ಎಣ್ಣೆಕಾಳುಗಳ ಸಂಸ್ಕರಣೆ ಕಾರ್ಯಕ್ರಮ

ಲಿಂಗಸುಗೂರು.ಜು.೨೨- ಪಟ್ಟಣದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ,ಎಣ್ಣೆಕಾಳುಗಳ ಸಂಸ್ಕರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಡಾ.ವಾಣಿಶ್ರೀ ಎಸ್. ಇವರು ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಇತ್ತೀಚೆಗೆ ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ತುಂಬಾ ಮುತುವರ್ಜಿವಹಿಸಬೇಕಾಗಿದೆ. ಏಕೆಂದರೆ ಶುದ್ಧವಾದ ಎಣ್ಣೆಯ ಬದಲು ನಾವು ಕಲಬೆರಕೆ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಇದರಿಂದಾಗಿ ಅತೀ ಬೇಗನೆ ಆರೋಗ್ಯ ಹಾಳಾಗಿ ಹಲವಾರು
ರೋಗಗಳಿಂದ ಬಾಧಿಸುತ್ತಿದ್ದಾರೆ. ನಮಗೆ ದಿನ ನಿತ್ಯ ಆಹಾರ ತಯಾರಿಕೆಯಲ್ಲಿ ಎಣ್ಣೆ ಅತಿ ಮುಖ್ಯವಾದ ಪಾತ್ರವಹಿಸುತ್ತದೆ.
ಆದ್ದರಿಂದ, ಪರಿಶುದ್ಧ ಎಣ್ಣೆಯನ್ನು ಬಳಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಶುದ್ಧ ಎಣ್ಣೆ ತೆಗೆಯುವ ಕ್ರಮಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳವಂತೆ ತಿಳಿಸಿದರು.
ನಂತರ ರಾಯಚೂರು ಕೃವಿವಿ ಇಂಪಿಎಫ್ ಮಠದ್ ಮಾತನಾಡಿ, ಎಣ್ಣೆ ತೆಗೆಯುವ ವಿಧಾನಗಳನ್ನು ಕೂಲಂಕುಷವಾಗಿ ತಿಳಿಸುವುದರ ಜೊತೆಗೆ ಎಣ್ಣೆಯ ಕಚ್ಚಾ ಸಾಮಾಗ್ರಿಗಳ ತಯಾರಿಕೆ, ಪರಿಕರಗಳ ಕ್ರೋಢೀಕರಣ, ಆಹಾರ ಉತ್ಪಾದನೆಗೆ ಸಂಬಂಧಿಸಿದ ಲೈಸೆನ್ಸ್, ಪ್ಯಾಕೇಜ್ ಮಾಡುವ ವಿಧಾನ, ಶುದ್ಧ ಎಣ್ಣೆ ಮತ್ತು ಕಲಬೆರೆಕೆ ಎಣ್ಣೆಯ ವ್ಯತ್ಯಾಸಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಅರವಿಂದ, ಶರಣಗೌಡ, ಶರಣಪ್ಪ ಹೊಳೆಯಾಚೆ,
ಮುತ್ತಣ್ಣ, ನಾಗವೇಣಿ, ಶಾಂತಗೌಡ, ಶಿವಲೀಲಾ, ಸವಿತಾ ರೈತ ಉತ್ಪಾದಕ ಸಂಘಗಳ ಪ್ರತಿನಿಧಿಗಳಾದ ಲೋಕೆಶ, ಶ್ರೀಕಾಂತ ಪಾಟೀಲ್ ಸೇರಿದಂತೆ ಇದ್ದರು.