ಎತ್ತಿನಬೂದಿಹಾಳನಲ್ಲಿ ಡಕಾಯಿತಿ
ಮಹಿಳೆ ಮೇಲೆ ಹಲ್ಲೆ ನಗದು ಚಿನ್ನ ದೋಚಿ ಪರಾರಿ.


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,28- ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದಲ್ಲಿ ನಾಲ್ವರು ದುಷ್ಕರ್ಮಿಗಳು ನಿನ್ನೆ ರಾತ್ರಿ ಮನೆಗೆ ನುಗ್ಗಿ ಮಹಿಳೆ ಮತ್ತು ಬಾಲಕನ ಮೇಲೆ ಹಲ್ಲೆ ನಡೆಸಿ, ನಗದು ಹಣ, ಚಿನ್ನ ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿ  ದೊಡ್ಡಬಸಪ್ಪ ಕುರಿಹಟ್ಟಿ ಇದೆ ಪಕ್ಕದಲ್ಲೆ ಮನೆ ಇದ್ದು. ರಾತ್ರಿ 10 ಗಂಟೆ ಸುಮಾರಿಗೆ  ಮನೆಗೆ ನುಗ್ಗಿ ಬೀರುವ  ಮುರಿದು ಅದರಲ್ಲಿದ್ದ ಒಂದು ಲಕ್ಷದ 28 ಸಾವಿರ ರೂ ನಗದು ಮತ್ತು ಎರಡು ತೊಲೆ ಚಿನ್ನದ ಸರ ತೆಗೆದುಕೊಂಡು ಹೋಗುವಾಗ.‌ ಮನೆಯಲ್ಲಿ ಮಲಗಿದ್ದ ದೊಡ್ಡಬಸಪ್ಪ ಅವರ ಪತ್ನಿ ಲಕ್ಷ್ಮಿ  ಮತ್ತು ಪುತ್ರ ಪ್ರತಾಪ್ ಎಚ್ಚರಗೊಂಡು  ದರೋಡೆಕೋರರನ್ನು ತಡೆಯಲು ಹೋದಾಗ ರಾಡ್ ಮತ್ತು ಪಿಕಾಸಿಯಿಂದ ತಲೆಗೆ ಹೊಡೆದಿದ್ದಾರೆ. ಆಗ ಅವರು ಅರಚಿದ ಶಬ್ದ ಕೇಳಿ ಕುರಿಹಟ್ಟಿಯಲ್ಲಿ ಮಲಗಿದ್ದ ದೊಡ್ಡಬಸಪ್ಪ ಬಂದಾಗ ಆತನಿಗೂ ಹೊಡೆದು ಪರಾರಿಯಾಗಿದ್ದಾರೆ.
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿರುವ ದೊಡ್ಡಬಸಪ್ಪನ ಹೇಳಿಕೆ ಪ್ರಕಾರ. ತಮ್ಮ ಗ್ರಾಮದವರೇ ಆದ ಭರತ್, ಮಣಿಕಂಠ, ಪವನ್ ಮತ್ತು ಗಣೇಶ್ ಎಂಬುವವರೇ ಈ ಕೃತ್ಯ ಎಸಗಿದ್ದಾರೆಂದು ಹೇಳಿದ್ದಾರೆ.
ಕೃತ್ಯ ಎಸಗಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಗ್ರಾಮಸ್ಥರು ಠಾಣೆಮುಂದೆ ಇಂದು ಜಮಾಯಿಸಿದ್ದರು.