ಎತ್ತಿನಗಾಡಿಗೆ ಮಿನಿ ಲಾರಿ ಡಿಕ್ಕಿ ಒಂದು ಎತ್ತು ಸಾವು.

ಕೂಡ್ಲಿಗಿ.ಏ.20:- ಕೂಡ್ಲಿಗಿಯಿಂದ ಬಳ್ಳಾರಿ ಕಡೆಗೆ ಹೊರಟಿದ್ದ ಮಿನಿ ಲಾರಿಯೊಂದು ಎದುರಿಗೆ ಬರುತಿದ್ದ ಟಯರ್ ನ ಎತ್ತಿನಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತೊಂದು ಸ್ಥಳದಲ್ಲೇ ಸಾವನ್ನಪ್ಪಿದ್ದು ಅದರಲ್ಲಿದ್ದ ರೈತ ಹಾಗೂ ಇನ್ನೊಂದು ಎತ್ತು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ನಸುಕಿನ ಜಾವ 5-30 ಗಂಟೆಗೆ ಗುಡೇಕೋಟೆ ಹೊರವಲಯದಲ್ಲಿ ಜರುಗಿದೆ. ಗುಡೇಕೋಟೆ ಗ್ರಾಮದ ನಾಗರಾಜ ಎಂಬ ರೈತ ತನ್ನ ಟಯರ್ ಗಾಡಿಯಲ್ಲಿ ಹೊಲದ ಕಡೆ ಇಂದು ನಸುಕಿನ ಜಾವ ಹೋಗುತ್ತಿರುವಾಗ್ಗೆ ಕೂಡ್ಲಿಗಿ ಕಡೆಯಿಂದ ಬಳ್ಳಾರಿ ಕಡೆ ಹೊರಟಿದ್ದ ಮಿನಿಲಾರಿ ಚಾಲಕ ಅತಿವೇಗ ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ಎದುರಿಗೆ ಬರುತಿದ್ದ ಎತ್ತಿನಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಎತ್ತೊಂದು ಸಾವನ್ನಪ್ಪಿದ್ದು ಇನ್ನೊಂದು ಎತ್ತು ಮತ್ತು ರೈತ ನಾಗರಾಜ ಯಾವುದೇ ಗಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಪ್ರಕರಣ ಇನ್ನು ದಾಖಲಾಗಬೇಕಿದೆ.