ಎತ್ತಿನ ಗಾಡಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಸ್ಥಳದಲ್ಲೇ ಎತ್ತುಗಳು ಸಾವು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.23: ತಾಲೂಕಿನ ತೆಕ್ಕಲಕೋಟೆಯ ಕಾಲುವೇ ಹತ್ತಿರ ಸಿರುಗುಪ್ಪ ಮಾರ್ಗವಾಗಿ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಎರಡು ಎತ್ತುಗಳು ಸಾವನೊಪ್ಪಿದ್ದು, ಎತ್ತುಗಳ ಮಾಲೀಕ ಶೇಕ್ಷವಲಿ(40) ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿ.ಎಸ್.ಐ ರಮೇಶ ರಾಥೋಢ ತಿಳಿಸಿದರು.