ಎತ್ತಿನಗಾಡಿಗೆ ಬೈಕ್ ಡಿಕ್ಕಿ : ಮೂವರಿಗೆ ಗಾಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 7- ಹೊಲದಿಂದ ಗ್ರಾಮದೊಳಗೆ ಬರುತ್ತಿದ್ದ ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಇಮಡಾಪುರ ಬಳಿಯ ಹೈವೇ50 ರ ಸರ್ವೀಸ್ ರಸ್ತೆಯಂಚಿನಲ್ಲಿ ಮಂಗಳವಾರ ಸಂಜೆ ಜರುಗಿದೆ.
ಕೂಡ್ಲಿಗಿ ತಾಲೂಕಿನ ಆಲೂರಿನ ಬೈಕ್ ಸವಾರ ಹರೀಶ (28), ಸಹಸವಾರ ಮಾರೇಶ (22) ಹಾಗೂ ಎತ್ತಿನಗಾಡಿಯಲ್ಲಿದ್ದ ವೃದ್ಧ ತಿಮ್ಮಪ್ಪ (70) ಗಾಯಾಳುಗಳಾಗಿದ್ದಾರೆ.
ಇಮಡಾಪುರದಿಂದ ಹೊಸಹಳ್ಳಿ ಕಡೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸವಾರ ಹರೀಶನ ಅತಿವೇಗ ಅಜಾಗರೂಕತೆಯಿಂದ ಅಜಾಗರೂಕತೆಯಿಂದ ಎತ್ತಿನಗಾಡಿಗೆ ಡಿಕ್ಕಿ ಹೊಡೆದಿರುವ ಬಗ್ಗೆ ತಿಳಿದಿದ್ದು ತಕ್ಷಣ ಗಾಯಾಳುಗಳನ್ನು ಇಮಡಾಪುರ ಗ್ರಾಮದ ಸ್ಥಳೀಯರು, ರಾಷ್ಟ್ರೀಯ ಹೆದ್ದಾರಿ ಗ್ರೂಪ್ ಸದಸ್ಯರು ಹಾಗೂ ಹೈವೆ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಎಎಸ್ ಐ ದುರುಗಪ್ಪ, ಪೇದೆ ಸ್ವಾಮಿ ಸೇರಿ ಇತರರು ಆಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದಾರೆ.ಗಾಯಾಳು ಎತ್ತಿನಗಾಡಿಯ ತಿಮ್ಮಪ್ಪನ ಮಗ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.