ಎತ್ತಪೋತ ಪ್ರವಾಸಿತಾಣದ ಅಭಿವೃದ್ದಿಗೆ 2 ಕೋಟಿ: ಸಚಿವ ಯೋಗೇಶ್ವರ ಭರವಸೆ

ಚಿಂಚೋಳಿ,ಏ.5- ತಾಲೂಕಿನ ತೆಲಂಗಾನ ಗಡಿ ಪ್ರದೇಶದ ಎತ್ತಪೋತಕೆ ಪ್ರವಾಸಿತಾಣಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೊಗೇಶ್ವರ ಅವರು ಇಂದು ಭೇಟಿ ನೀಡಿ ಪರಿಶಿಲಿಸಿದರು.
ಇಲ್ಲಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಸಿ.ಪಿ.ಯೊಗೇಶ್ವರ ಅವರು, ಎತ್ತಪೆÇೀತ ಅಭಿವೃದ್ದಿಗಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ಲೋಕಸಭೆ ಸದಸ್ಯರಾದ ಡಾ. ಉಮೇಶ ಜಾಧವ. ಚಿಂಚೋಳಿ ಶಾಸಕರಾದ ಡಾ. ಅವಿನಾಶ ಜಾಧವ. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲ ಕುಮಾರ ರಾಠೋಡ. ತಹಸೀಲ್ದಾರ ಅರುಣ್ ಕುಮಾರ್ ಕುಲಕರ್ಣಿ. ಸಿಪಿಐ ಮಹಾಂತೇಶ ಪಾಟೀಲ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಪ್ರಭುಲಿಂಗ. . ಅರಣ್ಯ ಇಲಾಖೆಯ ಪ್ರಾದೇಶಿಕ ವಲಯ ಅಧಿಕಾರಿಗಳಾದ ಮುನೀರ ಅಹ್ಮದ. ವಲಯ ಅರಣ್ಯ ಅಧಿಕಾರಿಗಳಾದ ಸಂಜುಕುಮಾರ ಚವ್ಹಾಣ. ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿಗಳಾದ ಅಜೀತ ಪಾಟೀಲ. ಚಿಂಚೋಳಿಯ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ್ ಗಡಂತಿ. ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಸಿಂಗ್ ಠಾಕೂರ. ತಾಲೂಕ ಪಂಚಾಯತ ಸದಸ್ಯರಾದ ಪ್ರೇಮ ಸಿಂಗ ಜಾಧವ. ಬಿಜೆಪಿ ಪಕ್ಷದ ಯುವ ಮೋರ್ಚಾ ತಾಲೂಕ ಅಧ್ಯಕ್ಷರಾದ ಸತೀಶರೆಡ್ಡಿ ತಾಜಲಾಪೂರ. ಬಿಜೆಪಿ ಅಶೋಕ ಚವ್ಹಾಣ. ರಾಜು ಪವಾರ. ಲಕ್ಷ್ಮಣ ಅವುಂಟಿ. ಶ್ರೀಮಂತ ಕಟ್ಟಿಮನಿ. ವಿಜಯಕುಮಾರ ರಾಠೋಡ ಶಾದಿಪುರ್. ಶಿವಯೋಗಿ ರುಸ್ತಂಪುರ. ಪವನ ಕುಮಾರ ಗೋಪನಪಳ್ಳಿ. ಗಿರಿರಾಜ ನಾಟಿಕರ. ಅಲ್ಲಂಪ್ರಭು ಪಾಟೀಲ ಹುಲಿ. ಹಣಮಂತ ಗರಂಪಳ್ಳಿ. ಶ್ರೀನಿವಾಸ್ ಚಿಂಚೋಲಿಕರ. ಮತ್ತು ಅನೇಕ ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.