ಎಡಿಜಿಪಿ ಕೆ.ವಿ.ಶರತ್ ಚಂದ್ರ ಅವರ ತಾಯಿ ಕೆ.ಪಿ.ಶಾರದಮ್ಮ‌ ನಿಧನ

ಬೆಂಗಳೂರು, ಆ.22-ರಾಜ್ಯ ಗುಪ್ತದಳದ ನಿರ್ದೇಶಕರಾಗಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಕೆ.ವಿ.ಶರತ್ ಚಂದ್ರ ಅವರ ತಾಯಿ ಕೆ.ಪಿ.ಶಾರದಮ್ಮ‌ಅವರು ಇಂದು ನಿಧನರಾದರು.
ಹಾಸನ ಜಿಲ್ಲೆಯ ಕೂಣನೂರು ಮೂಲದ ಮೃತರಿಗೆ 81 ವರ್ಷ ವಯಸ್ಸಾಗಿತ್ತು, ಪತಿ ನಿವೃತ್ತ ಐಎಫ್ ಎಸ್ ಅಧಿಕಾರಿ ಕೆವಿಕೆ ಶೆಟ್ಟಿ ಪುತ್ರ ಶರತ್ ಚಂದ್ರ ಸೇರಿ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.
ಕೆಲ ದಿನಗಳಿಂದ ವಯೋಸಹೋಜ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ಪಿ.ಶಾರದಮ್ಮ‌ಅವರು ಇಂದು ಮಧ್ಯಾಹ್ನ 12ರ ವೇಳೆ ಚಿಕಿತ್ಸೆ ಫಲಕಾರಿಯಾಗದೇ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರಶಾಂತ್ ನಗರದ ಮನೆಯಲ್ಲಿ ಮೃತರ ಅಂತಿಮ ದರ್ಶನವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್, ಸಚಿವ ಮಧು ಬಂಗಾರಪ್ಪ ಶಾಸಕಿ ಉಮಾಶ್ರೀ,ಮಾಜಿ ಸಚಿವ ಸೋಮಣ್ಣ ಅವರ ಪಡೆದರು.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ,ಡಿಜಿ-ಐಜಿಪಿ ಅಲೋಕ್ ಮೋಹನ್,ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿ ಹಲವು ಹಿರಿಯ ಅಧಿಕಾರಿಗಳು ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಸುಮನಹಳ್ಳಿಯ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು.