ್ಯವಸ್ಥಾಪಕರು, ಎಡಿಪಿಆರ್ ತಾ.ಪಂ ಸಿಬ್ಬಂದಿಗಳು, ಟಿಐಇಸಿ, ಡಿಇಒ , ಎನ್‍ಆರ್‍ಎಲ್‍ಎಮ್ ಟಿಪಿಎಂ ಹಾಗೂ ಆಡಕಿ ತೆಲ್ಕೂರ್,ರಂಜೋಳ,ಯಡಗಾ, ನೀಲಹಳ್ಳಿ, ರಿಬ್ಬನ್ ಪಲ್ಲಿ, ಬೆನಕನಹಳ್ಳಿ ಪಿಡಿಒ ರವರು,ಕರ ವಸಲಿಗಾರರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಮತ್ತು ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.